ಕಿಡಿಗೇಡಿಗಳಿಂದ ಬಾಳೆ ತೋಟ ನಾಶ
ವಿಕ ಸುದ್ದಿಲೋಕ ಕಡೂರು (ಚಿಕ್ಕಮಗಳೂರು)
ತಾಲೂಕಿನ ಅಂಚೆಚೋಮನಹಳ್ಳಿ ಸಮೀಪದ ಡಿ.ಕಾರೇಹಳ್ಳಿ ಗ್ರಾಮದ ಚಂದ್ರಪ್ಪ ಅವರ ಫಸಲಿಗೆ ಬಂದಿದ್ದ ಬಾಳೆ ತೋಟವನ್ನು ಸೋಮವಾರ ರಾತ್ರಿ ಕಿಡಿಗೇಡಿಗಳು ನಾಶ ಮಾಡಿದ್ದಾರೆ.
ರೈತ ಚಂದ್ರಪ್ಪ ಅವರು ಅಂಚೆಚೋಮನಹಳ್ಳಿ ಸರ್ವೆ ನಂ.33ರ 2.30 ಎಕರೆ ಜಮೀನಿನಲ್ಲಿಲಕ್ಷಾಂತರ ರೂ. ವೆಚ್ಚ ಮಾಡಿ 1,500 ಬಾಳೆ ಸಸಿ ಬೆಳೆಸಿದ್ದರು. ಮುಂದಿನ ತಿಂಗಳು ಫಸಲು ಕೈ ಸೇರಲಿತ್ತು. ಅದರೆ, ಕಿಡಿಗೇಡಿಗಳು ಸೋಮವಾರ ರಾತ್ರಿ ತೋಟದಲ್ಲಿದ್ದ ಎಲ್ಲಬಾಳೆಗಿಡಗಳನ್ನು ಕತ್ತರಿಸಿದ್ದಾರೆ.
‘‘ತೋಟದಲ್ಲಿಕೊಳವೆ ಬಾವಿ ಕೊರೆಯಿಸಿ ಬಾಳೆ ಹಾಕಲು ಒಟ್ಟಾರೆ 5 ಲಕ್ಷ ರೂ. ಕೈಸಾಲ ಮಾಡಿದ್ದು, ಇನ್ನೊಂದು ತಿಂಗಳಲ್ಲಿಕನಿಷ್ಠ 15ರಿಂದ 20 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇತ್ತು. ರಾತ್ರೋರಾತ್ರಿ ಕಿಡಿಗೇಡಿಗಳು ಬಾಳೆ ಗಿಡಗಳನ್ನು ಕಡಿದು ಬದುಕಿಗೆ ಕೊಳ್ಳಿಇಟ್ಟಿದ್ದಾರೆ’’ ಎಂದು ರೈತ ಚಂದ್ರಪ್ಪ ಕಣ್ಣೀರಾದರು.
ಶ್ವಾನದಳದೊಂದಿಗೆ ತೋಟಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ರೈತ ಚಂದ್ರಪ್ಪ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಯುತ್ತಿದೆ. ಕಡೂರು ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
31ಚೇತನ್ ಪಿ-17
ಕಡೂರು ತಾಲೂಕು ಅಂಚೆಚೋಮನಹಳ್ಳಿಯಲ್ಲಿಕೃಷಿಕ ಚಂದ್ರಪ್ಪ ಅವರ ಬಾಳೆ ತೋಟವನ್ನು ಕಿಡಿಗೇಡಿಗಳು ಕಡಿದು ಹಾಕಿರುವುದು.

