ಚಿತ್ರಕಲೆ ಅನುಭವಗಳ ಅಭಿವ್ಯಕ್ತಿಯ ಮಾಧ್ಯಮ

Contributed byvenkatesh.narasappa@timesgroup.com|Vijaya Karnataka

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಯುಗಾದಿ ಚಿತ್ರಕಲಾ ಮಹೋತ್ಸವ ನಡೆಯಿತು. ಸಂಗೀತ ಮತ್ತು ಲಲಿತಕಲೆಗಳ ವಿಭಾಗದಲ್ಲಿ ದೃಶ್ಯಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳು ಸಾಮಾಜಿಕ ಸಂವೇದನೆ, ಪರಿಸರದ ಕಾಳಜಿ, ದೇಶ, ಭಾಷೆ, ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿದವು. ಪ್ರದರ್ಶನವು ಏಪ್ರಿಲ್ 2 ರವರೆಗೆ ನಡೆಯಿತು.

yugadi art and student talent exhibition

ಚಿತ್ರ: ಯುಗಾದಿ ಸಿಯುಕೆ

ಸಿಯುಕೆ ಸಂಗೀತ ಮತ್ತು ಲಲಿತಕಲೆಗಳ ವಿಭಾಗದಲ್ಲಿದೃಶ್ಯಕಲಾ ಪ್ರದರ್ಶನ ನಡೆಯಿತು.

**

ಸಿಯುಕೆಯಲ್ಲಿಯುಗಾದಿ ಚಿತ್ರಕಲಾ ಮಹೋತ್ಸವ

ಚಿತ್ರಕಲೆ ಅನುಭವಗಳ ಅಭಿವ್ಯಕ್ತಿಯ ಮಾಧ್ಯಮ

ವಿಕ ಸುದ್ದಿಲೋಕ ಕಲಬುರಗಿ

ಚಿತ್ರಕಲೆ ಭಾವನೆಗಳು ಮತ್ತು ಅನುಭವಗಳ ಅಭಿವ್ಯಕ್ತಿಯ ಮಾಧ್ಯಮವಾಗಿದ್ದು, ಅದು ಒಂದು ಜಾಗತಿಕ ಭಾಷೆಯಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಆರ್ .ಆರ್ .ಬಿರಾದಾರ್ ಹೇಳಿದರು.

ಇಲ್ಲಿನ ಸಂಗೀತ ಮತ್ತು ಲಲಿತಕಲೆಗಳ ವಿಭಾಗದಲ್ಲಿಏರ್ಪಡಿಸಿರುವ ದೃಶ್ಯಕಲಾ ಪ್ರದರ್ಶನ ಉದ್ಘಾಟಿಸಿ ಕಲಾಕೃತಿಗಳನ್ನು ವೀಕ್ಷಿಸಿದರು. ಯಾವುದೇ ಬಗೆಯ ಕಲೆಗಳು ಮನುಷ್ಯನಿಗೆ ಆನಂದ ಮತ್ತು ಸಂಸ್ಕಾರ ನೀಡುತ್ತವೆ. ಮನಸ್ಸಿನ ಒತ್ತಡ ಕಡಿಮೆ ಮಾಡುತ್ತವೆ. ಆರೋಗ್ಯ ವೃದ್ಧಿಸುತ್ತವೆ ಮತ್ತು ಜನರನ್ನೂ ಒಂದುಗೂಡಿಸುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಕಲೆಗಳಲ್ಲಿಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ರಚಿಸಿದ ಇಲ್ಲಿನ ಎಲ್ಲಕಲಾಕೃತಿಗಳಲ್ಲಿಸಾಮಾಜಿಕ ಸಂವೇದನೆ, ಪರಿಸರದ ಕಾಳಜಿ ಮೊದಲಾದ ಸಂಗತಿಗಳು ಅಭಿವ್ಯಕ್ತಗೊಂಡಿದ್ದು, ನೋಡುಗರಲ್ಲಿಪ್ರಕೃತಿ, ಪ್ರಾಣಿ -ಪಕ್ಷಿಗಳ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸುತ್ತವೆ ಎಂದರಲ್ಲದೆ ದೇಶ, ಭಾಷೆ, ಸಂಸ್ಕೃತಿಗಳ ಬಗ್ಗೆಯೂ ಅರಿವು, ಅಭಿಮಾನಿ ಮೂಡಿಸುವಂತಹ ಕಲಾಕೃತಿಗಳನ್ನೂ ರಸಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಗ್ರಂಥಾಲಯದ ಮುಖ್ಯಸ್ಥರಾದ ಡಾ.ಪರಶುರಾಮ ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅತ್ಯಂತ ಸೃಜನಶೀಲವಾದದ್ದು, ಅವರ ಕಲಾಕೃತಿಗಳಲ್ಲಿಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಭವಿಷ್ಯದಲ್ಲಿಉತ್ತಮ ಕಲಾವಿದರಾಗಿ ಬೆಳೆಯುವ ಎಲ್ಲಲಕ್ಷಣಗಳು ಇವರ ಕಲಾಕೃತಿಗಳಲ್ಲಿಬಿಂಬಿತವಾಗಿವೆ. ಭವಿಷ್ಯದಲ್ಲಿಎಲ್ಲರೂ ದೇಶದ ಸಾಂಸ್ಕೃತಿಕ ಆಸ್ತಿಯಾಗುವುದರಲ್ಲಿಸಂದೇಹವಿಲ್ಲಎಂದರು.

ಕಲಾ ಪ್ರದರ್ಶನದ ಸಂಯೋಜಕರಾದ ಡಾ.ಶಿವಾನಂದ ಬಂಟನೂರ ಮಾತನಾಡಿದರು. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಶೋಧನಾ ವಿದ್ವಾಂಸರಾದ ನಯನ ಬಾಬುರಾವ್ , ಪ್ರಶಾಂತ್ ಕುಮಾರ್ , ರಮೇಶ್ ಮೋತುಕುರಿ, ಅಶ್ವಿನಿ ರಾಜಶೇಖರ ಕಲ್ಯಾಣಿ, ಸ್ನಾತಕೋತ್ತರ ಪೇಂಟಿಂಗ್ ವಿದ್ಯಾರ್ಥಿಗಳಾದ ಶಿವಾನಿ ರಾವತ್ , ಸಿತಾಂಶು ಮುಖರ್ಜಿ, ಲೆಂಕೆ ಗೀತಾ, ದಕ್ಷಿತಾ ಲಾಂಜೆವರ್ , ಶ್ವೇತಾ ಶಿವಾನಿ, ಬಿ.ಜಿ.ಲಿಂಗಡೋ ಮೌಪಲಾಂಗ್ , ಕುಮಾರ್ ಮುರುಳಿ ತಮ್ಮ ವರ್ಣ ಚಿತ್ರ ಮತ್ತು ಶಿಲ್ಪಕಲಾ ಕೃತಿಗಳನ್ನು ಪ್ರದರ್ಶಿಸಿದರು. ಕಲಾ ಪ್ರದರ್ಶನವು ಏ.2ರ ಸಂಜೆ 5.30 ವರೆಗೆ ಇರಲಿದೆ.

ವಿಭಾಗದ ಅಧ್ಯಾಪಕ ವಿನಯಕುಮಾರ್ ಆರ್ .ನಿರೂಪಿಸಿದರು. ಶಿವಾನಿ ರಾವತ್ ಹಾಗೂ ಶ್ವೇತಾ ದೂದಿ ಸ್ವಾಗತ ಗೀತೆ ಹಾಡಿದರು. ಸಂಶೋಧನಾ ವಿದ್ಯಾರ್ಥಿ ಪ್ರಶಾಂತ ಕುವರ್ ವಂದಿಸಿದರು.

ಕೋಟ್ ....

ಒಬ್ಬೊಬ್ಬರಲ್ಲಿಒಂದೊಂದು ಸಾಮರ್ಥ್ಯ ಅಡಗಿರುತ್ತದೆ. ಅದು ಬಣ್ಣ, ನಾದ, ಕಲ್ಲು, ಕೊರಡು ಅಥವಾ ಶಬ್ಧಗಳ ಮೂಲಕ ಕಲಾಕೃತಿಗಳಾಗಿ ಹೊರಹೊಮ್ಮಿ, ಕಲಾವಿದರು ಮತ್ತು ನೋಡುಗರ ಹೃದಯಗಳೆರಡನ್ನೂ ಸಂಸ್ಕಾರಗೊಳಿಸುತ್ತವೆ. ದೇಶದ ಬೇರೆ ಪ್ರದೇಶಗಳಿಂದ ಬಂದಿರುವ ಈ ಎಲ್ಲವಿದ್ಯಾರ್ಥಿಗಳು ಅತ್ಯಂತ ಪ್ರತಿಭಾಶಾಲಿಗಳಾಗಿದ್ದಾರೆ.

- ಪ್ರೊ.ವಿಕ್ರಮ ವಿಸಾಜಿ ಡೀನ್ ಸಿಯುಕೆ