ಲೀಡ್ 4

Contributed bybabitha.salian@timesgroup.com|Vijaya Karnataka

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿರೋಶ್ ವಿವಾಹದ ರಿಸೆಪ್ಷನ್ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಟಾಲಿವುಡ್, ಕಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು. ರಶ್ಮಿಕಾ ಮೈಸೂರು ಸಿಲ್ಕ್ ಸೀರೆಯಲ್ಲಿ ಕಂಗೊಳಿಸಿದರು. ಇವರಿಬ್ಬರು ಹನಿಮೂನ್‌ಗೆ ಹೋಗದೆ, 'ರಣಬಾಲಿ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

remarkable wedding reception of rashmika and vijay

ವಿರೋಶ್ ರಿಸೆಪ್ಷನ್ ಗೆ ತಾರಾ ಮೆರುಗು

-ಮೈಸೂರು ಸಿಲ್ ್ಕ ಸೀರೆಯಲ್ಲಿರಶ್ಮಿಕಾ ಮಿಂಚು | ಹನಿಮೂನ್ ಸದ್ಯಕ್ಕಿಲ್ಲ

ಇಂಟ್ರೊ

ತಾರಾದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಗ್ರ್ಯಾಂಡ್ ವೆಡ್ಡಿಂಗ್ ರಿಸೆಪ್ಷನ್ ಗೆ ಟಾಲಿವುಡ್ , ಕಾಲಿವುಡ್ , ಬಾಲಿವುಡ್ , ಸ್ಯಾಂಡಲ್ ವುಡ್ ನ ಟಾಪ್ ಸೆಲೆಬ್ರಿಟಿಗಳು ಆಗಮಿಸಿ ವಧು ವರರಿಗೆ ಶುಭ ಕೋರಿದರು.

ಲವಲವಿಕೆ ಸುದ್ದಿಲೋಕ

ಹೈದರಾಬಾದ್ ನ ಖಾಸಗಿ ಹೋಟೆಲ್ ಒಂದರಲ್ಲಿಬುಧವಾರ ನಡೆದ ವಿರೋಶ್ ಮದುವೆ ರಿಸೆಪ್ಷನ್ ಗೆ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ -ಉಪಾಸನಾ ದಂಪತಿ, ಅಲ್ಲುಅರ್ಜುನ್ , ನಾಗಾರ್ಜುನ, ನಾಗಚೈತನ್ಯ, ವೆಂಕಟೇಶ್ , ರಾಣಾ ದಗ್ಗುಬಾಟಿ, ರವಿತೇಜ, ನಾಗ್ ಅಶ್ವಿನ್ ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ , ಮೃಣಾಲ್ ಠಾಕೂರ್ , ನೀನಾ ಗುಪ್ತಾ, ಕೃತಿ ಸನನ್ , ಶಾಹಿದ್ ಕಪೂರ್ , ಶ್ರೀಲೀಲಾ, ಕೃತಿ ಶೆಟ್ಟಿ, ಆಶಿಕಾ ರಂಗನಾಥ್ , ಅನುಶಾ ರೈ, ಸೀತಾರಾ ಮಹೇಶ್ ಬಾಬು, ನಮ್ರತಾ ಶಿರೋಡ್ಕರ್ ಮುಂತಾದವರು ಆಗಮಿಸಿ ನವಜೋಡಿಗೆ ಹಾರೈಸಿದರು.

ಈ ಸಮಾರಂಭದಲ್ಲಿರಶ್ಮಿಕಾ ಮಂದಣ್ಣ ಕರ್ನಾಟಕದ ವಿಶೇಷ ಕೆಂಪು ಮೈಬಣ್ಣ ಮತ್ತು ಹೊಂಬಣ್ಣ ಮಿಶ್ರಿತ ಕಪ್ಪು ಬಾರ್ಡರ್ ನ ಪ್ಲೈನ್ ಮೈಸೂರು ಸಿಲ್ ್ಕ ಸೀರೆ ಧರಿಸಿ, ಅದೇ ಬಣ್ಣದ ಬ್ಲೌಸ್ , ಕೊರಳಿಗೆ ಚಿನ್ನದ ಹೈ ಫ್ಯಾಷನ್ ಹಾರ, ಕಿವಿಗೆ ಬಿಗ್ ಲೋಲಾಕು, ಸೊಂಟಕ್ಕೆ ಒಡ್ಯಾಣ, ಕೈಗೆ ಚಿನ್ನದ ಫಿಂಗರ್ಲೆಟ್ ಮತ್ತು ದಪ್ಪ ಬಳೆ ಧರಿಸಿ ಕಂಗೊಳಿಸಿದರು. ಹುಬ್ಬಿನ ಮಧ್ಯೆ ಚಿಕ್ಕ ಬಿಂದಿ ಧರಿಸಿದ್ದ ಅವರು ಬೈತಲೆಗೆ ಸಿಂಧೂರವಿಟ್ಟಿದ್ದು ವಿಶೇಷವಾಗಿತ್ತು. ಕೂದಲನ್ನು ತುದಿಯವರೆಗೆ ಜಡೆ ಹೆಣೆದು ಅಲ್ಲಲ್ಲಿಕೆಂಪು ಹೂವು ಸಿಕ್ಕಿಸಿಕೊಂಡಿದ್ದ ಅವರ ವಿಭಿನ್ನ ಮತ್ತು ಸರಳ ಕೇಶ ಶೈಲಿಯೂ ಗಮನ ಸೆಳೆದಿದೆ. ಅವರ ಈ ಸರಳ ರಿಸೆಪ್ಷನ್ ಲುಕ್ ಗೆ ಪೂರಕವಾಗಿ ವಿಜಯ ದೇವರಕೊಂಡ ಬಿಳಿ ಬಣ್ಣ ರೇಷ್ಮೆಯ ಸರಳ ಪಂಚೆ ಶರ್ಟ್ , ಕಂದು ಶೂ ಧರಿಸಿದ್ದು, ಕೊರಳಿಗೆ ನೆಕ್ಲೇಸ್ , ಕೈಗೆ ಕಡಾ, ಕಪ್ಪು ವಾಚು ಧರಿಸಿದ್ದರು. ರಿಸೆಪ್ಷನ್ ಗೆ ಸೂಟು ಬೂಟು ಧರಿಸುವ ಸ್ಟೈಲ್ ಗೆ ವಿಭಿನ್ನವಾಗಿ ಅವರು ಸಾಂಪ್ರದಾಯಿಕ ಉಡುಪು ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಸಮಾರಂಭದಲ್ಲಿರಶ್ಮಿಕಾ ತಾಯಿ ಸೀರೆಯನ್ನು ಕೊಡವ ಶೈಲಿಯಲ್ಲಿಧರಿಸಿ ಗಮನ ಸೆಳೆದಿದ್ದಾರೆ.

ಬಾಕ್ಸ್

ಶೂಟಿಂಗ್ ಗೆ ವಾಪಸ್

ಮದುವೆಯಾದ ಮೇಲೆ ಬಹುತೇಕ ಸೆಲೆಬ್ರಿಟಿಗಳು ಹನಿಮೂನ್ ಗೆ ಹೋಗುತ್ತಾರೆ. ಆದರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡರಿಗೆ ಸದ್ಯಕ್ಕೆ ಹನಿಮೂನ್ ಇಲ್ಲ. ಈ ವರ್ಕೊಹಾಲಿಕ್ ದಂಪತಿ ಮದುವೆ ಸಂಭ್ರಮದಲ್ಲಿಮೈಮರೆಯದೆ ಸಿನಿಮಾ ಶೂಟಿಂಗ್ ನಲ್ಲಿತೊಡಗಲು ನಿರ್ಧರಿಸಿದ್ದಾರೆ. ಮಾರ್ಚ್ 9ರಿಂದ ಇವರಿಬ್ಬರು ನಟಿಸಿರುವ ‘ರಣಬಾಲಿ’ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಮಾರ್ಚ್ 12ರಿಂದ ಅವರು ಅದರಲ್ಲಿಭಾಗಿಯಾಗಲಿದ್ದಾರೆ. ಮದುವೆಯ ನಂತರ ಇವರಿಬ್ಬರು ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಮೊದಲ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಹನಿಮೂನ್ ಬದಲಿಗೆ ಸಿನಿಮಾಗೆ ಮೊದಲ ಆದ್ಯತೆ ನೀಡಿರುವ ಈ ಜೋಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.