ಬೆಂಗಳೂರು: ‘‘ಋುಣಂ ಕೃತ್ವಾ ಘೃತಂ ಪಿಬೇತ್ ,’’ (ಸಾಲ ಮಾಡಿ ತುಪ್ಪ ತಿನ್ನುವುದು) ಎಂಬ ಮಾತನ್ನು ಅಕ್ಷರಶಃ ಪಾಲಿಸಬೇಕಾದ ಅನಿವಾರ್ಯತೆಗೆ ರಾಜ್ಯದ ಕಾಂಗ್ರೆಸ್ ಸರಕಾರ ಸಿಲುಕಿದೆ. ಹಾಗಾಗಿ ಈ ಬಾರಿಯೂ 1 ಲಕ್ಷ ಕೋಟಿ ರೂ.ಗೂ ಅಧಿಕ ಸಾಲ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಕಳೆದ ವರ್ಷ ಮಾರ್ಚ್ 6ರಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1,16,000 ಕೋಟಿ ರೂ. ಸಾಲ ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರಂತೆ ಹಾಲಿ ವಿತ್ತ ವರ್ಷದ ಅಂತ್ಯಕ್ಕೆ ರಾಜ್ಯ ಸರಕಾರದ ಒಟ್ಟು ಸಾಲದ ಹೊಣೆಗಾರಿಕೆ 7,64,655 ಕೋಟಿ ರೂ. ಆಗಲಿದೆ. ಮುಖ್ಯಮಂತ್ರಿಯವರು ಮಂಡಿಸಿದ್ದ 2025-26ರ ಬಜೆಟ್ ನ ಒಟ್ಟು ಗಾತ್ರ 4,09,549 ಕೋಟಿ ರೂ. ಇದರಲ್ಲಿ2,08,,100 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ, 16,500 ಕೋಟಿ ರೂ. ತೆರಿಗೆಯೇತರ ರಾಜಸ್ವ ಸೇರಿವೆ. ಜತೆಗೆ 1.16 ಲಕ್ಷ ಕೋಟಿ ರೂ. ಸಾಲ. ಈ ಬಾರಿ ನಾನಾ ಕಾರಣ ಗಳಿಂದ ಸಂಪನ್ಮೂಲ ಸಂಗ್ರಹದಲ್ಲಿಅಲ್ಪ ಹಿನ್ನಡೆಯಾಗಿದೆ. ಕೇಂದ್ರ ಸರಕಾರ ಜಿಎಸ್ ಟಿ ವ್ಯವಸ್ಥೆ ಸರಳೀಕರಣಗೊಳಿಸಿದ್ದರಿಂದ ರಾಜ್ಯದ ಆದಾಯಕ್ಕೆ ಖೋತಾ ಆಗುತ್ತಿದೆ. ಆದ್ದರಿಂದ ರಾಜ್ಯಕ್ಕೆ ಆರ್ಥಿಕತೆಯ ಸವಾಲು ಎದುರಾಗಿದೆ. ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಪಂಚ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 50 ಸಾವಿರ ಕೋಟಿ ರೂ. ತೆಗೆದಿರಿಸುವುದು ಬದ್ಧತೆ. ಗ್ಯಾರಂಟಿಯಲ್ಲಿಪರಿಷ್ಕರಣೆ ಸೇರಿದಂತೆ ಸ್ಥಿತಿವಂತರು ಈ ಯೋಜನೆಯ ಚೌಕಟ್ಟಿನಿಂದ ಸ್ವಯಂ ಪ್ರೇರಿತವಾಗಿ ಹೊರ ಹೋಗುವಂತೆ ಮನವಿ ಮಾಡಿಕೊಳ್ಳಬಹುದಷ್ಟೆ. ಅದನ್ನು ಬಿಟ್ಟಿ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವುದು ಸಾಧ್ಯವಿಲ್ಲದ ಮಾತು. ಪಂಚ ಗ್ಯಾರಂಟಿಗಳ ಅನುದಾನದಲ್ಲಿತೀವ್ರ ಕಡಿತ ಮಾಡುವುದಕ್ಕೂ ಆಗುವುದಿಲ್ಲ. ಗ್ಯಾರಂಟಿಗಳ ಜತೆ ಜತೆಗೇ ಹತ್ತು ಹಲವು ಕಲ್ಯಾಣ ಕಾಧಿರ ್ಯಕ್ರಮಗಳಿಗೆ ಹಣ ಹೊಂದಿ ಸಬೇಕಾಗುತ್ತದೆ. ಹಾಗಾಗಿ ಎಷ್ಟೇ ಕಸರತ್ತು ಮಾಡಿದರೂ ಸಾಲದ ಸುಳಿಯಿಂದ ಹೊರ ಬರುವುದು ಕಷ್ಟ ಸಾಧ್ಯ. ಆಶಯ ಒಳ್ಳೆಯದು ಮಧ್ಯಮಾವಧಿ ವಿತ್ತೀಯ ಮುನ್ನಂದಾಜು 2025-29ರ ಅನುಸಾರ ಮುಂದಿನ 3 ವರ್ಷಗಳಲ್ಲಿಸಾಲದ ಪ್ರಮಾಣ ತಗ್ಗಿಸುವ ಗುರಿ ಇರಿಸಿಕೊಳ್ಳಲಾಗಿದೆ. ಈ ಆಶಯವೇನೋ ಒಳ್ಳೆಯದು. ಇದು ವಾಸ್ತವಿಕವಾಗಿ ಜಾರಿಗೆ ಬರಲಿದೆಯಾ ಎನ್ನುವುದಕ್ಕೆ ಶುಕ್ರವಾರ(ಮಾ.6) ಸಿಎಂ ಮಂಡಿಸುವ ಬಜೆಟ್ ನಲ್ಲಿಉತ್ತರ ಸಿಗಲಿದೆ. ವಿತ್ತೀಯ ಮುನ್ನಂದಾಜಿನಂತೆ 2026-27ರ ಅಂತ್ಯಕ್ಕೆ ರಾಜ್ಯದ ಸಾಲದ ಒಟ್ಟು ಮೊತ್ತ 8,41,121 ಕೋಟಿ ರೂ. ಆಗಲಿದೆ. ಈ ಲೆಕ್ಕದಂತೆ ಹೋದರೆ ಹೊಸ ಬಜೆಟ್ ನಲ್ಲಿಸಾಲದ ಮೊತ್ತವನ್ನು 76,466 ಕೋಟಿ ರೂ.ಗೆ ಸೀಮಿತಗೊಳಿಸಬೇಕಾಗುತ್ತದೆ. ರಾಜ್ಯ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಇದು ಸಾಧ್ಯವಾ ಎಂಬುದೇ ಪ್ರಶ್ನೆಯಾಗಿದೆ. ಹಾಗೆಯೇ ಮಧ್ಯಮಾವಧಿ ವಿತ್ತೀಯ ಅಂದಾಜಿನಂತೆ 2027-28ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲದ ಮೊತ್ತ 9,25,233 ಕೋಟಿ ರೂ. ಆಗಲಿದೆ. ಅಂದರೆ, 2027-28ನೇ ಸಾಲಿನ ಬಜೆಟ್ ನಲ್ಲಿ84,112 ಕೋಟಿ ರೂ. ಸಾಲಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. 2028-2029ರ ಅಂತ್ಯಕ್ಕೆ ಒಟ್ಟು ಸಾಲದ ಮೊತ್ತ 10,17,756 ಕೋಟಿ ರೂ.ಗೆ ಏರಲಿದೆ. ಇದರರ್ಥ ಈ ಸರಕಾರದ ಅವಧಿಯ ಕೊನೆಯ ಬಜೆಟ್ ನಲ್ಲಿ92,523 ಕೋಟಿ ರೂ. ಸಾಲ ತೆಗೆದುಕೊಳ್ಳುವ ಅಂದಾಜಿದೆ. ಆರ್ಥಿಕ ಸುಧಾರಣೆ ದೃಷ್ಟಿಯಿಂದ ಮಧ್ಯಮಾವಧಿ ವಿತ್ತೀಯ ಮುನ್ನಂದಾಜನ್ನು ಹೀಗೆ ಸಿದ್ಧ ಮಾಡಿಕೊಂಡಿರುವುದು ಸೂಕ್ತವಾದುದು. ಆದರೆ, ಈ ಲೆಕ್ಕಾಚಾರದಂತೆ ಮುಂದಿನ ದಿನಗಳಲ್ಲಿಆರ್ಥಿಕತೆಯ ಬಂಡಿ ಹೋಗುತ್ತದೆ ಎಂದು ಹೇಳಲಿಕ್ಕಾಗದು. ಒಂದು ವೇಳೆ ಮುಂದಿನ ಬಜೆಟ್ ಗಳಲ್ಲೂಪ್ರತಿ ವರ್ಷ 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಸಾಲ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೆ, ಆರ್ಥಿಕವಾಗಿ ರಾಜ್ಯಕ್ಕೆ ಮತ್ತಷ್ಟು ಸವಾಲು ಎದುರಾಗುವುದು ನಿಶ್ಚಿತ.

