ಖಿಲಾರಿ....

Contributed byiranna.goudar@timesgroup.com|Vijaya Karnataka

ರಾಜ್ಯದ ಆರ್ಥಿಕತೆ ಉತ್ತೇಜಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಶಿಕ್ಷಣ, ಕೃಷಿ, ಮೂಲಸೌಕರ್ಯ, ಆರೋಗ್ಯ ಮತ್ತು ಯುವಜನರ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ ವಿಸ್ತಾರ ಯೋಜನೆ, ಎಐ ಆಧಾರಿತ ಕ್ರಮಗಳು ಭವಿಷ್ಯದ ಉದ್ಯೋಗಾವಕಾಶ ಹೆಚ್ಚಿಸಲಿವೆ. ಮೀನುಗಾರರಿಗೆ ಪ್ರಯೋಜನವಾಗುವ ಬಗ್ಗೆ ಪ್ರಶ್ನೆಗಳಿವೆ. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ.

a significant step for economic activity in the state khilari

ಇದು ರಾಜ್ಯದ ಆರ್ಥಿಕ ಚಟುವಟಿಕೆ ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ. ಶಿಕ್ಷಣ, ಕೃಷಿ, ಮೂಲಸೌಕರ್ಯ, ಆರೋಗ್ಯ ಮತ್ತು ಯುವಜನರ ಕೌಶಲಾಭಿವೃದ್ಧಿ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಯುವಜನರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಉತ್ತೇಜಿಸುವ ಯೋಜನೆಗಳು ಭವಿಷ್ಯದಲ್ಲಿಉದ್ಯೋಗಾವಕಾಶ ಹೆಚ್ಚಿಸಲು ಸಹಕಾರಿಯಾಗಲಿದೆ.

- ಡಾ.ಎಸ್ .ವೆಂಕಟೇಶ್ ಬಾಬು, ಅಧ್ಯಾಪಕರು ಹಾಗೂ ಅಧ್ಯಕ್ಷರು, ಡಿಯುಟಿಸಿಸಿಎಂ, ದಾವಣಗೆರೆ.

-----ಪೋಟೋ: 06ಡಿವಿಜಿ ಬಾಬು---

ತಾಂತ್ರಿಕ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಜೆನ್ ಜಿಗಳಿಗೆ ಮನ್ನಣೆ ನೀಡಿ ಕೃಷಿಯ ಸಬಲೀಕರಣಕ್ಕಾಗಿ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಒಳಗೊಂಡಂತೆ ಹಲವಾರು ಎಐ ಆಧಾರಿತ ಅಭಿವೃದ್ಧಿ ಪ್ರೇರಿತ ಕ್ರಮ ಹಮ್ಮಿಕೊಂಡಿರುತ್ತಾರೆ. ಯುವ ಸಬಲೀಕರಣಕ್ಕಾಗಿ ಹಲವಾರು ಹುದ್ದೆಗಳ ಭರ್ತಿ ಭರವಸೆ ಆಶಾದಾಯಕ.

- ಡಾ. ಹುಚ್ಚೇಗೌಡ ಪ್ರಾಧ್ಯಾಪಕರು, ಅರ್ಥಶಾಸ್ತ್ರ ಅಧ್ಯಯನ ವಿಭಾಗ, ದಾವಿವಿ.

ಪೋಟೋ: 06ಡಿವಿಜಿ ಜಿಗೌಡ

ಮೀನುಗಾರರಿಗೆ ಯಾವ ಬಜೆಟ್ ನಿಂದ ಏನೂ ಉಪಯೋಗ ಇಲ್ಲ. ಮೀನು ಹಿಡಿಯೋಕೆ ಇದ್ದ ಬ್ಯಾಲೆ, ಸಮುದ್ರಾನೇ ನಮ್ಮಿಂದ ಕಿತ್ತಕಳ್ತಾ ಇದ್ದಾರೆ. ಇವರ ಸೌಲಭ್ಯ ತಗಂಡ ಏನು ಮಾಡೋದು. ಎಲ್ಲಿಬಲೆ ಹಾಕೋದು? ನಾವು ಬ್ಯಾಲೆ, ಸಮುದ್ರ ನಂಬಿ ಬದುಕಿದೋರು. ನಮ್ಮ ಬ್ಯಾಲೆ ನಮಗೆ ಉಳಿಸಿಕೊಟ್ಟರೆ ಅದೇ ದೊಡ್ಡ ಬಜೆಟ್ .

- ಸದಾನಂದ ಹರಿಕಂತ್ರ, ಮೀನುಗಾರ, ಕಾರವಾರ

ಫೋಟೊ- ಸದಾನಂದ ಹರಿಕಾಂತ

ನೀರಾವರಿ ಕ್ಷೇತ್ರಕ್ಕೆ ಸರಕಾರ ಬಜೆಟ್ ನಲ್ಲಿ22, 436 ಕೋಟಿ ರೂ. ಮೀಸಲಿಟ್ಟಿರುವುದು ಯೋಜನೆಗಳ ಹಿನ್ನಡೆಗೆ ಕಾರಣವಾಗಲಿದೆ. ಯುಕೆಪಿ ಯೋಜನೆ ಪೂರ್ಣಗೊಳಿಸಲು 1 ಲಕ್ಷ ಕೋಟಿ ರೂ.ಬೇಕು. ಸರಕಾರ ಪ್ರತಿವರ್ಷ 20 ಸಾವಿರ ಕೋಟಿ ರೂ. ನೀಡಿದರೂ ಯೋಜನೆ ಸಾಕಾರಗೊಳ್ಳಲು ಐದು ವರ್ಷ ಬೇಕಾಗುತ್ತದೆ. ಇತರ ಯೋಜನೆಗಳಿಗೂ ಹಣ ಸಾಕಾಗುವುದಿಲ್ಲ.

-ಪ್ರಕಾಶ ಅಂತರಗೊಂಡ, ಸಂಚಾಲಕ, ಸ್ವಾಭಿಮಾನಿ ವೇದಿಕೆ, ಬಾಗಲಕೋಟೆ

ಫೋಟೊ: (ಕೋಟ್ - ಪ್ರಕಾಶ ಅಂತರಗೊಂಡ)