ಬಜೆಟ್ ಬಗ್ಗೆ ಪ್ರತಿಕ್ರಿಯೆ.

Contributed byparashurammkerehalli@gmail.com|Vijaya Karnataka

ಬಜೆಟ್‌ನಲ್ಲಿ ಕೃಷಿಗೆ 8373 ಕೋಟಿ ರೂ. ಮೀಸಲಿಡಲಾಗಿದೆ. ಹಲವು ಯೋಜನೆಗಳ ಘೋಷಣೆ ಸ್ವಾಗತಾರ್ಹ. ಆದರೆ, ಈ ಯೋಜನೆಗಳು ನಿಜವಾದ ರೈತರನ್ನು ತಲುಪುವ ಬಗ್ಗೆ ಖಾತ್ರಿಯಿಲ್ಲ. ಕೃಷಿ ಯಂತ್ರೋಪಕರಣಗಳ ಬೆಲೆ ಹಾಗೂ ಗುಣಮಟ್ಟದಲ್ಲಿ ಪಾರದರ್ಶಕತೆ ಇಲ್ಲ. ಮಲೆನಾಡಿನ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹ ಯೋಜನೆ ಅಗತ್ಯವಿದೆ. ರೈತರ ಸ್ವಾವಲಂಬನೆ ನಿರೀಕ್ಷೆ ಹುಸಿಯಾಗಿದೆ.

budget agriculture schemes farmers disappointed

ಆಯವ್ಯಯದಲ್ಲಿಕೃಷಿಗೆ 8373 ಕೋಟಿ ರೂ. ನೀಡಿ, ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ, ಈ ಕಾರ್ಯಕ್ರಮಗಳು ನಿಜವಾದ ರೈತರನ್ನು ಪರಿಣಾಮಕಾರಿಯಾಗಿ ತಲುಪುವು ದನ್ನು ಖಾತರಿಪಡಿಸಲು ಯಾವುದೇ ಮಾನದಂಡವಿಲ್ಲ. ಸರಕಾರ ಯೋಜನೆಗಳ ಮೂಲಕ ರೈತರಿಗೆ ನೀಡುವ ಕೃಷಿ ಯಂತ್ರೋಪಕರಣ ಮತ್ತು ಪರಿಕರಗಳ ಬೆಲೆ ಮಾರುಕಟ್ಟೆ ದರಕ್ಕಿಂತ ದುಬಾರಿ ಮತ್ತು ಕಳಪೆ ಗುಣಮಟ್ಟದ್ದಾಗಿದ್ದು ಪಾರದರ್ಶಕತೆ ಕಾಣೆಯಾಗಿದೆ. ಮಲೆನಾಡಿನ ಭಾಗದ ಭತ್ತ ಬೆಳೆಯುವ ರೈತರಿಗೆ ಉತ್ಪಾದನಾ ವೆಚ್ಚಕ್ಕೆ ಸರಿಯಾದ ಬೆಲೆ ಜತೆಗೆ ಪ್ರೋತ್ಸಾಹ ಯೋಜನೆ ಅಗತ್ಯವಿತ್ತು. ರೈತರ ಸ್ವಾವಲಂಬಿ ಬದುಕಿನ ನಿರೀಕ್ಷೆ ಹುಸಿಯಾಗಿದೆ. -ಲಿಂಗರಾಜ, ರೈತ, ಹುಳಿಗದ್ದೆ, ಗವಟೂರು.