ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬೇಡಿಕೆ ಇದ್ದು, ಪ್ರತಿ ಜಿಲ್ಲೆಯಲ್ಲಿಜಿಲ್ಲಾಸಹಕಾರಿ ಬ್ಯಾಂಕ್ ಸ್ಥಾಪನೆಗೆ ಆರ್ ಬಿಐಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಜೆಟ್ ನಲ್ಲಿಪ್ರಕಟಿಸಲಾಗಿದೆ. ಹೀಗಾಗಿ ಈ ಬೇಡಿಕೆ ಈಡೇರುವ ವಿಶ್ವಾಸವಿದೆ. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ, ಬ್ಯಾಡಗಿಯಲ್ಲಿಶ್ರಮಿಕ ವಸತಿ, ಸಿಲ್ ್ಕ ಪಾರ್ಕ್ ಘೋಷಣೆ ಆಗಿದೆ.
-ಬಸವರಾಜ ಶಿವಣ್ಣನವರ, ಶಾಸಕ ಬ್ಯಾಡಗಿ
-
ಸರಕಾರ ಶಿಗ್ಗಾವಿ-ಸವಣೂರ ತಾಲೂಕಿಗೆ ಬಂಪರ್ ಕೊಡುಗೆ ನೀಡಿದೆ. ಸವಣೂರಿನಲ್ಲಿಮಹಿಳಾ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿಕಾರ್ಮಿಕ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲೆ ಮಂಜೂರು ಮಾಡಿದೆ.
-ಯಾಸೀರಖಾನ್ ಪಠಾಣ, ಶಾಸಕ ಶಿಗ್ಗಾವಿ

