ಹಿಂದೂಗಳು ಕುಂಭಕರ್ಣನ ನಿದ್ದೆಯಿಂದ ಎಚ್ಚೆತ್ತುಕೊಳ್ಳಿ

Contributed byjagadishjodubeeti@gmail.com|Vijaya Karnataka

ತಿತಿಮತಿ ಮಂಡಲ ಹಿಂದೂ ಸಂಗಮದಲ್ಲಿ ಪ್ರಚಾರಕ ಚಂದ್ರನ್ ಮಾತನಾಡಿದರು. ಹಿಂದೂ ಸಮಾಜ ಸುಸ್ಥಿರವಾಗಿರಲು ಕುಂಭಕರ್ಣನ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು ಎಂದರು. ಜಾಗತಿಕ ಮಟ್ಟದಲ್ಲಿ ಹಿಂದೂ ಧರ್ಮ ಮಾರ್ಗದರ್ಶನ ನೀಡುತ್ತದೆ. ಶಾಂತಿ, ಸೌಹಾರ್ದತೆಯ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬ ಹಿಂದೂ ತನ್ನ ಕರ್ತವ್ಯ ಮರೆಯಬಾರದು. ಮನೆ, ಮನದಲ್ಲಿ ಹಿಂದೂತ್ವ ಪ್ರತಿಪಾದನೆಯಾಗಬೇಕು. ವಿದೇಶಗಳಂತೆ ಹಿಂದೂ ಧರ್ಮವೂ ಬೆಳೆದು ನಿಲ್ಲಬೇಕು. ಜಾಗೃತಿ, ಎಚ್ಚರಿಕೆಯಿಂದ ಜೀವನ ನಡೆಸಬೇಕು.

wake up hindu society from kumbhakarnas slumber

ಹಿಂದೂ ಸಂಗಮ ಕಾರ್ಯಕ್ರಮದಲ್ಲಿಪ್ರಚಾರಕ್ ಚಂದ್ರನ್ ಸಲಹೆ

ವಿಕ ಸುದ್ದಿಲೋಕ ಗೋಣಿಕೊಪ್ಪ

ಸುಸ್ಥಿರ ಹಿಂದೂ ಸಮಾಜದ ನಿರ್ಮಾಣಕ್ಕೆ ಹಿಂದೂಗಳು ಕುಂಭಕರ್ಣನ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು ಎಂದು ಪ್ರಚಾರಕ್ ಚಂದ್ರನ್ ಸಲಹೆ ನೀಡಿದರು.

ತಿತಿಮತಿ ಮಂಡಲ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ರಾಮ ಮಂದಿರ ಮುಂಭಾಗ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿಮಾತನಾಡಿದರು.

‘‘ಜಾಗತಿಕ ಮಟ್ಟದಲ್ಲಿಮಾರ್ಗದರ್ಶನ ಮಾಡುವಂತಹ ಪ್ರಾಮುಖ್ಯತೆಯನ್ನು ಹಿಂದೂ ಧರ್ಮ ಹೊಂದಿದೆ. ಶಾಂತಿಯಿಂದ ಕೂಡಿರುವ ಆನಂದಮಯವಾದ ಮತ್ತು ಆರೋಗ್ಯಪೂರ್ಣವಾದ ಮತ್ತು ಭಕ್ತಿಯಿಂದ ಜತೆಗೆ ಸೌಹಾರ್ದತೆಯ ನೆಲೆಯಲ್ಲಿಹಿಂದೂ ರಾಷ್ಟ್ರವನ್ನು ಕಟ್ಟಿ ಬೆಳೆಸಬೇಕಾಗಿದೆ. ಈ ಉದ್ದೇಶದೊಂದಿಗೆ ಪ್ರತಿಯೊಬ್ಬ ಹಿಂದೂ ತನ್ನ ಆದ್ಯ ಕರ್ತವ್ಯವನ್ನು ಮರೆಯಬೇಕಾಗಿದೆ,’’ ಎಂದು ಹೇಳಿದರು.

‘‘ಸಮಾಜದ ಬಲಿಷ್ಠ ಶಕ್ತಿಗೆ ಹಿಂದೂತ್ವವನ್ನು ಎತ್ತಿ ಹಿಡಿಯುವುದು ಪ್ರಾಮುಖ್ಯತೆಯಾಗಿದೆ. ಹನುಮಂತ ಹೊಂದಿರುವ ಭಕ್ತಿಯ ಭಾವನೆಯಂತೆ ನಾವು ಈ ಹಿಂದೂ ರಾಷ್ಟ್ರದ ಬಗ್ಗೆ ಹೊಂದಿರಬೇಕಾದ ತ್ಯಾಗಮಯ ಜೀವನವನ್ನು ಕುಡಿಸಿಕೊಂಡರೆ ಖಂಡಿತ ರಾಮನ ಪರಿಪೂರ್ಣ ಭಕ್ತಿ ದಕ್ಕುತ್ತದೆ,’’ ಎಂದು ಹೇಳಿದರು.

‘‘ಈ ದೇಶ ಪರಿವರ್ತನೆಗೊಳ್ಳಬೇಕಾದರೆ ಮನೆ ಮತ್ತು ಮನದಲ್ಲಿಹಿಂದೂತ್ವದ ಪ್ರತಿಪಾದನೆಯಾಗಬೇಕು. ವಿದೇಶ ಬೆಳದಂತೆ ಹಿಂದೂ ಧರ್ಮವೂ ಬೆಳೆದು ನಿಲ್ಲಬೇಕು. ಈ ನಿಟ್ಟಿನಲ್ಲಿಹಿಂದೂಗಳಾದ ನಾವು ಜಾಗೃತಿ ಮತ್ತು ಎಚ್ಚರಿಕೆಯಿಂದ ಜೀವನ ನಡೆಸಬೇಕು,’’ ಎಂದು ಹೇಳಿದರು.

ಫೋಟೋ

ತಿತಿಮತಿಯ ರಾಮ ಮಂದಿರ ಮುಂಭಾಗ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರಚಾರಕ್ ಚಂದ್ರನ್ ಮಾತನಾಡಿದರು.