‘ಮಾಧ್ಯಮಗಳಿಂದ ಮಹಿಳೆಯರಿಗೆ ಅರಿವು’
ವಿಕ ಸುದ್ದಿಲೋಕ ವಿಜಯನಗರ(ಹೊಸಪೇಟೆ)
‘‘ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತ ಮುಖ್ಯವಾಹಿನಿಗೆ ಬರಲು ಅರಿವು ಮೂಡಿಸುತ್ತಿವೆ,’’ ಎಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ನರಸಿಂಹ ಗುಂಜಳ್ಳಿ ಹೇಳಿದರು.
ನಗರದ ಹಳೆ ಮಲಪನಗುಡಿಯ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿಎಸ್ ಯುಬಿಎನ್ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ಸಂಘಟಿಸಲಾಗಿದ್ದ ’’ಮಹಿಳೆ ಮತ್ತು ಮಾಧ್ಯಮ’’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
‘‘ಮಹಿಳೆಯರ ಅಭಿವೃದ್ಧಿಯಲ್ಲಿಮಾಧ್ಯಮಗಳ ಪಾತ್ರ ಹೆಚ್ಚಿದೆ. ಸಮಾಜದಲ್ಲಿಮಹಿಳೆಯರ ಹಕ್ಕುಗಳು, ಸಮಸ್ಯೆಗಳು ಮತ್ತು ಸಾಧನೆಗಳನ್ನು ಜನರಿಗೆ ತಲುಪಿಸಲು ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಲಿದೆ. ಸರಕಾರದ ನಾನಾ ಯೋಜನೆಗಳು ಮಹಿಳೆಯರಿಗೆ ತಲುಪಿಸುವಲ್ಲಿಸಾಮಾಜಿಕ ಮಾಧ್ಯಮಗಳು ಕೆಲಸ ಮಾಡುತ್ತಿವೆæ,’’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಂಥಪಾಲಕಿ ಡಿ.ಎನ್ .ಸುಜಾತ ಮಾತನಾಡಿ, ‘‘ವಿದ್ಯಾರ್ಥಿನಿಯರು ಶಿಕ್ಷಣದ ಜತೆಗೆ ಸಮಾಜದ ಬಗ್ಗೆ ಅರಿವು ಹೊಂದಬೇಕು. ಸಬಲೀಕರಣದಲ್ಲಿಮಾಧ್ಯಮಗಳ ಮಹತ್ವ ತಿಳಿದುಕೊಳ್ಳಬೇಕು ಎಂದರು.
ಎಸ್ .ಯು.ಬಿ.ಎನ್ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸುಯಾ ಅಂಗಡಿ, ಎನ್ .ಎಸ್ .ಎಸ್ ಅಧಿಕಾರಿ ಕೆ.ಎನ್ .ಮಲ್ಲಿಕಾರ್ಜುನ, ರಮ್ಯಾ, ಲಾವಣ್ಯ, ಎಂ.ಅಮೃತ ಕುಮಾರ ಇತರರಿದ್ದರು.
ಎಚ್ ಪಿಟಿ06ದೇವರಾಜ05 : ಹೊಸಪೇಟೆಯ ಹಳೆ ಮಲಪನಗುಡಿಯ ಮಲ್ಲಿಕಾರ್ಜುನ ದೇಗುಲದ ಆವರಣದಲ್ಲಿ‘ಮಹಿಳೆ ಮತ್ತು ಮಾಧ್ಯಮ’ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

