ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವುದು ಸ್ವಾಗತಾರ್ಹ. ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕ, ಪಿಯುಸಿವರೆಗಿನ ವಿದ್ಯಾರ್ಥಿಗಳಿಗೂ ಉಚಿತ ಪಠ್ಯ ಪುಸ್ತಕ ಒದಗಿಸುವುದು, ಹೊಸ ಕೆಪಿಎಸ್ ಶಾಲೆಗಳ ಪರಿವರ್ತನೆಗೆ ಆದ್ಯತೆ ನೀಡಲಾಗಿದೆ. ನೂತನ ಕೊಠಡಿ ನಿರ್ಮಾಣ, ಹೊಸ ಕಾಲೇಜುಗಳ ಆರಂಭಕ್ಕೆ ಘೋಷಣೆಯಾಗಿರುವುದು ಶ್ಲಾಘನೀಯ. ಶಾಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಅವಕಾಶ ನೀಡಿರುವುದು ವಿದ್ಯಾರ್ಥಿಗಳಲ್ಲಿಸಾಮಾಜಿಕ, ರಾಜಕೀಯ ಜವಾಬ್ದಾರಿಗಳ ಅರಿವು ಮೂಡಿಸಲು ಸಹಕಾರಿಯಾಗಲಿದೆ. ಆದರೆ, ಘೋಷಿಸಿದ ಎಲ್ಲಯೋಜನೆಗಳು ಕಾಲಮಿತಿಯಲ್ಲಿಜಾರಿಗೆ ಬಂದಲ್ಲಿಮಾತ್ರ ಗುಣಾತ್ಮಕ ಬದಲಾವಣೆ ನಿರೀಕ್ಷಿಸಬಹುದು. - ಎಚ್ .ವಿ.ರಾಮಪ್ಪಗೌಡ, ನಿವೃತ್ತ ಪ್ರಾಂಶುಪಾಲರು, ಹೆರಗೊಡಿಗೆ, ಶಿವಮೊಗ್ಗ.

