ಬಜೆಟ್ ನಲ್ಲಿಸರ್ವತೋಮುಖ ಪ್ರಗತಿಗೆ ಆದ್ಯತೆ

Contributed byraghukgjd1@gmail.com|Vijaya Karnataka

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸಿದ್ದಾರೆ. ಇದು ಜನಪರ ಮತ್ತು ಅಭಿವೃದ್ಧಿ ಆಧಾರಿತವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮುಂದುವರಿದಿದೆ. ಮಹಿಳಾ ಸಬಲೀಕರಣ, ಶಿಕ್ಷಣ, ಇಂಧನ ಮತ್ತು ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಜಾನುವಾರುಗಳ ಸಾವಿಗೆ ಪರಿಹಾರದ ಮೊತ್ತ ಹೆಚ್ಚಳ ಮಾಡಲಾಗಿದೆ. ಅನುಗ್ರಹ ಯೋಜನೆ ಜಾರಿಗೆ ತರಲಾಗಿದೆ.

priority for smart and strong development in the budget

ಬಜೆಟ್ ನಲ್ಲಿಸರ್ವತೋಮುಖ ಪ್ರಗತಿಗೆ ಆದ್ಯತೆ

ವಿಕ ಸುದ್ದಿಲೋಕ ಗಜೇಂದ್ರಗಡ

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 17ನೇ ಬಜೆಟ್ ನ್ನು ಜನಪರ, ಅಭಿವೃದ್ಧಿ ಆಧಾರಿತ ಮತ್ತು ಗ್ಯಾರಂಟಿ ಯೋಜನೆಗಳಿಗೆ ಬದ್ಧವಾಗಿ ಮಂಡಿಸಲಾಗಿದೆ. ಕಳೆದ ಬಜೆಟ್ ಗಿಂತ ಭರ್ಜರಿ ಏರಿಕೆ (38,166 ಕೋಟಿ) ಕಂಡಿರುವ ಬಜೆಟ್ , ಮಹಿಳಾ ಸಬಲೀಕರಣ , ಶಿಕ್ಷಣ, ಇಂಧನ ಮತ್ತು ನೀರಾವರಿ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಸರ್ವತೋಮುಖ ಪ್ರಗತಿಗೆ ಒತ್ತು ನೀಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣಾ ಶೆಟ್ಟರ್ ಅಭಿಪ್ರಾಯ ತಿಳಿಸಿದರು.

ಶುಕ್ರವಾರ ಪಟ್ಟಣದಲ್ಲಿಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿ, ಸಿದ್ದರಾಮಯ್ಯ ಸರ್ವವ್ಯಾಪಿ ಆಗಿ ಬಜೆಟ್ ಮಂಡನೆ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಿದ್ದಾರೆ. ಅನೇಕ ಇಲಾಖೆಗಳಲ್ಲಿಪ್ರಗತಿ ಸಾಧಿಸಿದ್ದಾರೆ. ತುಳಿತಕ್ಕೆ ಒಳಗಾದವರ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಿದರು.

ಗೃಹಜ್ಯೋತಿ ಸೇರಿದಂತೆ ಪ್ರಮುಖ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮುಂದುವರಿಕೆ. ಜಾನುವಾರುಗಳ ಸಾವಿಗೆ ಕೊಡುವ ಪರಿಹಾರದ ಮೊತ್ತ ಹೆಚ್ಚಳ ಮಾಡಲಾಗಿದೆ. ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಜಾರಿಗೆ ತರಲಾಗಿದೆ. ಇದರಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು 10,000 ರೂ.ನಿಂದ 15,000 ರೂ.ಗೆ; ಕುರಿ, ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 5,000 ರೂ.ನಿಂದ 7,500 ರೂ.ಗೆ ಹಾಗೂ 3-6 ತಿಂಗಳ ಕುರಿ, ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3,500 ರೂ.ನಿಂದ 5,000 ರೂ.ಗೆ ಹೆಚ್ಚಿಸಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಫೊಟೊ: 6 ಜಿಜೆಡಿ 3: ವೀರಣ್ಣಾ ಶೆಟ್ಟರ್