ಕೋಟಿಗೊಬ್ಬನಿಗೆ 25 ವರ್ಷ
ಡಾ. ವಿಷ್ಣುವರ್ಧನ್ ನಟನೆಯ ‘ ಕೋಟಿಗೊಬ್ಬ ’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿಚಿತ್ರತಂಡವು ಬೆಂಗಳೂರಿನ ಟೌನ್ ಹಾಲ್ ನಲ್ಲಿಅದ್ಧೂರಿ ಸಂಭ್ರಮಾಚರಣೆ ಅಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿಇದರ ನಾಯಕಿ ಪ್ರಿಯಾಂಕಾ ಉಪೇಂದ್ರ , ದೇವರಾಜ್ , ನಾಯಕ ನಟರಾದ ಉಪೇಂದ್ರ , ಗಣೇಶ್ ಸೇರಿದಂತೆ ಈ ಚಿತ್ರದಲ್ಲಿನಟಿಸಿದ ಅನೇಕ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ದರು.
ಲಾಹೋರೆ 1947
ಟೈಟಲ್ ಬದಲು
ಸನ್ನಿ ಡಿಯೋಲ್ ನಟನೆಯ ‘ಲಾಹೋರೆ 1947’ ಸಿನಿಮಾ ಟೈಟಲನ್ನು ‘ಬಟ್ವಾರ 1947’ ಎಂದು ಬದಲಾಯಿಸಲಾಗಿದೆ. ಈ ಮೊದಲಿನ ಶೀರ್ಷಿಕೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಸಕ್ತ ಸಂಘರ್ಷವನ್ನು ಪ್ರಚೋದಿಸುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸಲು ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. 1947ರ ಭಾರತ ವಿಭಜನೆ ಕಥೆ ಇರುವ ಈ ಸಿನಿಮಾದಲ್ಲಿಆಮೀರ್ ಖಾನ್ , ಪ್ರೀತಿ ಝಿಂಟಾ, ಶಬಾನಾ ಆಜ್ಮಿ ಕೂಡ ನಟಿಸುತ್ತಿದ್ದಾರೆ.

