* ನಿರ್ವಹಣೆ ಮಾಡುವವರೂ ಇಲ್ಲ
* ಕೆಟ್ಟು ನಿಂತ ಘಟಕಗಳ ಮಷೀನ್ ಗಳು
ತಾಲೂಕಿನ ಕೆಲ ಹಳ್ಳಿಗಳಲ್ಲಿಕುಡಿಯುವ ನೀರಿಗಾಗಿ ಪರದಾಟ
ದುರಸ್ತಿ ಕಾಣದ ಶುದ್ಧ ನೀರಿನ ಘಟಕ
ಕರಿಯಪ್ಪ ಎಚ್ ಚೌಡಕ್ಕನವರ ರಟ್ಟೀಹಳ್ಳಿ
ತಾಲೂಕಿನ ಬುಳ್ಳಾಪುರ, ಸಣ್ಣಗುಬ್ಬಿ, ಎಲಿವಾಳ, ಚಿಕ್ಕಯಡಚಿ ಸೇರಿದಂತೆ ಕೆಲವೊಂದು ಹಳ್ಳಿಗಳಲ್ಲಿಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಇಲ್ಲದಂತಾಗಿದ್ದು, ರಿಪೇರಿಗೆ ಬಂದು 2-3 ವರ್ಷವಾದರೂ ದುರಸ್ತಿ ಕಾಣದೆ ಇರುವುದರಿಂದ ಜನರಿಗೆ ಶುದ್ಧ ನೀರು ಸಿಗದಂತಾಗಿದೆ.
ಬುಳ್ಳಾಪುರ ಗ್ರಾಮದಲ್ಲಿಕಳೆದ 2-3 ವರ್ಷಗಳಿಂದ ಘಟಕ ರಿಪೇರಿಗೆ ಬಂದಿದ್ದರೂ ದುರಸ್ತಿಮಾತ್ರ ಕಾಣುತ್ತಿಲ್ಲ. ಹೀಗಾಗಿ ಇಲ್ಲಿನ ಜನರು ಸಮಸ್ಯೆ ಎದುರಿಸುವಂತಾಗಿದೆ. ಈ ಮೊದಲು ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸುತಿದ್ದ ಘಟಕಗಳು ಕೆಟ್ಟು ನಿಂತಿದ್ದರೂ ನಿರ್ವಹಣೆ ಜವಾಬ್ದಾರಿ ಇರುವವರು ಯಾರು ಸಹ ಈ ಕಡೆ ತಿರುಗಿಯೂ ನೋಡುತ್ತಿಲ್ಲ. ಜವಾಬ್ದಾರಿ ತೆಗೆದುಕೊಳ್ಳಬೇಕಾದ ಗ್ರಾಪಂ ಕೂಡ ಕಾಳಜಿ ವಹಿಸದೇ ಇರುವುದರಿಂದ ನೀರಿನ ಘಟಗಳು ಅನಾಥವಾಗಿವೆ.
ಮಷೀನ್ ಗಳು ಹಾಳು:
ರಿಪೇರಿಗೆ ಬಂದಿರುವ ಘಟಕಗಳಲ್ಲಿಈಗಾಗಲೇ ಮಷೀನ್ ಗಳು ಸಂಪೂರ್ಣವಾಗಿ ಹಾಳಾಗಿ ಹೋಗುತ್ತಿವೆ. ಕಾಲಕಾಲಕ್ಕೆ ದುರಸ್ತಿ ಮಾಡಿಸಿಕೊಂಡು ಉಪಯೋಗ ಮಾಡಿಕೊಂಡು ಬಂದಿದ್ದರೆ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಸ್ಥಾಪಿಸಿದ ಘಟಕಗಳು ಉಳಿಯುತ್ತಿದ್ದವು. ಸಂಪೂರ್ಣವಾಗಿ ಹಾಳಾಗಿ ಹೋಗುವುದರೊಳಗೆ ಸಂಬಂಧಪಟ್ಟ ಅಧಿಕಾರಿಗಳು ಘಟಕಗಳನ್ನು ಪುನಾರಂಭಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಬೇಕಿದೆ.
ರಟ್ಟೀಹಳ್ಳಿ ತಾಲೂಕಿನಲ್ಲಿರುವ 19 ಗ್ರಾಪಂ ವ್ಯಾಪ್ತಿಯ 63 ಹಳ್ಳಿಗಳ ಪೈಕಿ ಕೆಲವೊಂದು ಹಳ್ಳಿಗಳನ್ನು ಹೊರತುಪಡೆಸಿದರೆ ಒಟ್ಟು 51 ಶುದ್ಧ ಕುಡಿಯುವ ನೀರಿನ ಘಟಕಗಳು ಬರುತ್ತಿದ್ದು, ಕೆಲವೊಂದು ಏಜೆನ್ಸಿ ಜವಾಬ್ದಾರಿ ಇದ್ದರೆ ಇನ್ನು ಕೆಲವು ಗ್ರಾಪಂ ಜವಾಬ್ದಾರಿಯಲ್ಲಿಕಾರ್ಯನಿರ್ವಹಿಸುತ್ತಿದ್ದು ಕೆಲ ಘಟಕಗಳು ದುರಸ್ತಿಗಾಗಿ ಕಾಯುತ್ತಿವೆ.
42 ಹಳ್ಳಿಗಳಿಗೆ ನದಿ ನೀರು:
ರಟ್ಟೀಹಳ್ಳಿ ತಾಲೂಕಿನಲ್ಲಿ42 ಹಳ್ಳಿಯ ಜನರಿಗೆ ಬಹುತೇಕವಾಗಿ ತುಂಗಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಅನೇಕ ಹಳ್ಳಿಯ ಜನರು ಈ ನದಿ ನೀರನ್ನೆ ಕುಡಿಯುವುದಕ್ಕೆ ಉಪಯೋಗಿಸುವುದರಿಂದ ಕೆಲ ಕಡೆಯಲ್ಲಿಶುದ್ಧ ಕುಡಿಯುವ ನೀರಿನ ಘಟಕಗಳು ಅಷ್ಟೊಂದು ಬಳಕೆಯಾಗುತ್ತಿಲ್ಲಎಂಬುವುದು ಸಹ ತಿಳಿದು ಬರುತ್ತಿದೆ. ಬೇಸಿಗೆ ಇರುವುದರಿಂದ ನದಿ ನೀರು ಸಮರ್ಪಕವಾಗಿ ಹಳ್ಳಿಗಳಿಗೆ ಬಾರದ ಸಂದರ್ಭದಲ್ಲಿಶುದ್ಧ ಕುಡಿಯುವ ನೀರಿನ ಘಟಕಗಳು ಹೆಚ್ಚು ಬಳಕೆಯಾಗುತ್ತೆವೆ ಎನ್ನುತ್ತಾರೆ ಈ ಭಾಗದ ಜನರು.
ಕೋಟ್ -1
ರಟ್ಟೀಹಳ್ಳಿ ತಾಲೂಕಿನಲ್ಲಿ42 ಗ್ರಾಮಗಳಿಗೆ ತುಂಗಭದ್ರಾ ನದಿ ನೀರನ್ನು ಪೂರೈಸಲಾಗುತ್ತದೆ. 3-4 ಗ್ರಾಮದಲ್ಲಿಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಬಂದಿದ್ದು ಈ ಬಗ್ಗೆ ಗಮನಹರಿಸಲಾಗುವುದು.
-ಚಂದ್ರಪ್ಪ ಡಿ.ಎಚ್ . ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಿರೇಕೆರೂರು-ರಟ್ಟೀಹಳ್ಳಿ
ಕೋಟ್ -
ನಮ್ಮ ಗ್ರಾಮಗಳಲ್ಲಿಸುಮಾರು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ದುರಸ್ತಿ ಕಾಣದೇ ಇರುವುದರಿಂದ ಜನರಿಗೆ ಸಮಸ್ಯೆಯಾಗಿದೆ.ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಿ ಸರಿಪಡಿಸಿಕೊಡಬೇಕು.
-ಬುಳ್ಳಾಪುರ, ಸಣ್ಣಗುಬ್ಬಿ ಗ್ರಾಮದ ಜನರು ಒತ್ತಾಯ.
ಫೋಟೋ ಶೀರ್ಷಿಕೆ:-ಮಾ.7.ರಟ್ಟೀಹಳ್ಳಿ.1
ರಟ್ಟೀಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ.
ಮಾ.7.ರಟ್ಟೀಹಳ್ಳಿ.1.ಎ-
ರಟ್ಟೀಹಳ್ಳಿ ತಾಲೂಕಿನ ಸಣ್ಣಗುಬ್ಬಿ ಗ್ರಾಮದಲ್ಲಿಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು.

