ಕೊಂಜಾಡಿ: ಜಾತ್ರಾ ಮಹೋತ್ಸವ ಸಂಪನ್ನ

Contributed bysanthoshshetty48@gmail.com|Vijaya Karnataka

ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವಾರ್ಷಿಕ ಕೆಂಡಸೇವೆ ಮತ್ತು ಜಾತ್ರಾ ಮಹೋತ್ಸವವು ಯಶಸ್ವಿಯಾಗಿ ಜರುಗಿತು. ವಿವಿಧ ಧಾರ್ಮಿಕ ವಿಧಿವಿಧಾನಗಳು, ಹೋಮ, ಹವನ, ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಕೆಂಡೋತ್ಸವ, ರಂಗಪೂಜೆ, ಢಕ್ಕೆ ಬಲಿ, ಸುತ್ತುಬಲಿ ಜರುಗಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

annual festival in konjadi celebrates devotees enthusiasm

ವಿಕ ಸುದ್ದಿಲೋಕ ಗೋಳಿಯಂಗಡಿ

ಆರ್ಡಿ ಸಮೀಪದ ಕೊಂಜಾಡಿ ಶ್ರೀದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಕೆಂಡಸೇವೆ, ಜಾತ್ರಾ ಮಹೋತ್ಸವವು ವೇ.ಮೂ.ಸದಾಶಿವ ಭಟ್ ಬೇಳಂಜೆ ನೇತೃತ್ವದಲ್ಲಿಅರ್ಚಕ ಶ್ರೀನಾಥ್ ಜಿ.ಎನ್ . ದಲ್ಲಿನಾನಾ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಸಂಪನ್ನಗೊಂಡಿದೆ.

ಬೆಳಗ್ಗೆ ಪುಣ್ಯಾಹ ವಾಚನ, ಪ್ರಧಾನ ಹೋಮ, ಕಲಶಾಭೀಷೇಕ, ಚಂಡಿಕಾ ಹೋಮ, ಹಣ್ಣು ಕಾಯಿ, ಹರಿವಾಣ ನೈವೇದ್ಯ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು , ತೆಕ್ಕಟ್ಟೆ ಕನ್ನುಕೆರೆ ಓಂಕಾರ್ ಕಲಾವಿದರಿಂದ ನಾಟಕ, ದರ್ಶನ, ಕೆಂಡೋತ್ಸವ, ರಂಗಪೂಜೆ, ಢಕ್ಕೆ ಬಲಿ, ಸುತ್ತುಬಲಿ, ಪ್ರಸಾದ ವಿತರಣೆ ನಡೆಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭರತ್ .ಬಿ ಶೆಟ್ಟಿ ಕೊಂಜಾಡಿ ಕೆಳಮನೆ, ಕಾರ್ಯದರ್ಶಿ ಟಿ.ಸೀತಾರಾಮ ಶೆಟ್ಟಿ ತೊನ್ನಾಸೆ, ಸದಸ್ಯೆ ಲೋಲಾಕ್ಷಿ ಶೆಟ್ಟಿ ಕೊಂಜಾಡಿ, ಪ್ರೇಮ ತೊನ್ನಾಸೆ, ಸದಸ್ಯ ಮಲ್ಲುನಾಯ್ಕ ಕಲ್ಮರ್ಗಿ, ಗೋವಿಂದ ನಾಯ್ಕ ಗಂಟುಬೀಳು, ಮಂಜು ಕೊಂಜಾಡಿ, ಸೀತಾರಾಮ ನಾಯ್ಕ ಗಂಟುಬೀಳು ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಕ್ಯಾ: ಆರ್ಡಿ ಸಮೀಪದ ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವು ಇತ್ತೀಚೆಗೆ ಸಂಪನ್ನಗೊಂಡಿದೆ.

ಫೋಟೋ ಫೈಲ್ ನೇಮ್ : 8 ಗೋಳಿಯಂಗಡಿ 2 ಕೊಂಜಾಡಿ