*ನೆಟ್ಟಣಿಗೆ ಕ್ಷೇತ್ರದ ವಾರ್ಷಿಕ ಮಹೋತ್ಸವ ಸಂಪನ್ನ

Contributed byajithswarga@gmail.com|Vijaya Karnataka

ಬೆಳ್ಳೂರು ನೆಟ್ಟಣಿಗೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ಸಂಪನ್ನಗೊಂಡಿದೆ. ಧ್ವಜಾವರೋಹಣ, ನವಕಾಭಿಷೇಕ, ಮಂಗಳಾರತಿ ಜರುಗಿದೆ. ಶನಿವಾರ ರಾತ್ರಿ ಶೃಂಗಾರ ಉತ್ಸವ, ಬಲಿ, ವಿಶೇಷ ಬೆಡಿ ಸೇವೆಗಳು ನಡೆದವು. ಫೆಬ್ರವರಿ 9ರಂದು ಹುಲಿ ಭೂತ ಮತ್ತು ಪಟ್ಟದರಸು ಬೀರ್ನಾಳ ದೈವಗಳ ನೇಮ ನಡೆಯಲಿದೆ. ಅರಶಿನ ಪ್ರಸಾದ ವಿತರಣೆ ಮಾಡಲಾಗುವುದು.

annual festival of netranige temple divine decorations services and offerings

ಬೆಳ್ಳೂರು: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ಭಾನುವಾರ ಬೆಳಗ್ಗೆ ಧ್ವಜಾವರೋಹಣ, ಮಂಗಳಾರತಿ, ನವಕಾಭಿಷೇಕ, ಮಂತ್ರಾಕ್ಷತೆಯೊಂದಿಗೆ ಸಂಪನ್ನಗೊಂಡಿತು.

ಶನಿವಾರ ರಾತ್ರಿ ಶ್ರೀ ದೇವರ ಶೃಂಗಾರ ಉತ್ಸವ ಬಲಿ, ವಸಂತ ಕಟ್ಟೆಪೂಜೆ, ಅವಭೃತ ಸ್ನಾನ, ಧಿಶ್ರೀ ದುರ್ಗಾಸೇವೆ, ವಿಶೇಷ ಬೆಡಿ ಸೇವೆ ಶ್ರೀ ದೇವರ ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ ಸಮಾರಂಭಗಳು ನಡೆದುವು. ಫೆ. 9ರಂದು ಸಂಜೆ 4ಕ್ಕೆ ಶ್ರೀ ದೇವರ ಪ್ರಧಾನ ದೈವ ಹುಲಿ ಭೂತ ಮತ್ತು ಪಟ್ಟದರಸು ಬೀರ್ನಾಳ ದೈವಗಳ ನೇಮ, ಅರಶಿನ ಪ್ರಸಾದ ವಿತರಣೆ ನಡೆಯಲಿದೆ.

8 ಪಿಎಲ್ ಸಂಪನ್ನ: ಶ್ರೀ ದೇವರ ಮಹಾದರ್ಶನ ಬಲಿ.