ವಿಕ ಫೋಕಸ್
ಏರುತ್ತಲೇ ಇದೆ ಬಿಸಿಲ ಬೇಗೆ
ಬೆಂಗಳೂರು ಗ್ರಾಮಾಂತರದಲ್ಲಿಕನಿಷ್ಠ 20ರಿಂದ 35 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ಏರಿಕೆ | ಜನರ ಆರೋಗ್ಯ ಕಾಪಾಡಲು ಆರೋಗ್ಯ ಇಲಾಖೆ ಸಿದ್ಧತೆ
ಆದರ್ಶ ಕೋಡಿ ಬೆಂಗಳೂರು ಗ್ರಾಮಾಂತರ
್ಚಧಿada್ಟsha.kಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಚಳಿಗಾಲದಲ್ಲಿಕನಿಷ್ಠ ತಾಪಮಾನದಿಂದ ನಡುಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರು, ಈಗ ಬಿಸಿಲ ಬೇಗೆಗೆ ಬಸವಳಿಯುತ್ತಿದ್ದಾರೆ. ತಾಪಮಾನ ಏರುತ್ತಿದ್ದಂತೆ ಮನೆಯಿಂದ ಹೊರ ಬರುವುದೇ ಕಷ್ಟ ಎಂಬಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಬೇಸಿಗೆ ಹಿನ್ನೆಲೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಜನವರಿವರೆಗೂ ಇದ್ದ ಚಳಿಯ ವಾತಾವರಣ ಮರೆಯಾಗಿ ಬಿಸಿಲಿನ ತಾಪ ಹೆಚ್ಚಾಗಿದೆ. ಸದ್ಯ ಜಿಲ್ಲೆಯಲ್ಲಿಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ನಿಂದ ಮಧ್ಯಾಹ್ನದ ವೇಳೆಗೆ ಗರಿಷ್ಠ ತಾಪಮಾನ 34 ರಿಂದ 35 ಡಿಗ್ರಿ ಸೆಲ್ಸಿಯಸವರೆಗೂ ದಾಖಲಾಗುತ್ತಿದೆ. ಇದರಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀಳುವ ಸಾಧ್ಯತೆ ಇದೆ. ಅದರಲ್ಲೂಮಕ್ಕಳು, ಹಿರಿಯರ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಭೀತಿಯಿದ್ದು, ಈಗಾಗಲೇ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಸಲಹೆ ಹಾಗೂ ಬೇಸಿಗೆಯ ಸಂದರ್ಭದಲ್ಲಿಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಈಗಾಗಲೇ ಅಗತ್ಯ ಕ್ರಮವಹಿಸಿದೆ.
ಸದ್ಯ ಬಿಸಿ ಗಾಳಿಯ ಪ್ರಭಾವ ಜಿಲ್ಲೆಯನ್ನು ಹೆಚ್ಚಾಗಿ ಬಾಧಿಸುತ್ತಿದೆ. ಬೆಳಗ್ಗೆ 10 ಗಂಟೆಗೆ ಬಿಸಿಲು ನೆತ್ತಿ ಸುಡುವಂತಿರಲಿದೆ. ಸಂಜೆ 5 ಗಂಟೆಯಾದರೂ ಇದರ ಪ್ರಭಾವ ಕಡಿಮೆಯಾಗುತ್ತಿಲ್ಲ. ಇದರಿಂದಾಗಿ ಜನರು ಓಡಾಡುವುದೇ ಸವಾಲಾಗಿ ಪರಿಣಮಿಸುವಂತಾಗಿದೆ.
ಆರೋಗ್ಯದ ಮೇಲೆ ಪರಿಣಾಮ:
ಸಾಮಾನ್ಯವಾಗಿ ಅತಿ ಹೆಚ್ಚು ತಾಪಮಾನದಿಂದಾಗಿ ಜ್ವರದಿಂದ ಬಳಲುತ್ತಿರುವವರಲ್ಲಿಮೂರ್ಛೆಯಂತಹ ರೋಗದ ಲಕ್ಷಣ ಕಂಡು ಬರುತ್ತದೆ. ಶಾಖದ ಬಳಲಿಕೆಯಿಂದಾಗಿ ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವುದು ಕಂಡುಬರಲಿದೆ. ಶಾಖದ ಆಘಾತದಂತಹ ಸಮಸ್ಯೆಯಿಂದ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ನಿರ್ಜಲೀಕರಣ ಕಂಡುಬರುವುದರಿಂದ ಹೆಚ್ಚಿನ ಪ್ರಮಾಣದಲ್ಲಿನೀರಿ ಕುಡಿಯಬೇಕಿದೆ.
ಜಾಗೃತಿ ಮೂಡಿಸಲು ಸೂಚನೆ:
ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಲಹೆಯಂತೆ ಆಸ್ಪತ್ರೆಗಳು, ಕೈಗಾರಿಕೆಗಳು, ಜನಸಂದಣಿ ಸ್ಥಳಗಳಲ್ಲಿಅಗ್ನಿ ಸುರಕ್ಷತೆಯ ನಾನಾ ಅಂಶಗಳ ಮೇಲೆ ಆಗಾಗ ತಪಾಸಣೆ ಕೈಗೊಂಡು ಅಗ್ನಿ ಸುರಕ್ಷತೆಯ ಬಗ್ಗೆ ತರಬೇತಿಗೂ ಕ್ರಮವಹಿಸುವುದು, ಎಲ್ಲಾಸಾರ್ವಜನಿಕ ಸ್ಥಳಗಳಲ್ಲಿಅಗ್ನಿ ಸುರಕ್ಷತಾ ಆಡಿಟ್ ನಡೆಸುವುದು, ರಾಸಯನಿಕ ದ್ರವ್ಯಗಳು ಮತ್ತು ಇತರೆ ದ್ರವ್ಯ ಪದಾರ್ಥಗಳನ್ನು ಶೇಖರಣೆ ಮಾಡಿರುವಂತಹ ಗೋದಾಮುಗಳಲ್ಲಿಅಗ್ನಿ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಸೂಚನೆ¿åನ್ನು ನೀಡಲಾಗಿದೆ.
ಆಸ್ಪತ್ರೆಗಳು ಸಜ್ಜು
ಸಾಮಾನ್ಯವಾಗಿ ಮುಂಗಾರು ಮುನ್ನ ಎಲ್ಲಾಗ್ರಾಪಂಗಳಲ್ಲಿಮುಂದಿನ ಮಳೆಗಾಲದಲ್ಲಿಎದುರಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತದೆ. ಆದರೆ ಈ ಬಾರಿ ತಾಪಮಾನ ಹೆಚ್ಚಳವಾಗುವ ಸಾಧ್ಯತೆಯಿರುವ ಹಿನ್ನೆಲೆ ಈಗಾಗಲೇ ಗ್ರಾಪಂಗಳಲ್ಲಿಈ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೇ, ಜಿಲ್ಲೆಯಾದ್ಯಂತ ಬೇಸಿಗೆ ಅವಧಿಯಲ್ಲಿಎದುರಾಗಬಲ್ಲಆರೋಗ್ಯ ಸಮಸ್ಯೆಗಳಿಗೆ ಅಗತ್ಯವಾದ ಔಷಧಿಗಳನ್ನು ಸಂಗ್ರಹಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ತಜ್ಞರ ಸಲಹೆಯೇನು?
* ಹೆಚ್ಚಿನ ಪ್ರಮಾಣದಲ್ಲಿನೀರನ್ನು ಕುಡಿಯಬೇಕು
* ತಿಳಿ ಬಣ್ಣದ ಸಡಿಲವಾದ ಹತ್ತಿ ಬಟ್ಟೆ ಧರಿಸುವುದು
* ಕಾರ್ಬೊನೇಟೆಡ್ ತಂಪು ಪಾನೀಯ ತಪ್ಪಿಸುವುದು
* ಮೂರ್ಛೆ, ಅನಾರೋಗ್ಯ ಎನಿಸಿದರೆ ವೈದ್ಯರ ಸಲಹೆ ಪಡೆಯಬೇಕು
* ಕಲ್ಲಂಗಡಿ, ಕರ್ಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್ ಸೇರಿದಂತೆ ನೀರಿನಾಂಶಯುಕ್ತ ಆಹಾರ ಸೇವಿಸಿ
ಕೋಟ್ ,
ಹೆಚ್ಚಿನ ತಾಪಮಾನದ ಹಿನ್ನೆಲೆಯಲ್ಲಿಈಗಾಗಲೇ ನೀಡಿದ ಸೂಚನೆ ಸಮರ್ಪಕವಾಗಿ ಪಾಲಿಸಬೇಕು. ಕುಡಿಯುವ ನೀರು ಸರಬರಾಜು ಮಾಡುವ ಬಗ್ಗೆ ಸ್ಥಳೀಯ ಆಡಳಿತಗಳು ಅಗತ್ಯ ಕ್ರಮವಹಿಸಬೇಕು.
-ಹೊನ್ನಾಂಬ ಎಸ್ | ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣೆ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಆಯುಕ್ತಾಲಯ
ಕೋಟ್ ,
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಬೇಸಿಗೆ ಹಿನ್ನೆಲೆಯಲ್ಲಿಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿಮುನ್ನೆಚ್ಚರಿಕೆಯಿಂದಾಗಿ ಒಆರ್ ಎಸ್ , ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಈಗಾಗಲೇ ಸಂಗ್ರಹಿಸಿಟ್ಟುಕೊಳ್ಳಲಾಗಿದೆ.
-ಡಾ.ಲಕ್ಕಕೃಷ್ಣರೆಡ್ಡಿ | ಜಿಲ್ಲಾಆರೋಗ್ಯಾಧಿಕಾರಿ, ಬೆಂಗಳೂರು ಗ್ರಾಮಾಂತರ
ಫೋಟೋ: 0803ವಿಕೆ1: ಸಾಂದರ್ಭಿಕ ಚಿತ್ರ.

