ಪೆರ್ಮುದೆ : ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿಭಾನುವಾರ ವೈವಿಧ್ಯಮಯ ಕಾರ ್ಯಕ್ರಮಗಳೊಂದಿಗೆ ಮಹಿಳಾ ದಿನಾಚರಣೆ ನಡೆಯಿತು.
ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಐರಿನ್ ರೆಬೆಲ್ಲೊಅವರು ‘ಕೌಟುಂಬಿಕ ಬದುಕು, ಮಹಿಳೆಯರ ಆರೋಗ್ಯ’ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಧರ್ಮಗುರು ವಂ.ಫಾ. ಹೆರಾಲ್ಡ್ ಡಿಸೋಜ ಮಹಿಳಾ ದಿನಾಚರಣೆಯ ಸಂದೇಶ ನೀಡಿ ಎಲ್ಲಮಹಿಳೆಯರಿಗೆ ಶುಭ ಹಾರೈಸಿದರು.ವಂ. ಫಾ. ಕ್ಲೋಡ್ ಕೋರ್ಡಾ, ಇಗರ್ಜಿಯ ಪಾಲನಾ ಸಮಿತಿ ಉಪಾದ್ಯಕ್ಷ ಲ್ಯಾನ್ಸಿ ಮೊಂತೆರೊ, ಕಾರ ್ಯದರ್ಶಿ ಐರಿನ್ ಜ್ಯೋತಿ ಡಿಸೋಜ, ಇಪ್ಪತ್ತೊಂದು ಆಯೋಗಗಳ ಸಂಚಾಲಕಿ ಡೋರಿನ್ ಪಿರೇರಾ, ಕೆಥೋಲಿಕ್ ಸಭಾ ಸ್ತ್ರೀಹಿತ ಸಂಚಾಲಕಿ ನಿರ್ಮಲ ಕ್ರಾಸ್ತ ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿ ಅಭಿನಂದನೆ ಗೀತೆ, ನೃತ್ಯ ಪ್ರದರ್ಶನ, ಆಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಯಿತು.
ಶಾಂತಿಪ್ರಭಾ ಡಿಸೋಜ ಸ್ವಾಗತಿಸಿ, ರೇಶ್ಮಾ ಕ್ರಾಸ್ತ ವಂದಿಸಿದರು. ಡೆಫ್ನಿ ಸ್ಮಿತಾ ಡಯಾಸ್ ಕಾರ ್ಯಕ್ರಮ ನಿರೂಪಿಸಿದರು.
....
ಚಿತ್ರ: 8ಕೆಎಸ್ ಎಲ್ ಪೆರ್ಮುದೆ-ಪೆರ್ಮುದೆಯಲ್ಲಿಮಹಿಳಾ ದಿನಾಚರಣೆ ಸಂಭ್ರಮ ನಡೆಯಿತು.

