ಭಕ್ತಿಯಿಂದ ಭಗವಂತನಿಗೆ ಹತ್ತಿರ

Contributed bypuruapo@gmail.com|Vijaya Karnataka

ನರಸಿಂಹರಾಜಪುರದಲ್ಲಿ ನಡೆದ ಶ್ರೀರಾಮ ಪರಿವಾರ ದೇವತೆಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಬಸ್ತಿಮಠದ ಶ್ರೀ ಲಕ್ಷಿತ್ರ್ಮೕಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಭಕ್ತಿ ಮಾರ್ಗದ ಮಹತ್ವ ಸಾರಿದರು. ರಾಮನ ಆದರ್ಶಗಳನ್ನು ಪಾಲಿಸಬೇಕು ಎಂದರು. ಆರ್ಥಿಕವಾಗಿ ಹಿಂದುಳಿದವರಲ್ಲಿ ಧರ್ಮ ಉಳಿದಿದೆ ಎಂದು ಸುಧಾಕರ ಶೆಟ್ಟಿ ಹೇಳಿದರು. ಬಡವರ ಶ್ರಮದಿಂದ ಸುಂದರ ದೇವಾಲಯ ನಿರ್ಮಾಣವಾಗಿದೆ.

closer to god through devotion at bastimat

ನರಸಿಂಹರಾಜಪುರ: ಭಕ್ತಿಯಿಂದ ಭಗವಂತನಿಗೆ ಹತ್ತಿರವಾಗಬೇಕೆ ವಿನಹಃ ಹಣದಿಂದ, ಅಧಿಕಾರದಿಂದ ಅಲ್ಲಎಂದು ಬಸ್ತಿಮಠದ ಶ್ರೀಲಕ್ಷಿತ್ರ್ಮೕಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿಶ್ರೀರಾಮ ಮತ್ತು ಪರಿವಾರ ದೇವತೆಗಳ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿಆಶೀರ್ವಚನ ನೀಡಿದರು. ರಾಮನ ಆದರ್ಶವನ್ನು ನಾವು ಪಾಲಿಸಬೇಕು. ರಾಮನನ್ನು ನಾವು ದೇವರಾಗಿ ಕಾಣಲಿಲ್ಲ. ಅವರನ್ನು ಒಬ್ಬ ನಾಯಕನಾಗಿ ಕಂಡುಕೊಂಡಿದ್ದೇವೆ. ರಾಮನ ಆಡಳಿತದಲ್ಲಿರಾಜ್ಯ ಸಮೃದ್ಧವಾಗಿತ್ತು. ಅದ್ದರಿಂದ ಪ್ರತಿಯೊಬ್ಬರು ನಾವು ವಾಸಿಸುತ್ತಿರುವ ಜಾಗ ರಾಮರಾಜ್ಯವಾಗಿರಲಿ ಎಂದು ಬಯಸುತ್ತಾರೆ. ಶ್ರೀರಾಮನು ಹಲವಾರು ಸಮಸ್ಯೆಗಳನ್ನು ಎದುರಿಸಿದ ಮೇಲೆ ನಮಗೆ ಅವರ ಅದರ್ಶಗಳ ಬಗ್ಗೆ ಪರಿಚಯವಾಗಿದ್ದು ಎಂದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರ ಮನೆಯಲ್ಲಿಮಾತ್ರ ಧರ್ಮ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿವಾಸಿಸುತ್ತಿರುವವರು ಬಡವರಾಗಿದ್ದರು ಅವರು ಹೃದಯ ಶ್ರೀಮಂತಿಕೆಯಿಂದ ಕೂಡಿದೆ. ಅವರ ಬೇವರಿನ ಹನಿಯಿಂದ ಸುಂದರವಾದ ದೇವಾಲಯ ನಿರ್ಮಾಣವಾಗಿದೆ ಎಂದು ಹೇಳಿದರು. ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಪಿ.ಅರ್ .ಸದಾಶಿವ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್ .ಅಶೀಶ್ ಕುಮಾರ್ , ಮಾಜಿ ಅಧ್ಯಕ್ಷೆ ಜುಬೇದಾ, ನಾಗಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪೂರ್ವ ರಾಘು, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಪಿ.ಅರ್ .ಸುಕುಮಾರ್ , ಪ್ರಶಾಂತಶೆಟ್ಟಿ, ಶ್ರೀರಾಮ ದೇವಾಲಯದ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು. ದೇವಾಲಯದ ಗೌರವಾಧ್ಯಕ್ಷ ಸುಂದರಣ್ಣ, ಸದಸ್ಯರಾದ ರಮೇಶ್ , ಮಂಜು, ರಾಜಕುಮಾರ್ , ಅಭಿನವ ಗಿರಿರಾಜ್ , ರಾಜಪ್ಪ, ಪುಟ್ಟಯ್ಯ ಇದ್ದರು.