ವಿಕ ಸುದ್ದಿಲೋಕ ಚಿಕ್ಕಮಗಳೂರು ಕಾಂಗ್ರೆಸ್ ಮುಖಂಡ ರಾದ ಚೇತನಾ ಅವರ ಮೇಲೆ ಹಲ್ಲೆನಡೆಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ, ಕಾಂಗ್ರೆಸ್ ಮುಖಂಡ ರಾಹಿಲ್ ಷರೀಪ್ ನನ್ನು ಜಿಲ್ಲಾಪೊಲೀಸರು ನೇಪಾಳದ ಗಡಿಯಲ್ಲಿಬಂಧಿಸಿದ್ದಾರೆ. ಕಳೆದ ವಾರ ಚೇತನಾ ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆನಡೆಸಿದ್ದ ಆರೋಪ ರಾಹಿಲ್ ಷರೀಪ್ ಮೇಲಿದೆ. ಕೃತ್ಯದ ಬಳಿಕ ಈತ ಪರಾರಿಯಾಗಿದ್ದ. ಆರೋಪಿಯ ಪತ್ತೆಗಾಗಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನು ರಚಿಸಿದ್ದರು. ಇನ್ಸ್ ಫೆಕ್ಟರ್ ಅಭಯ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ರಾಹಿಲ್ ಷರೀಪ್ ನನ್ನು ಬಂಧಿಸುವಲ್ಲಿಯಶಸ್ವಿಯಾಗಿದೆ.

