ಹನಗೋಡು ಖೊ-ಖೋ
ಆಟಗಾರರಿಗೆ ರೈತಸಂಘದ ಗೌರವ
ವಿಕ ಸುದ್ದಿಲೋಕ ಹುಣಸೂರು
ತಾಲೂಕಿನ ಹನಗೋಡು ಸರಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಖೋ-ಖೋ ಕ್ರೀಡಾಪಟುಗಳು ವಿಭಾಗ ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿಭಾಗಿಯಾಗಿ ಶಾಲೆ-ಕಾಲೇಜಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುವ ಆಟಗಾರರನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಹುಣಸೂರು ಘಟಕದ ವತಿಯಿಂದ ಗೌರವಿಸಲಾಯಿತು.
ಹನಗೋಡು ಪ್ರೌಢಶಾಲೆಯಲ್ಲಿನಡೆದ ಸರಳ ಸಮಾರಂಭದಲ್ಲಿ ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಸ್ವಾಮಿಗೌಡ ಹಾಗೂ ಪಿರಿಯಾಪಟ್ಟಣ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಾವೇರಮ್ಮ ಮಾತನಾಡಿ, ‘‘ಈ ಕ್ರೀಡಾಪಟುಗಳೆಲ್ಲರೈತರ ಮಕ್ಕಳೇ ಆಗಿರುವುದನ್ನು ಗುರುತಿಸಿ, ಪೋ›ತ್ಸಾಹಿಸಲಾಗುತ್ತಿದೆ,’’ ಎಂದರು.
ರೈತ ಸಂಘಧ ತಾಲೂಕು ಅಧ್ಯಕ್ಷ ಮತ್ತು ಎಸ್ ಡಿಎಂಸಿ ಸದಸ್ಯರಾದ ಕಾಮಗೌಡನಳ್ಳಿ ತೀರ್ಥಕುಮಾರ್ ಮಾತನಾಡಿ, ‘‘ತಿ.ನರಸಿಪುರ ತಾಲೂಕಿನ ಕುರುಬೂರಿನ ಖೋ-ಖೋ ಕ್ರೀಡಾಪಟುಗಳ ರೀತಿಯೇ, ಈ ಎಲ್ಲಾಆಟಗಾರರೆಲ್ಲರೂ ಕಾಮಗೌಡನಹಳ್ಳಿ ಗ್ರಾಮದವರೇ ಆಗಿರುವುದು ನಮಗೂ ಹೆಮ್ಮೆಯಾಗಿದೆ. ಇವರಲ್ಲಿಮತ್ತಷ್ಟು ಕ್ರೀಡಾ ಉತ್ಸಾಹ ತುಂಬುವ ಸಲುವಾಗಿ ಪೋ›ತ್ಸಾಹಿಸಲಾಗುತ್ತಿದ್ದು, ರೈತ ಸಂಘ ಹಾಗೂ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತೇವೆ,’’ ಎಂದು ಘೋಷಿಸಿದರು.
ಉಪ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ಮಾತನಾಡಿ, ‘‘ಗ್ರಾಮೀಣ ಭಾಗದ ಆಟಗಾರರು ಯಾವುದೇ ಕ್ಲಬ್ ನಲ್ಲಿತರಬೇತಿ ಪಡೆಯದೆ, ಕಾಮಗೌಡನಹಳ್ಳಿಯವರೇ ಆದ ಸತೀಶ್ , ಸಂತೋಷ್ ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಸನ್ನಕುಮಾರ್ ಅವರಿಂದ ತರಬೇತಿ ಪಡೆದು ರಾಜ್ಯಮಟ್ಟದವರೆಗೆ ಭಾಗವಹಿಸುವ ಮೂಲಕ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿತಂದಿದ್ದಾರೆ. ಇಂತಹ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಕರ ಸಮ್ಮುಖದಲ್ಲಿಗೌರವಿಸುತ್ತಿರುವುದು ಶಾಲೆಗೆ ಹೆಮ್ಮೆ,’’ ಎಂದರು.
ಈ ವೇಳೆ ಎಸ್ ಡಿಎಂಸಿ ಅಧ್ಯಕ್ಷÜ ಹರೀಶ್ , ಸದಸ್ಯೆ ರುಕ್ಮಿಣಿ, ರೈತ ಸಂಘದ ಮಲ್ಲೇಶ್ , ಪ್ರಕಾಶ್ , ಕಂಠಿ, ರಂಜುಕುಮಾರ್ ಮಹದೇವ, ಲೋಕೇಶ್ ಹಾಗೂ ಶಿಕ್ಷಕರು ಇದ್ದರು.
8ಎಚ್ ಯುಎನ್ -1
ಹನಗೋಡು ಪ್ರೌಡಶಾಲೆಯಲ್ಲಿಖೋ-ಖೋ ಆಟಗಾರರನ್ನು ರೈತ ಸಂಘ-ಹಸಿರುಸೇನೆ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಸ್ವಾಮಿಗೌಡ, ತೀರ್ಥಕುಮಾರ್ , ಕಾವೇರಮ್ಮ, ಉಪಪ್ರಾಂಶುಪಾಲ ಸಂತೋಷ್ ಕುಮಾರ್ ಮತ್ತಿತರಿದ್ದರು.

