ಕೆರೆಗಳ ಹೂಳು ತೆಗೆದರೆ ಅಂತರ್ಜಲ ವೃದ್ಧಿ

Contributed bysidramappasn@gmail.com|Vijaya Karnataka

ತರೀಕೆರೆ ತಾಲೂಕಿನ ಕೊರಟೀಕೆರೆ ಗ್ರಾಮದ ಸರಸ್ವತಿ ಕಟ್ಟೆ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಆರಂಭವಾಗಲಿದೆ. ಇದರಿಂದ ಅಂತರ್ಜಲ ಮಟ್ಟ ಹಾಗೂ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯು ರಾಜ್ಯಾದ್ಯಂತ 929 ಕೆರೆಗಳನ್ನು ಪುನಶ್ಚೇತನಗೊಳಿಸಿದೆ. ಬಡವರ, ಅಸಹಾಯಕರ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ. ಇದು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾದರಿಯಾಗಿದೆ.

increase of groundwater through lake rejuvenation

ವಿಕ ಸುದ್ದಿಲೋಕ ತರೀಕೆರೆ ಕೆರೆಗಳ ಹೂಳೆತ್ತುವುದರಿಂದ ಮೂಲಕ ಅಂñ Üರ್ಜಲ ಮಟ್ಟ ಹಾಗೂ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಹೇಳಿದರು. ತಾಲೂಕಿನ ಕೊರಟೀಕೆರೆ ಗ್ರಾಮದ ಸರಸ್ವತಿ ಕಟ್ಟೆ ಕೆರೆಯಲ್ಲಿಅಭಿವೃದ್ಧಿ ಸಮಿತಿ, ಕೊರಟೀಕೆರೆ ಗ್ರಾ.ಪಂ. ಆಶ್ರಯದಲ್ಲಿಹೂಳೆತ್ತುವ ಕಾಮ ಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಧರ್ಮಸ್ಥಳ ಯೋಜನೆಯು ರೈತರಿಗೆ, ಗ್ರಾಮಗಳಿಗೆ ಅನುಕೂಲವಾಗುವ ಕಾರ್ಯಕ್ರಮ ಗಳಿಗೆ ಆದ್ಯತೆ ನೀಡುತ್ತಿದೆ. ರಾಜ್ಯಾದ್ಯಂತ ಇದು ವರೆಗೆ 929 ಕೆರೆಗಳನ್ನು ಪುನಶ್ಚೇತನಗೊಳಿಸಿ, ಹಸ್ತಾಂತರ ಮಾಡಲಾಗಿದೆ. ಬಡವರ, ಅಸಹಾಯಕರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ, ಸಮುದಾಯದ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ ಎಂದರು. ಜಿಲ್ಲಾಜನಜಾಗೃತಿ ವೇದಿಕೆ ಸದಸ್ಯ ಕೆ.ಬಿ. ಮಲ್ಲಪ್ಪ ಮಾತನಾಡಿ, ಧರ್ಮಸ್ಥಳ ಯೋಜನೆಯು ವಾತ್ಸಲ್ಯ ಮನೆ ನಿರ್ಮಾಣ, ಮಾಸಾಶನ, ಸುಜ್ಞಾನನಿಧಿ, ಶಿಷ್ಯವೇತನ, ಮದ್ಯ ವರ್ಜನ ಶಿಬಿರ ಮತ್ತಿತರೆ ಹಲವು ಜನೋಪ ಯೋಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಾದರಿಯಾಗಿದೆ ಎಂದರು. ಮುಖಂಡ ಚಂದ್ರಶೇಖರ್ , ಗ್ರಾ.ಪಂ. ಮಾಜಿ ಅಧ್ಯಕ್ಷೆ ತನುಜಾ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನೀಲಕಂಠಪ್ಪ, ಗ್ರಾಮಸ್ಥರಾದ ಶೇಖರಪ್ಪ, ಸ್ವಾಮಿ, ರಮೇಶ್ , ವಲಯ ಮೇಲ್ವಿಚಾರಕ ಮಂಜುನಾಥ್ , ಕೃಷಿ ಮೇಲ್ವಿಚಾರಕ ಸಂತೋಷ್ , ಸೇವಾಪ್ರತಿನಿಧಿ ಆಶಾ ಇದ್ದರು.