ಸರಕಾರಿ ಶಾಲೆಯಲ್ಲಿಗ್ರಂಥಾಲಯ

Contributed byvenkatesh.pavitra@gmail.com|Vijaya Karnataka

ಕಣಬಗಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು. ಚೆಸ್‌ ಸಂಸ್ಥೆ, ಚಿರನೂತನ ಸಂಸ್ಥೆ ಮತ್ತು ಪ್ರಥಮ್‌ ಬುಕ್ಸ್‌ ಸಹಯೋಗದಲ್ಲಿ ಇದು ಆರಂಭಗೊಂಡಿದೆ. 50ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. ಮಕ್ಕಳ ಕಲಿಕೆ ಮತ್ತು ವೈಜ್ಞಾನಿಕ ಮನೋಭಾವ ವೃದ್ಧಿಗೆ ಪುಸ್ತಕಗಳು ಸಹಕಾರಿಯಾಗಲಿವೆ. ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

new library in government school enlightens students through books

ವಿಕ ಸುದ್ದಿಲೋಕ ಅಜ್ಜಂಪುರ ಪಟ್ಟಣಕ್ಕೆ ಸಮೀಪದ ಕಣಬಗಟ್ಟೆಯ ಸರ ಕಾರಿ ಪ್ರಾಥಮಿಕ ಶಾಲೆಯಲ್ಲಿಚೆಸ್ ಸಂಸ್ಥೆ ಹಾಗೂ ಚಿರನೂತನ ಸಂಸ್ಥೆ ವತಿಯಿಂದ ಪ್ರಥಮ್ ಬುಕ್ಸ್ ಸಹಕಾರದಲ್ಲಿ1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಪ್ರಾರಂಭಿಸಲಾಯಿತು. ಇದರ ಸೌಲಭ್ಯವನ್ನು 50ಕ್ಕೂ ಹೆಚ್ಚು ಮಕ್ಕಳು ಪಡೆಯಲಿದ್ದು, ಮಕ್ಕಳ ಪ್ರಾಯೋಗಿಕ ಕಲಿಕೆ, ಅಭ್ಯಾಸ ಮತ್ತು ವೈಜ್ಞಾನಿಕ ಮನೋಭಾವವನ್ನು ಅಭಿವೃದ್ಧ್ಧಿಪಡಿಸಲು ಪುಸ್ತಕಗಳು ಸಹಾಯಕವಾಗಲಿವೆ. ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ , ಸರಕಾರಿ ಶಾಲೆಗಳಲ್ಲಿಉತ್ತಮ ಶಿಕ್ಷಣ ದೊರೆಯುತ್ತಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗೆ ಭೌತಿಕ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಲಲಾಗುವುದು ಎಂದು ಭರವಸೆ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿವಿಜೇತರಾದ ಪೋಷಕರು, ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಚೆಸ್ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ಕೀರ್ತಿರಾಜ್ , ಎಸ್ .ಡಿ.ಎಂ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ್ , ಮುಖ್ಯ ಶಿಕ್ಷಕಿ ಸವಿತಾ, ಸಹ ಶಿಕ್ಷಕರಾದ ಗಾಯಿತ್ರಿ, ಧನಂಜಯ, ಮಂಜುಳ, ಬಿಂದು, ಗ್ರಾಮ ಪಂಚಾಯಿತಿ ಸದಸ್ಯ ಅರುಣ, ಬಸಪ್ಪ ಇತರರು ಇದ್ದರು.