ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Contributed byjohn.dsouza@timesofindia.com|Vijaya Karnataka

ಬಸ್ರೂರು ಶಾರದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಹಳ್ಳಿಹೊಳೆ ಸುಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪನ್ನಗೊಂಡಿತು. ನಿವೃತ್ತ ಪ್ರಾಧ್ಯಾಪಕ ಎಚ್‌.ಜಗದೀಶ ಅವರು ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಜೀವನ ಪಾಠ ಕಲಿಯಲು ಸಹಕಾರಿ ಎಂದರು. ಪ್ರಿನ್ಸಿಪಾಲ್‌ ಡಾ. ಚಂದ್ರಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

nss annual camp closing ceremony professor jagadish emphasizes personal development

ವಿಕ ಸುದ್ದಿಲೋಕ ಕುಂದಾಪುರ

ಬಸ್ರೂರು ಶಾರದಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಹಳ್ಳಿಹೊಳೆ ಸುಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಜರುಗಿತು.

ನಿವೃತ್ತ ಪ್ರಾಧ್ಯಾಪಕ ಎಚ್ .ಜಗದೀಶ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಜೊತೆಗೆ ಜೀವನ ಪಾಠವನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.

ಪ್ರಿನ್ಸಿಪಾಲ್ ಡಾ. ಚಂದ್ರಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಶೆಟ್ಟಿ, ಶ್ರೀನಿವಾಸ ಪೂಜಾರಿ, ಉಷಾಲತಾ ಶಿವರಾಮ ಪೂಜಾರಿ, ಜಯರಾಮ್ ಪೂಜಾರಿ, ಸುಬ್ರಾಯ ಕನ್ನಂತ ಕಾಲೇಜಿನ ಆಡಳಿತಾಧಿಕಾರಿ ಮೋಹನ್ ಕೆ.ಎನ್ ., ಉಷಾ, ಪಲ್ಲವಿ ಉಪಸ್ಥಿತರಿದ್ದರು.

ಸಹ ಶಿಬಿರಾಧಿಕಾರಿ ಮನವಿ ಕೆ.ಕೆ. ಸ್ವಾಗತಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಎನ್ ಎಸ್ ಎಸ್ ಘಟಕದ ಅಧಿಕಾರಿ ಡಾ. ರವಿಚಂದ್ರ ವಂದಿಸಿದರು.

ಪೋಟೊ//8ಕೆ-ಎನ್ ಎಸ್ ಎಸ್ //. ಎನ್ ಎಸ್ ಎಸ್ ವಾರ್ಷಿಕ ಶಿಬಿರ ಸಮಾರೋಪ.