ವಿಕಸುದ್ದಿಲೋಕ ಸಿದ್ದಾಪುರ
ರಾಜಕೀಯವು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ರಾಜಕೀಯ ವಿಜ್ಞಾನದ ಅಧ್ಯಯನವು ಜನರಲ್ಲಿನಾಗರಿಕ ಪ್ರಜ್ಞೆ ಹೆಚ್ಚಿಸುತ್ತದೆ ಎಂದು ಉದ್ಯಮಿ ಶ್ರೀನಾಥ್ ಪೈ ಸಿದ್ದಾಪುರ ಹೇಳಿದರು.
ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆದ ರಾಜ್ಯಶಾಸ್ತ್ರ ಪಠ್ಯ ವಿಷಯವಾದ ರಾಜಕೀಯ ಸಮಾಜ ಆರ್ಥಿಕತೆ ವಿಷಯ ಕುರಿತು ರಾಜ್ಯಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಿನ್ಸಿಪಾಲ್ ದಿನೇಶ್ ಹೆಗ್ಡೆ ಮಾತನಾಡಿದರು. ಕಾಲೇಜು ಪ್ರಿನ್ಸಿಪಾಲ್ ಡಾ. ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷೆ ಡಾ. ಜಯಶ್ರೀ ಉಪಸ್ಥಿತರಿದ್ದರು.
ಪ್ರಸ್ತುತ ವೈ.ಎನ್ . ಸ್ವಾಗತಿಸಿದರು. ಉಪನ್ಯಾಸಕರಾದ ಪಾಂಡುರಂಗ ನಿರೂಪಿಸಿದರು. ರಮೇಶ್ ವಂದಿಸಿದರು.
ಪೊಟೊ08ಎಸೈಡಿ ಕಾಲೇಜು
ಶಂಕರನಾರಾಯಣ ಕಾಲೇಜಿನಲ್ಲಿನಡೆದ ರಾಜ್ಯಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರವನ್ನು ಉದ್ಯಮಿ ಶ್ರೀನಾಥ್ ಪೈ ಸಿದ್ದಾಪುರ ಉದ್ಘಾಟಿಸಿದರು.

