‘ಎಸ್ ಸಿ, ಎಸ್ ಟಿ ಮೀಸಲು ಇಳಿಕೆಗೆ ಖಂಡನೆ’

Contributed byvinayakbhavimani11@gmail.com|Vijaya Karnataka

ಕರ್ನಾಟಕ ಸರಕಾರ ಒಟ್ಟು ಮೀಸಲಾತಿಯನ್ನು ಶೇ.56 ರಿಂದ 50ಕ್ಕೆ ಇಳಿಸಿದೆ. ಎಸ್‌ಸಿ ಮೀಸಲು ಶೇ.17 ರಿಂದ 15ಕ್ಕೆ, ಎಸ್‌ಟಿ ಮೀಸಲು ಶೇ.7 ರಿಂದ 3ಕ್ಕೆ ಇಳಿದಿದೆ. ಈ ಕ್ರಮ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತಂದಿದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿಚಂದ್ರ ತಳವಾರ ಹೇಳಿದ್ದಾರೆ. ದಲಿತ ಹಾಗೂ ಆದಿವಾಸಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಸರಕಾರ ಈ ತೀರ್ಮಾನ ಮರುಪರಿಶೀಲಿಸಿ ಹಿತ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

protest against reduction of sc st reservations

‘ಎಸ್ ಸಿ, ಎಸ್ ಟಿ ಮೀಸಲು ಇಳಿಕೆಗೆ ಖಂಡನೆ’

ವಿಕ ಸುದ್ದಿಲೋಕ ಗದಗ

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಒಟ್ಟು ಶೇ.56 ಮೀಸಲನ್ನು 50ಕ್ಕೆ ಇಳಿಸಿ ಎಸ್ ಸಿ ಸಮುದಾಯಕ್ಕಿದ್ದ ಶೇ.17 ಮೀಸಲನ್ನು 15ಕ್ಕೆ, ಎಸ್ ಟಿ ಸಮುದಾಯಕ್ಕಿದ್ದ ಶೇ.7 ಮೀಸಲನ್ನು ಶೇ.3ಕ್ಕೆ ಇಳಿಕೆ ಮಾಡಿರುವ ಕ್ರಮವನ್ನು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿಚಂದ್ರ ತಳವಾರ ಖಂಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಕ್ರಮದಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಿದೆ. ದಲಿತ ಹಾಗೂ ಆದಿವಾಸಿ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ಈ ತೀರ್ಮಾನವನ್ನು ಮರುಪರಿಶೀಲಿಸಿ, ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳ ಹಿತ ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.