ಸಂಡೂರಿನಲ್ಲಿಮಹಿಳಾ ಕ್ರೀಡಾಕೂಟ
ವಿಕ ಸುದ್ದಿಲೋಕ ಸಂಡೂರು
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಪಟ್ಟಣದ ಎಸ್ ಆರ್ ಎಸ್ ಮೈದಾನದಲ್ಲಿಮಹಿಳಾ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.
ಮಹಿಳೆಯರಿಗಾಗಿ ಥ್ರೋಬಾಲ್ , ಲೆಮನ್ ಸ್ಪೂನ್ ಓಟ, ಹಗ್ಗ ಜಾಗ್ಗಾಟ, ಮ್ಯೂಜಿಕಲ್ ಚೇರ್ , 100 ಮೀ. 200 ಮೀ. ಓಟ, ಗುಂಡು ಎಸೆತ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸಾಕಷ್ಟು ಮಹಿಳೆಯರು ಉತ್ಸಾಹದಿಂದ ಭಾಗಿಯಾಗಿದ್ದರು. ಮಾ.10 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದು ಕ್ಲಾಸಿಕ್ , ಮಾರ್ಡನ್ , ಜಾನಪದ, ಗುಂಪು ಮತ್ತು ಏಕಾಂಗಿ ಗಾಯನ, ಸಂಗೀತ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳಲ್ಲಿವಿಜೇತರಾದವರಿಗೆ ಮಾ.14 ರಂದು ಆದರ್ಶ ಕಲ್ಯಾಣ ಮಂಟಪದಲ್ಲಿಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಬಹುಮಾನ ವಿತರಣೆ ಮಾಡಲಾಗುತ್ತದೆ.
ಶಾಸಕಿ ಅನ್ನಪೂರ್ಣ ತುಕಾರಾಮ್ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದರು. ತಾಪಂ ಇಒ ಮಡಗಿನ ಬಸಪ್ಪ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್ ಗೌಡ, ಶಾಸಕರ ಆಪ್ತ ಸಹಾಯಕ ಆದಿನಾರಾಯಣ, ಗ್ಯಾರಂಟಿ ಯೋಜನೆಯ ಜಿಲ್ಲಾಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ಬಿಇಒ ಡಾ.ಐ.ಆರ್ .ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್ .ಕೆ.ವೆಂಕಟೇಶ, ಸಿಡಿಪಿಒ ಪಿ.ನಾಗರಾಜ, ಬಿಸಿಎಂ ಅಧಿಕಾರಿ ವೀರಭದ್ರಯ್ಯ ಹಿರೇಮಠ, ಟಿಎಚ್ ಒ ಡಾ.ಭರತ್ ಕುಮಾರ್ , ಎಸ್ಟಿ ಕಲ್ಯಾಣಾಧಿಕಾರಿ ರಂಗನಾಥ ದೇಸಾಯಿ, ಗ್ರೇಡ್ -2 ತಹಸೀಲ್ದಾರ್ ಸುಧಾ ಅರಮನೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ, ನಾನಾ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಇದ್ದರು.
ಬಿಎಲ್ ವೈ 7 ಎಸ್ಡಿಆರ್ 2: ಸಂಡೂರಿನ ಎಸ್ ಆರ್ ಎಸ್ ಮೈದಾನದಲ್ಲಿಹಮ್ಮಿಕೊಂಡಿದ್ದ ಮಹಿಳಾ ಕ್ರೀಡಾಕೂಟದ ಸಮಾರೋಪದಲ್ಲಿಶಾಸಕಿ ಅನ್ನಪೂರ್ಣ ತುಕಾರಾಮ್ ಭಾಗಿಯಾಗಿದ್ದರು.

