ಲವಲವಿಕೆ ಸುದ್ದಿಲೋಕ ಒತ್ತಡ ಮತ್ತು ಡಿಜಿಟಲ್ ಜಗತ್ತಿನಲ್ಲಿಮಾನವ ಸಂಬಂಧಗಳು ಸಾಕಷ್ಟು ಸಂಕೀರ್ಣವಾಗುತ್ತಿವೆ. ಈ ದಿನಗಳಲ್ಲಿಸಂಬಂಧಗಳನ್ನು ಶಾಶ್ವತವಾಗಿಡಲು ಸಹ ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಈ ನಿಟ್ಟಿನಲ್ಲಿ777 ರಿಲೇಶನ್ ರೂಲ್ ಗಮನ ಸೆಳೆಯುತ್ತಿದೆ. ಕೆಲವರು ಈ ನಿಯಮ ತಮ್ಮ ದಿನಚರಿಯನ್ನು ಪರಿವರ್ತಿಸಿದೆ ಎಂದರೆ, ಇನ್ನು ಕೆಲವರು ಇದನ್ನು ನಿಜ ಜೀವನದಲ್ಲಿಅಳವಡಿಸಿಕೊಳ್ಳುವುದು ತುಂಬಾ ಕಷ್ಟ ಎಂದಿದ್ದಾರೆ. ಸಂಬಂಧ ಸೂತ್ರ ಪ್ರತಿ 7 ದಿನಗಳಿಗೊಮ್ಮೆ ಡೇಟ್ ನೈಟ್ , ಪ್ರತಿ 7 ವಾರಗಳಿಗೊಮ್ಮೆ ವಾರಾಂತ್ಯದ ವಿಹಾರ, ಪ್ರತಿ 7 ತಿಂಗಳಿಗೊಮ್ಮೆ ದೊಡ್ಡ ವೆಕೇಶನ್ ಗೆ ಹೋಗುವುದನ್ನು 777 ರಿಲೇಶನ್ ಶಿಪ್ ರೂಲ್ ಎನ್ನಲಾಗುತ್ತದೆ. ಇದು ದಂಪತಿಯ ಸ್ಥಿರ, ಉದ್ದೇಶಪೂರ್ವಕ ಮತ್ತು ಉತ್ತಮ ಸಮಯವನ್ನು ಒಟ್ಟಿಗೆ ಕಳೆಯಲು ಪ್ರೋತ್ಸಾಹಿಸುತ್ತದೆ ಹಾಗೂ ವೃತ್ತಿಯಲ್ಲಿಬಿಝಿ ಇರುವ ಜೋಡಿಗಳಿಗೆ ತಮ್ಮ ವೈಯಕ್ತಿಕ ವಿಷಯಗಳಿಗೆ ಪರಸ್ಪರ ಅದ್ಯತೆ ನೀಡಬೇಕು ಎಂಬುದನ್ನು ನೆನಪಿಸುತ್ತದೆ. ವೀಕ್ಲಿಡೇಟಿಂಗ್ ನಲ್ಲಿಭೇಟಿಯಾಗಿ ಒಟ್ಟಿಗೆ ಕಾಫಿ ಕುಡಿಯುವುದು, ಮುಕ್ತವಾಗಿ ಮಾತನಾಡುವುದು, ಲಾಂಗ್ ಡ್ರೈವ್ ಹೋಗುವುದು ಮತ್ತು ಪ್ರತಿ ಏಳು ತಿಂಗಳಿಗೊಮ್ಮೆ ಪ್ರವಾಸ ಹೋಗಿ ಹೊಸ ಸ್ಥಳ ಅನ್ವೇಷಿಸುವುದು ಜೋಡಿಗಳ ಪಾಲಿಗೆ ರೋಮಾಂಚನಕಾರಿಯಾಗಿರುತ್ತದೆ ಎನ್ನುತ್ತಾರೆ ಡೇಟಿಂಗ್ ತಜ್ಞರು. ಬದಲಾವಣೆಯ ಸಮಯ ಸಂಬಂಧದಲ್ಲಿಪರಸ್ಪರ ಆಳ ಮತ್ತು ನಿಜ ಸಂಪರ್ಕ ಬೆಳೆಸಲು ದುಬಾರಿ ಅಥವಾ ವಿಸ್ತಾರವಾದ ಯೋಜನೆಗಳ ಅಗತ್ಯವಿಲ್ಲ. ಒಟ್ಟಿಗೆ ಗುಣಮಟ್ಟದ ಸಮಯ ಕಳೆಯುವಂತಹ ಸರಳ ಜೀವನವು ದಂಪತಿಯಲ್ಲಿಸದೃಢ ಬಂಧ ಮೂಡಲು ಸಹಾಯ ಮಾಡುತ್ತದೆ. ವಾರಾಂತ್ಯದ ಡೇಟಿಂಗ್ ಗಳು ಇದಕ್ಕೆ ಸಹಕಾರಿಯಾಗಿವೆ. ಫೋನ್ , ವೃತ್ತಿ ಸಂಬಂಧಿತ ಕೆಲಸ ಎಲ್ಲವನ್ನು ಪಕ್ಕಕ್ಕಿಟ್ಟು, ಪರಸ್ಪರ ಆಲಿಸುವಿಕೆ ಸಹ ಶಾಶ್ವತ ಬಂಧ ರಚಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಪ್ರವಾಸ ಕೂಡ ಹೊಸ ನೆನಪುಗಳನ್ನು ಸೃಷ್ಟಿಸುತ್ತದೆ. ಹಾಗಂತ 777 ನಿಯಮವು ಸಂಬಂಧವನ್ನು ಪುನರುಜ್ಜೀವನಗೊಳಿಸಲು ಇರುವ ಮ್ಯಾಜಿಕ್ ಪರಿಹಾರವಲ್ಲ. ಬದಲಾಗಿ ಇದು ಈಗಿನ ಫಾಸ್ಟ್ ಜಗತ್ತಿನಲ್ಲಿವ್ಯಕ್ತಿಗೆ ತಮ್ಮ ಸಂಗಾತಿಗೆ ಆದ್ಯತೆ ನೀಡಲು ನೆನಪಿಸುತ್ತದೆ. ಬಾಕ್ಸ್ 777 ನಿಯಮದ ಪ್ರಯೋಜನ -ಜೋಡಿಗಳ ಉತ್ತಮ ಉದ್ದೇಶವನ್ನು ಕಾರ್ಯರೂಪಕ್ಕೆ ತರುತ್ತದೆ ಮತ್ತು ಪರಸ್ಪರ ಅನ್ಯೋನ್ಯತೆ ಹೆಚ್ಚಿಸುತ್ತದೆ. -ನಿಯಮಿತ ಸೆಲೆಬ್ರೇಶನ್ ಗಳು ಭಾವನಾತ್ಮಕ ಮತ್ತು ದೈಹಿಕ ನಿಕಟತೆಯನ್ನು ಗಾಢವಾಗಿಸುತ್ತವೆ. -ಈ ನಿಯಮ ದಂಪತಿ ಪರಸ್ಪರ ದೂರವಾಗುವುದನ್ನು ತಡೆಯುತ್ತದೆ. ಬಾಕ್ಸ್ ಬಾಧಕವೂ ಇದೆ -ಎಲ್ಲಾದಂಪತಿಗೂ ಪ್ರವಾಸ ಹೋಗಲು ಸಮಯ ಅಥವಾ ಹಣವಿರುವುದಿಲ್ಲ. -777 ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಕಷ್ಟ. ಇದನ್ನು ನಿರ್ವಹಿಸಲು ಸಾಕಷ್ಟು ಒತ್ತಡ ಉಂಟಾಗಬಹುದು. -ಉದ್ಯೋಗ, ಮಕ್ಕಳು ಅಥವಾ ತುರ್ತು ಪರಿಸ್ಥಿತಿಗಳು ದೈನಂದಿನ ವೇಳಾಪಟ್ಟಿಗೆ ಅಡ್ಡಿಪಡಿಸಬಹುದು.

