ಜಾಹೀರಾತು ಗ್ರಾಹಕರು
9ಹೆಚ್ ಯುಎನ್ 01
ಫೋಟೋ ಶೀರ್ಷಿಕೆ
ಹುಣಸಗಿ ಪಟ್ಟಣದ ಎಸ್ .ಕೆ.ಸಮೂಹ ಶಿಕ್ಷಣ ಸಂಸ್ಥೆಯಲ್ಲಿರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಧಿಮಿತ್ತ ನಡೆದ ವಿಶೇಷ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ನಾಗಣ್ಣ ಸಾಹುಕಾರ ದಂಡಿನ ಉದ್ಘಾಟಿಸಿದರು. ಈ ಸಂದರ್ಭದಲ್ಲಿಗಣ್ಯರು ಉಪಸ್ಥಿತರಿದ್ದರು.
* ಹುಣಸಗಿ ಎಸ್ ಕೆ ಸಮೂಹ ಶಿಕ್ಷಣ ಸಂಸ್ಥೆಯಲ್ಲಿವಿಜ್ಞಾನ ವಸ್ತು ಪ್ರದರ್ಶನ
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಅಗತ್ಯ
ವಿಕ ಸುದ್ದಿಲೋಕ ಹುಣಸಗಿ
ಪಟ್ಟಣದ ಎಸ್ .ಕೆ.ಸಮೂಹ ಶಿಕ್ಷಣ ಸಂಸ್ಥೆಯಲ್ಲಿರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಧಿಮಿತ್ತ ವಿಜ್ಞಾನ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ, ವಿದ್ಯಾರ್ಥಿಗಳ ವಿಜ್ಞಾನ ಮೇಳ ಹಾಗೂ ನರ್ಸರಿ ವಿದ್ಯಾರ್ಥಿಗಳ ಗ್ರ್ಯಾಜುವೇಶನ್ ಡೇ ಕಾರ್ಯಕ್ರಮ
ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ನಾಗಣ್ಣ ಸಾಹುಕಾರ ದಂಡಿನ, ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಮಾತ್ರ ಸೀಮಿತಗೊಳಿಸದೆ ವಿದ್ಯಾರ್ಥಿಗಳ ಪ್ರತಿಭೆ ಗುಧಿರುಧಿತಿಸಲು ವೇದಿಕೆ ಕಲ್ಪಿಸುವುದು ಮುಖ್ಯವಾಗಿದೆ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಿರುವುದು ಒಳ್ಳೆಯ ಕಾರ್ಯವಾಗಿದೆ ಎಂದರು.
ಕಲಬುರಗಿಯ ಜ್ಞಾನ ಚಿಗುರು ಪೌಂಡೇಶನ್ ನ ಮಲ್ಲಿಕಾರ್ಜುನ ಬಂಕಲಗಿ ಮಾತನಾಡಿ, ಪ್ರಯೋಗಾತ್ಮಕ ಅಧ್ಯಯನ ಇಂದಿನ ಅಗತ್ಯ. ವಿಜ್ಞಾನಾಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸಂಶೋಧನಾ ಆಸಕ್ತಿ ಹೆಚ್ಚುತ್ತದೆ. ವಿಜ್ಞಾನವು ಸಮಾಜ ಪರಿವರ್ತನೆಯ ಶಕ್ತಿಯುತ ಸಾಧನವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಿಗೆಣ್ಣ ದೇಸಾಯಿ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ ದೇಸಾಯಿ ಮಾತನಾಡಿದರು.
ಈ ವೇಳೆ ನಾಗಣ್ಣ ಸಾಹುಕಾರ ದಂಡಿನ, ಮುರಿಗೆಣ್ಣ ದೇಸಾಯಿ, ನಿವೃತ್ತ ಪ್ರಾಂಶುಪಾಲ ಎಂ.ಎಸ್ .ಬಿರಾದಾರ, ಮಲ್ಲಿಕಾರ್ಜುನ ಬಂಕಲಗಿ, ಡಾ.ಶಂಕರಗೌಡ ಎಸ್ .ಗುಂಡಕನಾಳ, ಶ್ರೀಹರಿ ಕುಲಕರ್ಣಿ ಸೇರಿ ಗಣ್ಯರು ಉಪಸ್ಥಿತರಿದ್ದರು. ಪ್ರಾಂಶುಪಾಲ ಆರ್ .ಎನ್ .ಹೂಗಾರ ನಿರೂಪಿಸಿ, ವಂದಿಸಿದರು.
* ಸಾಧಕರಿಗೆ ಸನ್ಮಾನ:
ವಿಧಿಜ್ಞಾನ ಹಾಗೂ ಗಣಿತ ವಿಷಯದ ಶಿಧಿಕ್ಷಧಿಕಧಿರಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 50ಕ್ಕೂ ಹೆಚ್ಚು ಶಿಕ್ಷಕರಿಗೆ ವಿಜ್ಞಾನ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

