ಪ್ರೀತಿಯ ಗೌಪ್ಯತೆಗೆ ನೋ ಲಾಂಚ್ ರಿಲೇಶನ್ ಶಿಪ್

Contributed bybabitha.salian@timesgroup.com|Vijaya Karnataka

ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ಬಹಿರಂಗಪಡಿಸುವ ಹಾರ್ಡ್ ಲಾಂಚ್‌ ಟ್ರೆಂಡ್‌ ಬದಲಾಗುತ್ತಿದೆ. ಈಗ ಯುವ ಜೋಡಿಗಳು ತಮ್ಮ ಸಂಬಂಧವನ್ನು ಗೌಪ್ಯವಾಗಿಡಲು ನೋ ಲಾಂಚ್‌ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇದು ಖಾಸಗಿತನ ಕಾಪಾಡಿಕೊಳ್ಳಲು ಮತ್ತು ಬ್ರೇಕ್‌ಅಪ್‌ ನಂತರದ ಮುಜುಗರ ತಪ್ಪಿಸಲು ಸಹಾಯಕವಾಗಿದೆ. ಪ್ರೀತಿ ವೈಯಕ್ತಿಕ ವಿಷಯವಾಗಿದ್ದು, ಪ್ರದರ್ಶನದ ವಸ್ತುವಲ್ಲ ಎಂಬುದು ಇದರ ಹಿಂದಿನ ನಂಬಿಕೆಯಾಗಿದೆ.

no launch love a key strategy for relationship privacy

ಲವಲvk ಸುದ್ದಿ ಲೋಕ ್ಛಛಿಛಿdಚಿa್ಚk್ಝvkಃvಜ್ಜಿayka್ಟ್ಞaಠಿaka.್ಚಟಞ ಹಿಂದೆ ಪ್ರೀತಿ ಎಂಬುದು ಗುಟ್ಟಾಗಿರುತ್ತಿತ್ತು. ಆಮೇಲೆ ಸೋಶಿಯಲ್ ಮೀಡಿಯಾ ದಿಂದಾಗಿ ಗಂಡು ಹೆಣ್ಣಿನ ಒಡನಾಟವು ಫೋಟೊ ಶೂಟ್ , ಹ್ಯಾಶ್ ಟ್ಯಾಗ್ ಮತ್ತು ಹಾರ್ಡ್ ಲಾಂಚ್ ಎನ್ನುವಂತಾಯಿತು. ಇದರಲ್ಲಿಯುವ ಜೋಡಿಯು ತಮ್ಮ ಪ್ರೇಮ ಬಂಧಗಳನ್ನು ಜಗತ್ತಿಗೆ ಸಾರುವುದರಲ್ಲೇ ತೃಪ್ತಿ ಕಾಣುತ್ತಿದ್ದರು. ಆದರೆ ಈಗವರು ತಮ್ಮ ಪ್ರೀತಿಯನ್ನು ಪ್ರದರ್ಶಿಸುವುದಕ್ಕಿಂತ ಭಿನ್ನವಾಗಿ ಆ ಬಂಧವನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದಾರೆ. ಇದು ನೋ ಲಾಂಚ್ ಹೆಸರಿನಲ್ಲಿಖ್ಯಾತವಾಗಿದೆ. ಹೊಸ ಟ್ರೆಂಡ್ ಸೋಶಿಯಲ್ ಮೀಡಿಯಾದಲ್ಲಿಸಂಗಾತಿಯೊಂದಿಗೆ ಫೋಟೊ ಹಾಕಿ, ಹಾರ್ಟ್ ಇಮೋಜಿಗಳನ್ನು ಬಳಸಿ ನಾವು ರಿಲೇಶನ್ ಶಿಪ್ ನಲ್ಲಿದ್ದೇವೆ ಎಂದು ಅಧಿಕೃತವಾಗಿ ಘೋಷಿಸುವುದನ್ನು ಹಾರ್ಡ್ ಲಾಂಚ್ ಎನ್ನುತ್ತಾರೆ. ಸಂಗಾತಿಯ ಕೈ ಅಥವಾ ನೆರಳಿನ ಚಿತ್ರಗಳನ್ನು ಹಾಕಿ ಕುತೂಹಲ ಮೂಡಿಸುವುದನ್ನು ಸಾಫ್ಟ್ ಲಾಂಚ್ ಎನ್ನಲಾಗುತ್ತದೆ. ಈಗಿನ ಹೊಸ ನೋ ಲಾಂಚ್ ಟ್ರೆಂಡ್ ಜೋಡಿಗಳು ತಮ್ಮ ಸಂಬಂಧದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಒಂದೇ ಒಂದು ಸಣ್ಣ ಸುಳಿವು ಕೂಡ ನೀಡದೆ ಪ್ರೀತಿಯಲ್ಲಿತೊಡಗುವ ವಿಧಾನವಾಗಿದೆ. ಸಾಕಷ್ಟು ಸದ್ದು ಮಾಡುತ್ತಿರುವ ಈ ಹೊಸ ಟ್ರೆಂಡ್ ಪ್ರೀತಿಯಲ್ಲಿರುವ ಜೋಡಿಗಳು ತಮ್ಮ ಖಾಸಗಿತನ ಕಾಪಾಡಿಕೊಳ್ಳಲು ಬಳಸುವ ತಂತ್ರವಾಗಿದೆ. ಇಲ್ಲಿಪ್ರೀತಿ ಇರುತ್ತದೆ, ಆದರೆ ಅದಕ್ಕೆ ಡಿಜಿಟಲ್ ಪುರಾವೆಗಳು ಇರುವುದಿಲ್ಲ. ಪ್ರಭಾವಿ ವ್ಯಕ್ತಿಗಳ ಸಂಬಂಧಗಳು ಸಾರ್ವಜನಿಕವಾಗಿ ಹೇಗೆ ಹದಗೆಡು ತ್ತವೆ ಎಂಬುದನ್ನು ಗಮನಿಸುವ ಈಗಿನ ಪೀಳಿಗೆಯು ತಮ್ಮ ಸಂಬಂಧಗಳಲ್ಲಿಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸಹಜ ಬಾಂಧವ್ಯಕ್ಕೆ ಆದ್ಯತೆ ಈಗಿನ ಯುವಜನತೆ ಸೋಶಿಯಲ್ ಮೀಡಿಯಾದಿಂದ ಬೇಸತ್ತಿದ್ದಾರೆ. ತಮ್ಮ ಜೀವನದ ಎಲ್ಲವನ್ನೂ ಪೋಸ್ವ್ ಮಾಡಬೇಕು, ಲೈP್ಸ… ಮತ್ತು ಕಾಮೆಂಟ್ ಗಳ ಮೂಲಕ ತಮ್ಮ ಸಂಬಂಧಕ್ಕೆ ಸಮಾಜದ ಮುದ್ರೆ ಸಿಗಬೇಕು ಎಂಬ ಒತ್ತಡದಿಂದ ಹೊರಬರಲು ಬಯಸುತ್ತಿದ್ದಾರೆ. ಖಾಸಗಿತನಕ್ಕೆ ಹೆಚ್ಚು ಮಹತ್ವ ನೀಡಲು ಆರಂಭಿಸಿರುವ ಅವರು ಪ್ರೀತಿಯಲ್ಲಿಯೂ ಸಹಜ ಬಾಂಧವ್ಯವನ್ನು ಎದುರು ನೋಡುತ್ತಿದ್ದಾರೆ. ಇದೇ ರೀತಿ ಪ್ರೀತಿ ಎನ್ನುವುದು ಅಕ್ಷರಶಃ ಇಬ್ಬರ ನಡುವಿನ ವೈಯಕ್ತಿಕ ವಿಷಯ, ಅದು ಪ್ರದರ್ಶನದ ವಸ್ತುವಲ್ಲ. ಬೇರೆಯವರ ದೃಷ್ಟಿ ಅಥವಾ ಅನಗತ್ಯ ಪ್ರತಿಕ್ರಿಯೆಗಳಿಂದ ದೂರವಿದ್ದಾಗ ಸಂಬಂಧ ಹೆಚ್ಚು ನೈಸರ್ಗಿಕ ಮತ್ತು ಗಾಢವಾಗಿ ಬೆಳೆಯುತ್ತದೆ ಎಂಬುದು ಯುವ ಜೋಡಿಗಳ ನಂಬಿಕೆಯಾಗಿದೆ. ಬ್ರೇಕಪ್ ನಂತರದ ಮುಜುಗರ ತಪ್ಪಿಸಿಕೊಳ್ಳಲು ಕೂಡ ಪ್ರೇಮಿಗಳು ತಮ್ಮ ಪ್ರೀತಿಯನ್ನು ಗುಟ್ಟಾಗಿಡಲು ಬಯಸುತ್ತಾರೆ. ಅದ್ಧೂರಿಯಾಗಿ ಪ್ರೀತಿ ಸಾರಿದ ಜೋಡಿಗಳಿಗೆ ಒಂದೊಮ್ಮೆ ಪರಸ್ಪರ ದೂರವಾದಾಗ ಹಳೆಯ ಫೋಟೊಗಳನ್ನು ಡಿಲೀಟ್ ಮಾಡುವುದು ಅಥವಾ ಜನರ ಪ್ರಶ್ನೆಗಳಿಗೆ ಉತ್ತರಿಸುವುದು ದೊಡ್ಡ ತಲೆನೋವಾಗುತ್ತದೆ. ಇದನ್ನು ತಪ್ಪಿಸಲು ಅವರಿಗೆ ನೋ ಲಾಂಚ್ ರಿಲೇಶನ್ ಶಿಪ್ ಸುರಕ್ಷಿತ ದಾರಿಯಾಗಿದೆ.