ತೆರೆಯ ಮೇಲೆ ಹೋರಾಟದ ಕಥನ

Contributed bybabitha.salian@timesgroup.com|Vijaya Karnataka

ಚಲನಚಿತ್ರಗಳು ಜನರಿಗೆ ವಿಷಯಗಳನ್ನು ತಲುಪಿಸುವಲ್ಲಿ ಪ್ರಭಾವ ಬೀರುತ್ತವೆ. ಇತ್ತೀಚೆಗೆ ತೆರೆಕಂಡ 'ರೈಸ್‌ ಆಫ್‌ ಅಶೋಕ' ಚಿತ್ರವು ಕೆಳಜಾತಿಯವರ ಹೋರಾಟವನ್ನು ತೀವ್ರವಾಗಿ ತೋರಿಸಿದೆ. 'ಕಾಟೇರ' ಮತ್ತು 'ಲ್ಯಾಂಡ್‌ಲಾರ್ಡ್‌' ಸಿನಿಮಾಗಳು ಕೂಲಿ ಮತ್ತು ಭೂಮಿ ಹಕ್ಕುಗಳ ಹೋರಾಟವನ್ನು ಕಟ್ಟಿಕೊಟ್ಟಿವೆ. ಇಂತಹ ಕಥೆಗಳನ್ನು ತೆರೆಗೆ ತರುವ ಪ್ರಯತ್ನಕ್ಕೆ ಪ್ರೋತ್ಸಾಹ ಬೇಕಿದೆ. ಜನರಿಂದಲೂ ಇಂತಹ ಚಿತ್ರಗಳಿಗೆ ಬೆಂಬಲ ಸಿಗುತ್ತಿದೆ.

stories of struggle the struggle of ashoka and social messages in cinema

ಕಿರಣ್ ಚಂದ್ರ kಜ್ಟಿa್ಞ.ಚಿಃಠಿಜಿಞಛಿsಟ್ಛಜ್ಞಿdಜಿa.್ಚಟಞ ನಾವು ಓದಿದ ಪಠ್ಯಪುಸ್ತಕಗಳಲ್ಲೇ ಇತ್ತು, ಅಜ್ಜಿ, ಅಜ್ಜ ಹೇಳಿದ ಕಥೆಗಳಲ್ಲೂಇದಿತ್ತು. ಆದರೆ ಅದು ಸಿನಿಮಾವಾದಾಗ ಅರ್ಥವಾಗುವಷ್ಟು ಆಳವಾಗಿ ಹಾಗೇ ಸುಮ್ಮನೆ ಹೇಳಿದಾಗ ಅರ್ಥವಾಗದೆ ಉಳಿದಿದೆ. ಇದೇ ಈಗ ಇಂಥ ಸಿನಿಮಾಗಳು ಜನರ ಮನ ಗೆಲ್ಲಲು ಕಾರಣವಾಗುತ್ತಿದೆಯೇ? ಯಾವುದೇ ವಿಷಯವನ್ನು ಜನರಿಗೆ ತಲುಪಿಸಲು ಸಿನಿಮಾದ ಪ್ರಭಾವ ದೊಡ್ಡ ಮಟ್ಟದಲ್ಲಿಇರುತ್ತದೆ. ಈ ಕಾರಣಕ್ಕೇ ಸಿನಿಮಾಗಳಿಗೆ ಮೊದಲಿನಿಂದಲೂ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಇದನ್ನು ಕೆಲವು ಚಿತ್ರಗಳು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಗಮನಾರ್ಹ ವಿಷಯ. ಅಶೋಕನ ಹೋರಾಟದ ಹುಟ್ಟು: ಇತ್ತೀಚೆಗೆ ಬಿಡುಗಡೆಯಾದ ‘ರೈಸ್ ಆಫ್ ಅಶೋಕ’ ಸಿನಿಮಾದಲ್ಲಿಕ್ಷೌರ ವೃತ್ತಿಯವರು ಸೇರಿದಂತೆ ಕೆಳ ಜಾತಿಯವರು ಎಂದು ಕರೆಯಲ್ಪಡುತ್ತಿದ್ದವರು ಎಷ್ಟೆಲ್ಲಾಹೋರಾಟ ಮಾಡಿ ತಮಗೊಂದು ಸಾಮಾಜಿಕ ಸ್ಥಾನಮಾನ ತಂದುಕೊಂಡರು ಎಂಬುದನ್ನು ಹಲವರು ಕೆಲವು ಪಠ್ಯಗಳಲ್ಲಿಓದಿರುತ್ತಾರೆ. ಆದರೆ ಈ ಸಿನಿಮಾದಲ್ಲಿಅದನ್ನು ತೋರಿಸಿರುವ ರೀತಿಯಿಂದ ಪ್ರೇಕ್ಷಕರಿಗೆ ಅದರ ತೀವ್ರತೆಯ ಅರಿವಾಗಿದೆ. ಆಗಿನವರು ಅಷ್ಟೆಲ್ಲಾಹೋರಾಟ ಮಾಡಲು ಅನುಭವಿಸಿದ ನೋವುಗಳು, ಮೇಲ್ಜಾತಿಯವರು ಎಂದು ಮೆರೆದವರನ್ನು ಮಟ್ಟಹಾಕಲು ಪಟ್ಟ ಶ್ರಮ ಇತ್ಯಾದಿಯ ಸಿನಿಮಾ ರೂಪವು ಭಾವನಾತ್ಮಕವಾಗಿ ಹೆಚ್ಚು ಪರಿಣಾಮ ಬೀರಿದೆ. ರೆಟ್ರೊ ಕಥೆಗಳನ್ನು ಹೇಳುವುದೇ ಒಂದು ಸವಾಲು. ಹೀಗಿರುವಾಗ ‘ರೈಸ್ ಆಫ್ ಅಶೋಕ’ ಚಿತ್ರದಲ್ಲಿಈ ಹಿಂದೆಯಿದ್ದ ಕೆಲವು ಆಚರಣೆಗಳು, ದುಷ್ಟ ಪದ್ಧತಿಗಳನ್ನು ಕಣ್ಣಾರೆ ಕಂಡಂತೆ ತೆರೆಗಿಟ್ಟ ಜಾಣ್ಮೆಯನ್ನು ಪ್ರಶಂಸೆ ಮಾಡಲೇಬೇಕು. ಯಾವುದೇ ಬದಲಾವಣೆಗಾಗಿ ಆಗುವ ಕ್ರಾಂತಿಯನ್ನು ಸುಲಭವೆಂದು ಭಾವಿಸುವವರಿಗೆ ಈ ಸಿನಿಮಾ ವಾಸ್ತವ ತೋರಿಸಿದೆ. ಕಾಟೇರ ಮತ್ತು ಲ್ಯಾಂಡ್ ಲಾರ್ಡ್ ಕ್ರಾಂತಿ: ಕೂಲಿಗಳಿಗೆ ಸಮಾನ ವೇತನ, ಉಳುವವನೇ

ಭೂಮಿಯ ಒಡೆಯ ಸೇರಿದಂತೆ ಅನೇಕ ಮಹತ್ವದ ಕಾನೂನುಗಳು ಮತ್ತು ಅವುಗಳ ಹಿಂದೆ ನಡೆದ ಹೋರಾಟಗಳನ್ನು ಅಕ್ಷರ ರೂಪದಲ್ಲಿಓದಿ ನಮ್ಮದೇ ಕಲ್ಪನೆಯಲ್ಲಿಕಂಡಿದ್ದೇವೆ. ಅದರೆ ಅದನ್ನು ನಿಜವಾಗಿಯೂ ಅನುಭವಿಸಿದವರು ತಮ್ಮ

ಬದುಕು ಹೇಗಿತ್ತು, ಅದಕ್ಕೆ ಅಷ್ಟು ಮಹತ್ವ ಬರಲು ಕಾರಣವೇನು ಎಂಬುದನ್ನು ಸಿನಿಮೀಯವಾಗಿ ಕಟ್ಟಿಕೊಟ್ಟಾಗ ಹೆಚ್ಚು ಜನರನ್ನು ತಲುಪುತ್ತದೆ. ಜತೆಗೆ ‘ಕಾಟೇರ’ ಮತ್ತು ‘ಲ್ಯಾಂಡ್ ಲಾರ್ಡ್ ’ ಸಿನಿಮಾಗಳಲ್ಲಿಸಂವಿಧಾನದ ಸಂದೇಶವನ್ನು ಹೋರಾಟದ ಹಿನ್ನೆಲೆಗಳಲ್ಲಿಹೇಳಿರುವ ಪ್ರಯತ್ನಕ್ಕೆ ಹಾಗೂ ಅಂಥದ್ದೇ ಕಥೆಗಳ ಹುಡುಕಾಟ ಮತ್ತು ಅದನ್ನು ಸಿನಿಮಾ ರೂಪದಲ್ಲಿಹೆಣೆಯುವ ಕೆಲಸದಲ್ಲಿರುವ ಜಡೇಶ್ ಹಂಪಿಯಂಥ ನಿರ್ದೇಶಕರಿಗೆ ಪ್ರೋತ್ಸಾಹ ಬೇಕಿದೆ. ಈ ಥರದ ಅನೇಕ ಕಥೆಗಳು ಈ ಹಿಂದೆ ಕೂಡ ಬಂದಿವೆ. ಅದರೆ ಅವು ಡಾ. ರಾಜ್ ಕುಮಾರ್ ಕಾಲದ ಸಿನಿಮಾಗಳಿಗೆ ಸೀಮಿತವಾಗಿದ್ದವು. ಬರೀ ಮನರಂಜನೆಗಾಗಿ ಸಿನಿಮಾ ನೋಡಲು ಬರುವ ಜನರಿಗೆ ಇಂಥ ಕಥೆಗಳನ್ನು ತಲುಪಿಸುವ ಪ್ರಯತ್ನ ಇನ್ನಷ್ಟು ಆಗಬೇಕಿದೆ. ಇದಕ್ಕೆ ಜನರಿಂದಲೂ ಪ್ರೋತ್ಸಾಹ ಸಿಗುತ್ತದೆ ಎನ್ನುವುದಕ್ಕೆ ಈಗಾಗಲೇ ಗೆದ್ದಿರುವ ಇಂಥ ಸಾಕಷ್ಟು ಸಿನಿಮಾಗಳ ಉದಾಹರಣೆಯಿದೆ.