ಗ್ರಾಮ ಒನ್ ಯೋಜನೆ ಅರ್ಜಿ ಅಹ್ವಾನ

Contributed bymanjunath.juti@timesgroup.com|Vijaya Karnataka

ಗ್ರಾಮ ಒನ್‌ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ, ಹುಣಸಗಿ ತಾಲೂಕಿನ ಕೆಲವು ಗ್ರಾಮ ಪಂಚಾಯತಿಗಳಲ್ಲಿ ಅರ್ಜಿ ಕರೆಯಲಾಗಿದೆ. 750 ಕ್ಕೂ ಹೆಚ್ಚು ಸೇವೆಗಳನ್ನು ನೀಡುವ ಈ ಯೋಜನೆಗೆ ಮಾರ್ಚ್ 15ರೊಳಗೆ ಅರ್ಜಿ ಸಲ್ಲಿಸಬೇಕು.

grama one scheme online application invitation through seva sindhu

ಗ್ರಾಮ ಒನ್ ಯೋಜನೆ ಅರ್ಜಿ ಅಹ್ವಾನ

ಯಾದಗಿರಿ: ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್ ಫ್ರಾಂಚೈಸಿಗೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ತಿಳಿಸಿದ್ದಾರೆ.

ಯಾದಗಿರಿ ತಾಲೂಕಿನ ಕಡೇಚೂರು ಪಂಚಾಯಿತಿಯಲ್ಲಿ, ಗುರುಮಠಕಲ್ ತಾಲೂಕಿನ ಕಾಳೆಬೆಳಗುಂದಿ ಪಂಚಾಯಿತಿಯಲ್ಲಿ, ವಡಗೇರಾ ತಾಲೂಕಿನ ಐಕೂರ, ಬೆಂಡೆಬೆಂಳ್ಳಿ, ಗುಂಡಗುರ್ತಿ, ಹೈಯಾಳ(ಬಿ), ಟಿ.ವಡಗೇರಾ ಪಂಚಾಯಿತಿಯಲ್ಲಿ, ಸುರಪುರ ತಾಲೂಕಿನ ದೇವರಗೋನಾಲ, ಖಾನಾಪೂರ (ಎಸ್ .ಹೆಚ್ ), ಆಲ್ದಾಳ ಪಂಚಾಯಿತಿಯಲ್ಲಿಗ್ರಾಮ ಒನ್ , ಹುಣಸಗಿ ತಾಲೂಕಿನ ಗೆದ್ದಲಮರಿ ಪಂಚಾಯಿತಿಯಲ್ಲಿಗ್ರಾಮ ಒನ್ ಅರ್ಜಿ ಆಹ್ವಾನಿಸಿದೆ. ಗ್ರಾಮ ಒನ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾ ಸಿಂಧು ಯೋಜನೆಯಡಿ ರೂಪಿಸಲಾಗಿದೆ. ಸರಕಾರದ ಸೇವೆ ಮನೆ ಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ 750 ಕ್ಕೂ ಹೆಚ್ಚು ನಾಗರೀಕ ಸೇವೆಗಳನು ನೀಡಲಾಗುತ್ತಿದೆ. ಜಿಲ್ಲೆಯ ಕೆಲವು ಪಂಚಾಯತಿಗಳು ಗ್ರೇಡ್ 2 ನಿಂದ ಗ್ರೇಡ್ 1ಗೆ ಪಂಚಾಯತಿಗಳಾಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಥಾಪನೆಗಾಗಿ ಬಾಕಿ ಉಳಿದಿರುವ ಗ್ರಾಮ ಒನ್ ಕೇಂದ್ರಗಳಿಗೆ ಮಾ.15ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.