ನಾಫೆಡ್ ನಲ್ಲಿರಾಗಿ ಅಕ್ರಮ ಮಾರಾಟ ಯತ್ನ | ತಹಸೀಲ್ದಾರ್ ನೇತೃತ್ವದಲ್ಲಿದಾಳಿ

Contributed bytsdayananda@gmail.com|Vijaya Karnataka

ತಿಪಟೂರು ತಹಸೀಲ್ದಾರ್‌ ಮೋಹನ್‌ಕುಮಾರ್‌ ನೇತೃತ್ವದ ತಂಡವು ನಾಫೆಡ್‌ ಕೇಂದ್ರದಲ್ಲಿ ಅಕ್ರಮ ರಾಗಿ ಮಾರಾಟ ಯತ್ನವನ್ನು ಭೇದಿಸಿದೆ. ಬಂಡೀಹಳ್ಳಿ ಗೇಟ್‌ ಬಳಿ ಲಕ್ಷಾಂತರ ರೂ. ಮೌಲ್ಯದ ನೂರಾರು ರಾಗಿ ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆಯಿಂದ ಅಕ್ರಮವಾಗಿ ರಾಗಿ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ಅರ್ಹ ರೈತರಿಗೆ ತೊಂದರೆಯಾಗುವ ಈ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿದೆ.

operation led by tahasildar curbing illegal ragi sale at nafed

ವಿಕ ಸುಧಿದ್ದಿಧಿಲೋಕ ತಿಪಟೂರು ತಹಸೀಲ್ದಾರ್ ಮೋಹನ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನಾಫೆಡ್ ಕೇಂದ್ರದಲ್ಲಿಮಾರಾಟ ಮಾಡಲು ತರುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ನೂರಾರು ರಾಗಿ ಮೂಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ನಗರದ ಬಂಡೀಹಳ್ಳಿ ಗೇಟ್ ಬಳಿ ಅಕ್ರಮವಾಗಿ ಲಾರಿ ಮೂಲಕ ತರಿಸಿ ಟ್ರ್ಯಾಕ್ಟರ್ ಗೆ ತಂಬಿಕೊಂಡು, ನಂತರ ರೈತರ ಹೆಸರಿನಲ್ಲಿರಾಗಿ ಖರೀದಿ ಕೇಂದ್ರದಲ್ಲಿಮಾರಾಟ ಮಾಡುವ ಉದೇಶ ಹೊಂದಲಾಗಿತ್ತು. ಮಧ್ಯಾಹ್ನ 12 ಗಂಟೆ ಸಮಯದಲ್ಲಿಅಕ್ರಮವಾಗಿ ರಾಗಿ ತಂದು ಲಾರಿಯಿಂದ ಟ್ರ್ಯಾಕ್ಟರ್ ಗೆ ತುಂಬುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ತಹಸೀಲ್ದಾರ್ ಮೋಹನ್ ಕುಮಾರ್ , ಆಹಾರ ತನಿಖಾಧಿಕಾರಿಗಳಾದ ರೇಣುಕಾ ಪ್ರಸಾದ್ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಲಾರಿ

ಹಾಗೂ ಟ್ರ್ಯಾಕ್ಟರ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಹಾಲ್ಕುರಿಕೆ ಗ್ರಾಮದ ಸತೀಶ್ ಬಿನ್ ಮಲ್ಲಯ್ಯ ಎಂಬ ವ್ಯಕ್ತಿ ಮಾರಾಟ ಮಾಡುವ ಉದೇಶದಿಂದ ದಾವಣಗೆರೆಯಿಂದ ಲಾರಿ ಮೂಲಕ ರಾಗಿ ತರಿಸಿದ್ದಾನೆ. ಅಕ್ರಮವಾಗಿ ಖರೀದಿ ಕೇಂದ್ರದಲ್ಲಿರಾಗಿ ಮಾರಾಟ ಮಾಡಿದರೆ ಅರ್ಹ ರೈತರಿಗೆ ತೊಂದರೆಯಾಗುತ್ತದೆ ಎನ್ನುವುದು ರೈತರ ಆರೋಪವಾಗಿದೆ. ಸರಕಾರ ಇಂತಹುಗಳ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ತಹಸೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ಖಚಿತ ಮಾಹಿತಿ ಮೇರೆಗೆ ಈ ದಿನ ಬಂಡಿಹಳ್ಳಿ ಶೆಟ್ಟಿಕೆರೆ ರಸ್ತೆಯ ಎಡ ಭಾಗದಲ್ಲಿರುವ ಮಠದ ಮರುಳಪ್ಪ ಲೇಔಟ್ ನಲ್ಲಿಸತೀಶ್ ಬಿನ್ ಮಲ್ಲಯ್ಯ ಎಂಬುವರು ಅಕ್ರಮವಾಗಿ ರಾಗಿ ಸಂಗ್ರಹಿಸಿ ಲಾರಿಯಿಂದ ಟ್ರ್ಯಾಕ್ಟರ್ ಗೆ ಲೋಡ್ ಮಾಡುತ್ತಿದ್ದ ವೇಳೆ ದಾಳಿ ನಡೆಸಿ 119 ಚೀಲ ರಾಗಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಶಪಡಿಸಿಕೊಳ್ಳಲಾಗಿರುವ ರಾಗಿ ಚೀಲಗಳನ್ನು ಹಾಗೂ ವಾಹನಗಳನ್ನು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿರುತ್ತದೆ. ಟ್ರ್ಯಾಕ್ಟರ್ ಹಾಗೂ ಲಾರಿಯನ್ನು ಮಾಲು ಸಮೇತ ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.