3.1ಲಕ್ಷ ರೂ.ಗೆ ಪತಾಕೆ ಪಡೆದ ಕೊಪ್ಪಳದ ಪೂಜಾರ್ ರಂಗಪ್ಪ
ಬಂಡೆ ರಂಗನಾಥೇಶ್ವರ ರಥೋತ್ಸವ
ವಿಕ ಸುದ್ದಿಲೋಕ ಹಗರಿಬೊಮ್ಮನಹಳ್ಳಿ
ತಾಲೂಕಿನ ತಂಬ್ರಹಳ್ಳಿ ಬಂಡೆ ರಂಗನಾಥೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಮಂಗಳವಾರ ಜರುಗಿತು.
ಗ್ರಹಣದ ಹಿನ್ನೆಲೆಯಲ್ಲಿಹಲವರಿಗಿದ್ದ ಅನುಮಾನವನ್ನು ದೂರ ಮಾಡುವಂತೆ ಬೆಳಗಿನಿಂದಲೇ ಎಂದಿನಂತೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿ ವಿಶೇಷ ಪೂಜೆ ಜರುಗಿದವು.
ಲಕ್ಷಿತ್ರ್ಮೕದೇವಿ ಮತ್ತು ರಂಗನಾಥೇಶ್ವರ ಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂದಿಪುರ ಸುಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಥೋತ್ಸವಕ್ಕೂ ಮುನ್ನ ದೇಗುಲದಿಂದ ಇದೇವೇಳೆ ನಡೆದ ಹರಾಜಿನಲ್ಲಿಕೊಪ್ಪಳದ ಪೂಜಾರ್ ರಂಗಪ್ಪ ಇವರು 3,1,100 ರೂ.ಗೆ ಪತಾಕೆ ಪಡೆದರು. ಬಳಿಕ ನಾನಾ ವಾದ್ಯಗೋಷ್ಠಿಗಳೊಂದಿಗೆ ಗುಡ್ಡದ ಕೆಳಭಾಗದ ರಥಬೀದಿಯಲ್ಲಿಸ್ವಾಮಿಯ ರಥ ವಿಜೃಂಭಣೆಯಿಂದ ಸಾಗಿಬಂದಿತು. ಭಕ್ತರ ಜಯಘೋಷ ಮುಗಿಲು ಮುಟ್ಟಿತು. ತಾಲೂಕಿನ ಕಿತ್ನೂರು, ಮುತ್ಕೂರು, ರಾಮೇಶ್ವರ ಬಂಡಿ, ಚಿಲಗೋಡು, ಬನ್ನಿಗೋಳ ಸೇರಿ ನಾನಾ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು.
ಚಿತ್ರ : ವಿಎನ್ ಆರ್ 3ಎಚ್ ಬಿಎಚ್ 3
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಶ್ರೀಬಂಡೆ ರಂಗನಾಥೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

