ಯುವನಿಧಿ ಯೋಜನೆ ಕುರಿತ ಕಾರ್ಯಾಗಾರ
ವಿಕ ಸುದ್ದಿಲೋಕ ಗದಗ
ಯುವಕರು ಉದ್ಯೋಗ ತರಬೇತಿ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಗ್ಯಾರಂಟಿ ಅನುಷ್ಠಾ್ಟನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿಜಿಲ್ಲಾಉದ್ಯೋಗ ವಿನಿಮಯ ಕಚೇರಿ ಹಮ್ಮಿಕೊಂಡಿದ್ದ ಯುವನಿಧಿ ಯೋಜನೆ ಕುರಿತ ಕಾರ್ಯಾಗಾರದಲ್ಲಿಅವರು ಮಾತನಾಡಿದರು.
‘‘ಪದವಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿದ ನಿರುದ್ಯೋಗಿ ಯುವಕರಿಗೆ ಕೌಶಲ ಹಾಗೂ ಉದ್ಯೋಗಾವಕಾಶ ಸಿಗುವವರೆಗೆ ಆರ್ಥಿಕ ನೆರವು ನೀಡುವುದು ಯುವನಿಧಿ ಯೋಜನೆಯ ಉದ್ದೇಶವಾಗಿದೆ. ಪದವೀಧರರಿಗೆ ತಿಂಗಳಿಗೆ 3,000 ಹಾಗೂ ಡಿಪ್ಲೋಮಾ ಹೊಂದಿರುವವರಿಗೆ 1,500 ಮಾಸಿಕ ಭತ್ಯೆಯನ್ನು ಗರಿಷ್ಠ ಎರಡು ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು,’’ ಎಂದು ತಿಳಿಸಿದರು.
‘‘ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿಜಿಲ್ಲೆಶೇ.99.79ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಯೋಜನೆಗಳ ಸೌಲಭ್ಯ ಪಡೆಯುವಲ್ಲಿಸಮಸ್ಯೆಗಳಿದ್ದರೆ ಗ್ಯಾರಂಟಿ ಸಮಿತಿಯ ಕಚೇರಿಗಳನ್ನು ಸಂಪರ್ಕಿಸಬಹುದು,’’ ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿ, ‘‘ಯುವಕರು ಯುವನಿಧಿ ಹಣವನ್ನು ಪಾಕೆಟ್ ಮನಿ ಎಂದು ಬಳಸದೇ ಕೌಶಲ್ಯಾಭಿವೃದ್ಧಿಗೆ ಉಪಯೋಗಿಸಬೇಕು,’’ ಎಂದರು.
ಯುವನಿಧಿ ಹಾಗೂ ಸ್ವಯಂ ಉದ್ಯೋಗ ಯೋಜನೆಗಳ ಕುರಿತು ಆನಂದ ಹೊಂಬಳ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪಿ.ಡಿ. ಕರಿಗಾರ ಮಾತನಾಡಿದರು. ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಸಿಡಿಸಿ ಅಧ್ಯಕ್ಷ ವಿದ್ಯಾಧರ ದೊಡಮನಿ, ಉದ್ಯೋಗ ವಿನಿಮಯ ಅಧಿಕಾರಿ ಬಸವಂತಪ್ಪ ಪಿ., ಮೆಹಬೂಬ ಅರೀಫ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಎಸ್ .ಯು. ಸಜ್ಜನಶೆಟ್ಟರ್ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು.
4ಜಿಡಿಜಿ9-
ಗದಗ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿನಡೆದ ಯುವನಿಧಿ ಯೋಜನೆ ಕುರಿತ ಕಾರ್ಯಾಗಾರದಲ್ಲಿಬಿ.ಬಿ.ಅಸೂಟಿ ಮಾತನಾಡಿದರು.

