ನಿಯೋ ಹೆರಿಟೇಜ್ ಲುಕ್ ನಲ್ಲಿಅನನ್ಯಾ
ನಟಿ ಅನನ್ಯಾ ಪಾಂಡೆ ಅವರು ಇತ್ತೀಚೆಗೆ ಧರಿಸಿದ್ದ ಉಡುಗೆಯು ಕೇವಲ ಫ್ಯಾಷನ್ ಮಾತ್ರವಲ್ಲ, ಅದೊಂದು ಕಲಾತ್ಮಕ ಅಭಿವ್ಯಕ್ತಿಯಾಗಿ ಗಮನ ಸೆಳೆದಿದೆ.
ಆಕಾಶ ನೀಲಿಯ ಅಸ್ಮಾನಿ ಅನಾರ್ಕಲಿ ಸೆಟ್ ಬೇಸಿಗೆಯ ಈ ಹೊತ್ತಲ್ಲಿತಂಪಿನ ಅನುಭವ ನೀಡುವಂತಿದೆ. ಈ ಅನಾರ್ಕಲಿಯನ್ನು ಮಟ್ಕಾ ಸಿಲ್ಕ… ಬಟ್ಟೆಯಿಂದ ತಯಾರಿಸಲಾಗಿದ್ದು, ಇದು ಹಗುರ ಮತ್ತು ಐಷಾರಾಮಿ ನೋಟವನ್ನು ನೀಡುತ್ತದೆ. ಈ ಡ್ರೆಸ್ ನ ಕೆಳಭಾಗದ ವಿಸ್ತಾರ ಬರೋಬ್ಬರಿ ಒಂಬತ್ತು ಗಜಗಳಷ್ಟಿದೆ ಎನ್ನಲಾಗಿದೆ. ಇದರಲ್ಲಿಕುಶಲ ಕಲೆ ಪ್ರಮುಖವಾಗಿದ್ದು, ಕಮಲದ ಹೂವುಗಳು ಹಾಗೂ ಉಷ್ಣವಲಯದ ಗಿಡಮೂಲಿಕೆಗಳ ವಿನ್ಯಾಸವು ಇದರಲ್ಲಿಎದ್ದು ಕಾಣುತ್ತದೆ.
ಸಿಲ್ಕ… ಆರ್ಗನ್ಜಾ ದುಪಟ್ಟಾದ ಅಂಚುಗಳಲ್ಲಿಮೇಘಮಾಲೆಗಳನ್ನು ನೆನಪಿಸುವಂತಹ ವಿನ್ಯಾಸವಿದೆ. ಜೊತೆಗೆ ಮುತ್ತಿನ ಟಸೆಲ್ ಗಳನ್ನು ಬಳಸಲಾಗಿದೆ. ಕೊರಳಿನ ಮುತ್ತಿನ ಹಾರದಲ್ಲಿಚಂದ್ರನ ಆಕಾರದ ಪೆಂಡೆಂಟ್ ಇದೆ. ಕಿವಿಯಲ್ಲಿದೊಡ್ಡದಾದ ಚಾಂದ್ ಬಾಲಿ ಜುಮಕಿಗಳು ಹಾಗೂ ಕೂದಲಿಗೆ ಚಂದ್ರನ ಆಕಾರದ ಹೇರ್ ಆಕ್ಸೆಸರಿಸ್ ಬಳಸಲಾಗಿದೆ. ಒಟ್ಟಾರೆಯಾಗಿ ಈ ಲುಕ್ ಸಾಂಪ್ರದಾಯಿಕ ಶೈಲಿ ಮತ್ತು ಆಧುನಿಕ ನಿಯೋ-ಹೆರಿಟೇಜ್ ಫ್ಯಾಷನ್ ನ ಅದ್ಭುತ ಸಮ್ಮಿಲನವಾಗಿದೆ.

