ಕಾಳ ಸಂತೆಯಲ್ಲಿಮಾರಾಟ ತಡೆಗೆ ಕ್ರಮ ಕೈಗೊಳ್ಳಿ

Contributed byKalmesh Pattandavar|Vijaya Karnataka

ಹುಬ್ಬಳ್ಳಿಯ ಬಿಡ್ನಾಳದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ರಿಯಾಯಿತಿ ದರದಲ್ಲಿ ಬೀಜ ವಿತರಣೆಗೆ ಚಾಲನೆ ನೀಡಿದರು. ಕಳಪೆ ಬೀಜ ಮತ್ತು ಗೊಬ್ಬರ ಮಾರಾಟ ಮಾಡುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ರೈತರಿಗೆ ಯಾವುದೇ ತೊಂದರೆಯಾಗದಂತೆ ಬೀಜ ವಿತರಣೆ ಮಾಡಬೇಕು ಎಂದು ತಿಳಿಸಿದರು. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

take immediate action to stop trading in the kaal market

ರಿಯಾಯಿತಿ ದರದಲ್ಲಿಬೀಜ ವಿತರಣೆಗೆ ಅಬ್ಬಯ್ಯ ಚಾಲನೆ (ಕಿಕ್ಕರ್ )

ಕಾಳ ಸಂತೆಯಲ್ಲಿಮಾರಾಟ ತಡೆಗೆ ಕ್ರಮ ಕೈಗೊಳ್ಳಿ (ಹೆಡ್ )

ವಿಕ ಸುದ್ದಿಲೋಕ ಹುಬ್ಬಳ್ಳಿ

ರೈತರಿಗೆ ಸಮರ್ಪಕವಾಗಿ ಬೀಜ ಮತ್ತು ಗೊಬ್ಬರ ಪೂರೈಕೆಗೆ ಕ್ರಮವಹಿಸುವ ಜತೆಗೆ ಕಾಳ ಸಂತೆಯಲ್ಲಿಮಾರಾಟ ಮಾಡುವರ ಮೇಲೆ ಕೃಷಿ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿನ ಬಿಡ್ನಾಳದಲ್ಲಿಹೆಚ್ಚುವರಿ ಕೇಂದ್ರದಲ್ಲಿರಿಯಾಯಿತಿ ದರದಲ್ಲಿಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃತಕ ಅಭಾವ ಸೃಷ್ಟಿಸುವುದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಸೇರಿದಂತೆ ನಕಲಿ ಬೀಜ ಗೊಬ್ಬರ ವಿತರಣೆ ಮಾಡುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರು ದೇಶದ ಬೆನ್ನೆಲುಬು. ಅವರು ನಮಗೆ ಊಟ ನೀಡುವ ಅನ್ನದಾತರು. ಅವರಿಗೆ ಯಾವುದೇ ತೊಂದರೆ ಆಗದಂತೆ ಬೀಜ ವಿತರಣೆ ಮಾಡಬೇಕು. ರೈತರು ಕೂಡ ಕಳಪೆ ಬೀಜದ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಾಜಿ ಉಪಾಧ್ಯಕ್ಷ ಮೋಹನ ಅಸುಂಡಿ, ಸಿದ್ದಪ್ಪ ಮೀಸಿ, ಚನ್ನಬಸಪ್ಪ ಅಸುಂಡಿ, ಗುರುಸಿದ್ದಪ್ಪ ಕಟಗಿ, ಶಂಕರಣ್ಣ ಅಸುಂಡಿ, ಅಡಿವೆಪ್ಪ ನಂದಿಹಳ್ಳಿ, ಫಕೀರಗೌಡ ಕಲ್ಲನ್ನವರ, ವೀರಭದ್ರಪ್ಪ ಮೇಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಇತರರು ಇದ್ದರು.

ಫೋಟೋ: 25 ಅಬ್ಬಯ್ಯ

ಹುಬ್ಬಳ್ಳಿ ನಗರದ ಬಿಡ್ನಾಳದ ಹೆಚ್ಚುವರಿ ಕೇಂದ್ರದಲ್ಲಿರಿಯಾಯಿತಿ ದರದಲ್ಲಿಬೀಜ ವಿಚಾರಣೆಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.