- ಎನ್ ಪಿಕೆ ಗೊಬ್ಬರದ ಬ್ಯಾಗ್ ನಲ್ಲಿತೂಕ ವ್ಯತ್ಯಾಸ, ರೈತನಿಗೆ ಶಾಕ್
50 ಕೆ.ಜಿ. ಚೀಲದಲ್ಲಿ45 ಕೆ.ಜಿ. ಗೊಬ್ಬರ!
ಆತೀಶ್ ಬಿ. ಕನ್ನಾಳೆ ಶಿವಮೊಗ್ಗ
aaಠಿಜಿsh.ka್ಞ್ಞa್ಝಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ರಸಗೊಬ್ಬರ ಕೊರತೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೆ ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ ರೈತರೊಬ್ಬರು ಖರೀದಿಸಿದ ಗೊಬ್ಬರದ ಚೀಲಗಳಲ್ಲಿತೂಕ ವ್ಯತ್ಯಾಸವಾಗಿರುವುದು ಬೆಳಕಿಗೆ ಬಂದಿದೆ.
‘ಒಂದು ರಾಷ್ಟ್ರ ಒಂದು ಗೊಬ್ಬರ ಯೋಜನೆ’ ಎಂದೇ ಕರೆಯಲ್ಪಡುವ ಪ್ರಧಾನ ಮಂತ್ರಿ ಭಾರತೀಯ ಉರ್ವರಕ ಪರಿಯೋಜನಾ (ಪಿಎಂ- ಬಿಜೆಯುಆರ್ ) ಅಡಿ ದೇಶಾದ್ಯಂತ ಎಲ್ಲರಸಗೊಬ್ಬರ ಕಂಪನಿಗಳು ಒಂದೇ ಬ್ರ್ಯಾಂಡ್ ಅಡಿ ಗೊಬ್ಬರ ಮಾರಾಟ ಮಾಡುತ್ತಾರೆ. ಈ ಮೂಲಕ ಕಡಿಮೆ ಬೆಲೆಯಲ್ಲಿಉತ್ಕೃಷ್ಟ ಗುಣಮಟ್ಟದ ಗೊಬ್ಬರ ನೀಡುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ.
ಎನ್ ಪಿಕೆ ಗೊಬ್ಬರದ ಪ್ರತಿ 50 ಕೆ.ಜಿ. ತೂಕದ ಚೀಲಕ್ಕೆ ಮಾರುಕಟ್ಟೆಯಲ್ಲಿ2,363.10 ರೂ. ಬೆಲೆಯಿದ್ದು, ಕೇಂದ್ರ ಸರಕಾರ ಪ್ರತಿ ಚೀಲಕ್ಕೆ 713.10 ರೂ. ಸಬ್ಸಿಡಿ ನೀಡುವುದರಿಂದ ರೈತರಿಗೆ 1650 ರೂ.ಗಳಲ್ಲಿಲಭ್ಯವಾಗುತ್ತಿದೆ. ಚೀಲದ ಮೇಲೆಯೇ ಈ ಎಲ್ಲಅಂಶಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ಸರಕಾರದಿಂದಲೇ ಪೂರೈಕೆಯಾಗುವ ಗೊಬ್ಬರ ಚೀಲದಲ್ಲಿತೂಕ ವ್ಯತ್ಯಾಸ ಕಂಡುಬಂದಿದೆ.
ರೈತರೊಬ್ಬರು ಸೋಮವಾರ 14 ಚೀಲ ಗೊಬ್ಬರ ಖರೀದಿಸಿದ್ದು, ಅಂಗಡಿಯಲ್ಲಿತೂಕ ಮಾಡದೇ ನೀಡಲಾಗಿತ್ತು. ಹೀಗಾಗಿ, ವಾಹನದಿಂದ ಇಳಿಸುವಾಗ ತೂಕ ಮಾಡಿದ್ದಾರೆ. ಆಗಿರುವ ಎಡವಟ್ಟು ಆಗ ಗಮನಕ್ಕೆ ಬಂದಿದೆ. 10 ಚೀಲಗಳಲ್ಲಿಸಹಜವಾಗಿ 50 ಕೆಜಿ ಗೊಬ್ಬರವಿದ್ದರೆ, ಉಳಿದ ನಾಲ್ಕು ಚೀಲಗಳಲ್ಲಿಕ್ರಮವಾಗಿ 46.700 ಕೆಜಿ, 46.900 ಕೆಜಿ, 47.900 ಕೆಜಿ ಮತ್ತು 45.450 ಕೆಜಿ ಇರುವುದು ಬೆಳಕಿಗೆ ಬಂದಿದೆ. ತಕ್ಷಣ ಈ ಕುರಿತು ಗೊಬ್ಬರ ಖರೀದಿಸಿದ್ದ ಅಂಗಡಿಯ ಮಾಲೀಕರಿಗೆ ವಿಚಾರಿಸಿದ್ದು, ‘ಕಂಪನಿಯಿಂದ ಬಂದಿದ್ದನ್ನೇ ನೀಡಿದ್ದೇವೆ’ ಎಂದು ಉತ್ತರಿಸಿದ್ದಾರೆ. ಬಳಿಕ ಕೃಷಿ ಇಲಾಖೆ ಗಮನಕ್ಕೆ ತಂದಾಗ ವರಸೆ ಬದಲಿಸಿ, ತೂಕಕ್ಕೆ ತಕ್ಕ ಬೆಲೆ ನೀಡಿ ಅಥವಾ ಬೇರೆ ಚೀಲ ನೀಡುತ್ತೇವೆ ಎಂದು ಸಮಜಾಯಿಷಿ ನೀಡಿದರು’ ಎಂದು ರೈತರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಯಾವುದೇ ರೈತರು ಗೊಬ್ಬರ ಖರೀದಿಸಿಬೇಕಾದರೆ ನಂಬಿಕೆಯಿಂದಾಗಿ ತೂಕ ಪರಿಶೀಲಿಸದೇ ತೆಗೆದುಕೊಂಡು ಹೋಗುತ್ತಾರೆ. ಆದರೆ, ಈ ರೀತಿ ಚೀಲವೊಂದಕ್ಕೆ ಮೂರ್ನಾಲ್ಕು ಕೆ.ಜಿ. ಕಡಿಮೆ ಗೊಬ್ಬರ ಬಂದರೆ ಅನ್ಯಾಯ ಮಾಡಿದಂತಾಗಲಿದೆ. ಕಡ್ಡಾಯವಾಗಿ ತೂಕ ಮಾಡಿಕೊಟ್ಟ ಬಳಿಕವೇ ರೈತರು ಗೊಬ್ಬರ ಖರೀದಿಸಬೇಕಿದೆ.
===
ಇರಲಿ ಜಾಗರೂಕತೆ
ರೈತರು ಗೊಬ್ಬರ ಖರೀದಿಸಬೇಕಾದರೆ ಕಡ್ಡಾಯವಾಗಿ ಬಿಲ್ ಪಡೆಯಬೇಕು. ಚೀಲದ ಮೇಲಿರುವ ದರವನ್ನಷ್ಟೇ ನೀಡಬೇಕು. ಅನುಮಾನವಿದ್ದರೆ ತೂಕ ಮಾಡಿಸಬೇಕು. ಅಂಗಡಿಯವರು ಸಹ ಪಾಯಿಂಟ್ ಆನ್ ಸೇಲ್ ಬಿಲ್ ಕೊಡಬೇಕು. ನಮೂದಿಸಿರುವ ದರಕ್ಕಿಂತ ಅಧಿಕ ಹಣ ವಸೂಲಿ ಮಾಡುವಂತಿಲ್ಲ. ಈ ನಿಯಮಗಳನ್ನು ಮೀರಿದರೆ ಅಂಗಡಿಯವರ ಮೇಲೆ ಪ್ರಕರಣ ದಾಖಲಿಸಲಾಗುವುದು.
===
14 ಚೀಲ ಗೊಬ್ಬರ ಖರೀದಿಸಿದ್ದೆ. ಅದರಲ್ಲಿನಾಲ್ಕು ಚೀಲಗಳಲ್ಲಿತೂಕ ಕಡಿಮೆ ಕಂಡುಬಂದಿದೆ. ಸರಿಯಾದ ತೂಕ ಸಿಗಬೇಕಿರುವುದು ಪ್ರತಿಯೊಬ್ಬ ರೈತನ ಹಕ್ಕಾಗಿದೆ. ಈ ರೀತಿ ಮೋಸ ನಡೆಯಬಾರದು. ಅಂಗಡಿಗೆ ಹೋದಾಗ ಪ್ರತಿಯೊಂದು ಚೀಲವನ್ನು ತೂಕ ಮಾಡಿ ತೆಗೆದುಕೊಳ್ಳಲಾಗದು. ತೂಕವನ್ನು ಪರಿಶೀಲಿಸುವುದು ಅಂಗಡಿಯವರ ಜವಾಬ್ದಾರಿ.
-ಎಸ್ .ಟಿ. ರಾಮಚಂದ್ರಪ್ಪ, ಕೃಷಿಕ, ತೀರ್ಥಹಳ್ಳಿ
===
ಕೆಲವೊಮ್ಮೆ ಬ್ಯಾಗಿಂಗ್ ಮಾಡುವಾಗ ಅಥವಾ ಹುಕ್ ಹಾಕಿದಾಗ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಆದರೆ, ಈ ಪ್ರಕರಣದ ಬಗ್ಗೆ ಸಮಗ್ರವಾಗಿ ಪರಿಶೀಲಿಸುವಂತೆ ಅಧಿಕಾರಿಗೆ ಸೂಚನೆ ನೀಡಿದ್ದು, ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಲವು ಚೀಲಗಳಲ್ಲಿತೂಕ ಕಡಿಮೆ ಇರುವುದು ಕಂಡುಬಂದಿದೆ.
- ಡಾ. ಕೆ.ಕಿರಣ್ ಕುಮಾರ್ , ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ
===
ಫೋಟೊ: 25ಎಸ್ ಎಂಜಿ17- ಚೀಲ ತೂಕ ಮಾಡಿದಾಗ 45.450 ಕೆಜಿ ತೋರಿಸಿರುವುದು.
ಫೋಟೊ: 25ಎಸ್ ಎಂಜಿ13- 50.150 ಕೆಜಿ ತೂಕದ ಚೀಲ.

