ಶಿಕ್ಷಣ, ಸಂಸ್ಕಾರದ ಕ್ರಾಂತಿ ಅಗತ್ಯ

Contributed bykakanakotekhedda@gmail.com|Vijaya Karnataka

ಎಚ್‌.ಡಿ.ಕೋಟೆಯಲ್ಲಿ ಬಸವೇಶ್ವರರ ಜಯಂತಿ ಮಹೋತ್ಸವ ನಡೆಯಿತು. ಶಿಕ್ಷಣ ಮತ್ತು ಸಂಸ್ಕಾರದ ಕ್ರಾಂತಿ ಅಗತ್ಯ ಎಂದು ಚೆನ್ನಬಸವ ಸ್ವಾಮೀಜಿ ಹೇಳಿದರು. ಯುವಕರಲ್ಲಿ ಗುರು ಹಿರಿಯರ ಬಗ್ಗೆ ಗೌರವ, ಉತ್ತಮ ನಡತೆ, ಕಾಯಕ ಪ್ರಜ್ಞೆ ಮುಖ್ಯ ಎಂದರು. ಬಸವಣ್ಣನವರ ವಿಚಾರಧಾರೆಗಳು ಸಮಾಜಕ್ಕೆ ಸ್ಫೂರ್ತಿ ಎಂದು ತಿಳಿಸಿದರು. ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಶ್ಲಾಘಿಸಲಾಯಿತು. ಮೆರವಣಿಗೆ ಜರುಗಿತು.

basavanna jayanti a call for revolution in education and culture for the youth

ಕನಕಪುರ ದೇಗುಲ ಮಠದ ಚೆನ್ನಬಸವ ಸ್ವಾಮೀಜಿ ಅಭಿಮತ

ವಿಕ ಸುದ್ದಿಲೋಕ ಎಚ್ .ಡಿ.ಕೋಟೆ

ಪ್ರತಿ ಸಮುದಾಯದಲ್ಲೂಶಿಕ್ಷಣ ಕ್ರಾಂತಿ ಮತ್ತು ಯುವ ಸಮುದಾಯದಲ್ಲಿಸಂಸ್ಕಾರದ ಕ್ರಾಂತಿ ಆಗಬೇಕು ಎಂದು ಕನಕಪುರ ದೇಗುಲ ಮಠದ ಚೆನ್ನಬಸವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿನಡೆದ ಶ್ರೀ ಬಸವೇಶ್ವರರ 893 ನೇ ಜಯಂತಿ ಮಹೋತ್ಸವದಲ್ಲಿಮಾತನಾಡಿದರು.

‘‘ಯುವಕರಲ್ಲಿಗುರು ಹಿರಿಯರು ಎಂದರೆ ಗೌರವ ಭಾವನೆ ಇರಬೇಕು. ಉತ್ತಮ ನಡೆಯನ್ನು ಮೈಗೂಡಿಸಿಕೊಳ್ಳಬೇಕು. ಕಾಯಕ ಪ್ರಜ್ಞೆ ಮುಖ್ಯ,’’ ಎಂದರು.

‘‘ವಿಶ್ವದಲ್ಲಿಬಸವೇಶ್ವರರ ಜಯಂತಿಯನ್ನು ಆಚರಿಸಲಾಗುತ್ತಿದೆ. ಬಸವಾದಿ ಶಿವ ಶರಣರ ವಿಚಾರಧಾರೆಗಳು ಸಮಾಜಕ್ಕೆ ದೊಡ್ದ ಕೊಡುಗೆ ನೀಡಿದೆ. ಬಸವಣ್ಣನವರ ವಚನ, ವಿಚಾರಧಾರೆ, ಬದುಕು ನಮ್ಮೆಲ್ಲರಿಗೂ ಸ್ಫೂರ್ತಿ. ನಮ್ಮ ಸಮಾಜವು ಇತರೆ ಸಮಾಜದೊಂದಿಗೆ ಉತ್ತಮ ಪ್ರೀತಿ ಬಾಂಧವ್ಯ ದಿಂದ ಎಲ್ಲರನ್ನೂ ಗೌರವಿಸುವ ಕೆಲಸ ಮಾಡುತ್ತಿದೆ,’’ ಎಂದರು.

ಪ್ರಾದೇಶಿಕ ಹೆಚ್ಚುವರಿ ಆಯುಕ್ತ ಡಾ.ಶಿವರಾಜು ಮಾತನಾಡಿ, ‘‘ನಗರ ಪ್ರದೇಶದ ಮಕ್ಕಳಿಗಿಂತ ಕಡಿಮೆ ಇಲ್ಲಾಎನ್ನುವ ರೀತಿಯಲ್ಲಿಗ್ರಾಮೀಣ ಪ್ರದೇಶದ ಮಕ್ಕಳು ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆಯಲ್ಲಿಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಉತ್ತಮ ಶಿಕ್ಷಣ ಪಡೆಯಲು ಸ್ವಲ್ಪ ಕಷ್ಟವೇ. ಆದರೂ ಬಡತನ ಮತ್ತು ಇತರ ಎಲ್ಲಾಸಮಸ್ಯೆಗಳು ಹಾಗೂ ಮುಖ್ಯವಾಗಿ ಕೀಳರಿಮೆ ಬಿಟ್ಟು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು. ಆ ಮೂಲಕ ಪೋಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗೆ ಹೆಸರು ತರಬೇಕು. ಈ ಸಾಧನೆಯು ವಿದ್ಯಾರ್ಥಿಗಳ ಮುಂದಿನ ಸಾಧನೆಗೆ ಮತ್ತು ಜೀವನ ರೂಪಿಸಿಕೊಳ್ಳಲಿಕ್ಕೆ ಸಹಾಯವಾಗುತ್ತದೆ. ಸಾಧನೆಗೆ ಶಿಕ್ಷಣವೇ ಮುಖ್ಯ. ಹಾಗಾಗಿ ಯವುದೇ ಕಾರಣಕ್ಕೂ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಅಥವ ಕಾಲೇಜಿನಿಂದ ಬಿಡಿಸಬಾರದು. ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು ,’’ ಎಂದರು.

ಸಾಹಿತಿ ಕಿರಣ್ ಶಿಡ್ಲೇಳ್ಳಿ ಮಾತನಾಡಿ, ‘‘ಇಂದಿನ ವಿದ್ಯಾವಂತ ಯುವ ಪೀಳಿಗೆಗೆ ಬಸವಣ್ಣನವರ ವಿಚಾರಧಾರೆಯನ್ನು ಅರ್ಥ ಮಾಡಿಸಬೇಕಾಗಿದೆ. ಬಸವಣ್ಣನವರ ಆಚರಣೆಗಳು ಚಿಂತನೆಗಳು ಆಗಬೇಕು. ಬಸವಣ್ಣ ಅವರನವರನ್ನು ವಿಶ್ವ ಪುರುಷ ಎಂದು ಮೊದಲು ನಾಮಕರಣ ಮಾಡಿದವರು ಡಾ.ಬಿ.ಆರ್ .ಅಂಬೇಡ್ಕರ್ . ಹಾಗಾಗಿ ಬಸವಣ್ಣ ಅವರ ಚಿಂತನೆಗಳು ಸಾರ್ವಕಾಲಿಕ ವಾದದ್ದು . ಅದನ್ನು ಅರ್ಥ ಮಾಡಿಕೊಂಡು ಸಾಗಿದರೆ ಸಮಾಜದಲ್ಲಿಸಮಾನತೆಯನ್ನು ಕಾಣಲು ಸಾಧ್ಯ,’’ ಎಂದು ತಿಳಿಸಿದರು.

ಮೆರವಣಿಗೆಗೆ ಚಾಲನೆ: ಇದಕ್ಕೂ ಮುನ್ನ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿಬೆಳ್ಳಿ ರಥದಲ್ಲಿಇರಿಸಿದ್ದ ಜಗಜ್ಯೋತಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಅನಿಲ್ ಚಿಕ್ಕಮಾದು, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿಮಂಗಳ ವಾದ್ಯ, ವೀರಗಾಸೆ, ಡೊಳ್ಳು ಕುಣಿತ, ನಂದಿ ಧ್ವಜ, ನಗಾರಿ, ತಮಟೆ, ಗಾಡಿ ಗೊಂಬೆ ಸೇರಿದಂತೆ ವಿವಿಧ ಜಾನಪದ ಕಲತಂಡದೊಂದಿಗೆ ಹುಣಸೂರು-ಬೇಗೂರು ರಸ್ತೆ ಮಾರ್ಗವಾಗಿ ಮೆರವಣಿಗೆ ಹೊರಟು ಜೆಎಸ್ ಎಸ್ ಮಂಗಳ ಮಂಟಪದಲ್ಲಿಸಮಾವೇಶ ಗೊಂಡಿತು.

ಇದೇ ಸಂದರ್ಭ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರುದ್ರಪ್ಪ, ಹಂಚಿಪುರ ಮಠದ ಚನ್ನಬಸವ ಸ್ವಾಮಿ, ದಡದಳ್ಳಿ ಮಠದ ಷಡಕ್ಷರಸ್ವಾಮಿ, ಪಡುವಲು ವಿರಕ್ತ ಮಠದ ಮಹದೇವಸ್ವಾಮಿ, ಮಾದಾಪುರ ಮಠದ ಮಲ್ಲಿಕಾರ್ಜುನ ಸ್ವಾಮಿ, ಪುರದ ಮಠ ನಾಗೇಂದ್ರ ಸ್ವಾಮಿ, ಬಸವ ಬಳಗದ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಶಿವಕುಮಾರ್ , ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ನಿರ್ದೇಶಕ ಮೊತ್ತ ಬಸವರಾಪ್ಪ, ಜಿಲ್ಲಾಉಪಾಧ್ಯಕ್ಷ ಬಿ.ವಿ ಬಸವರಾಜು, ತಾಲೂಕು ಉಪಾಧ್ಯಕ್ಷರಾದ ಎ.ಪಿ. ಶಿವರಾಜು, ಶ್ವೇತಾ, ರವೀಶ್ , ಶಿವಸ್ವಾಮಿ, ಸಹ ಕಾರ್ಯದರ್ಶಿ ಜೆ.ಎಂ. ಮಹದೇವಪ್ಪ, ಖಜಾಂಚಿ ಗಿರೀಶ್ , ಬಸವೇಶ್ವರ ಅಭಿವೃದ್ಧಿ ಸಹಕಾರ ಸಂಘದ ಅಧಕ್ಷ ಪಿ. ನಾಗರಾಜಪ್ಪ, ಸುರೇಶ್ , ವಕೀಲ ಮೋಹನ್ ಕುಮಾರ್ , ಜೆ.ಪಿ.ಶಿವರಾಜಪ್ಪ, ಸ್ವಾಮಿ, ಮುಖಂಡರಾದ ಚಿಕ್ಕಣ್ಣ ಜಯಪ್ರಕಾಶ್ , ಗುರುಸ್ವಾಮಿ, ಗಿರೀಶಮೂರ್ತಿ, ಕಾಶಿಪತಿ, ದೇವಮ್ಮಣಿ, ದಾಕ್ಷಾಯಿಣಿ, ಮಂಗಳಗೌರಿ ಮತ್ತಿತರರು ಹಾಜರಿದ್ದರು.

ಋ್ಗಖ25ಏಈಓ1ಇ ಅNಈ 2ಇ

1. ಎಚ್ .ಡಿ.ಕೋಟೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಬಸವೇಶ್ವರ ಮೆರವಣಿಗೆಗೆ ಶಾಸಕರಾದ ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್ ಮತ್ತು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಲನೆ ನೀಡಿದರು.

2. ಎಚ್ .ಡಿ.ಕೋಟೆ ಪಟ್ಟಣದ ಜೆಎಸ್ ಎಸ್ ಮಂಗಳ ಮಂಟಪದಲ್ಲಿನಡೆದ ಕಾರ್ಯಕ್ರಮವನ್ನು ವಿವಿಧ ಮಠದ ಶ್ರೀಗಳು ಉದ್ಘಾಟಿಸಿದರು.