- ವಿಶ್ವ ಹಿಂದೂ ಪರಿಷತ್ , ಬಜರಂಗದಳದಿಂದ ಪ್ರತಿಭಟನೆ
ವಿಕ ಸುದ್ದಿಲೋಕ ಬೆಳಗಾವಿ
ಗೋವು ಅಕ್ರಮ ಸಾಗಣೆ ಮತ್ತು ಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಜಿಲ್ಲಾಘಟಕದ ವತಿಯಿಂದ ನಗರದಲ್ಲಿಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರಗೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು, ನಿಷೇಧವಿದ್ದರೂ ಗೋವು ಸಾಗಣೆ ಮತ್ತು ಹತ್ಯೆ ಜಿಲ್ಲೆಯಾದ್ಯಂತ ನಿರಂತರ ನಡೆಯುತ್ತಿದೆ. ಆದರೂ, ಜಿಲ್ಲಾಡಳಿತ ಇದನ್ನು ನಿಯಂತ್ರಿಸುತ್ತಿಲ್ಲಎಂದು ಆರೋಪಿಸಿದರು.
‘‘ಜಿಲ್ಲೆಯ ಎಲ್ಲತಾಲೂಕುಗಳಲ್ಲಿಗೋವು ಸಾಗಣೆ ಮತ್ತು ಹತ್ಯೆಯಾಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಬಕ್ರೀದ್ ಸಮಯದಲ್ಲಿಗೋವು ಸಾಗಣೆ ಮತ್ತು ಗೋವು ಹತ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ನಿಗಾ ವಹಿಸಬೇಕು. ಸಾರಿಗೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇತರ ಇಲಾಖೆಗಳಿಗೂ ಆದೇಶ ನೀಡಬೇಕು. ನಿಯಮ ಉಲ್ಲಂಘಿಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾಪ್ರಮುಖ ಕೇಂದ್ರಗಳಲ್ಲಿಪರಿಶೀಲನೆ ತಂಡ ನೇಮಿಸಿ, ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಬೇಕು. ಜಿಲ್ಲೆಯಾದ್ಯಂತ ಮೇ 29 ರವರೆಗೆ ಗೋವು ಮಾರಾಟ ಮತ್ತು ಜಾನುವಾರು ಸಂತೆ ನಿಷೇಧಿಸಬೇಕು. ಗೋವು ರಕ್ಷಕರಿಗೆ ಸಹಕಾರ ನೀಡಬೇಕು,’’ ಎಂದು ಮನವಿಯಲ್ಲಿಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿಶಿವಾಪುರದ ಮುಪ್ಪಿನ ಕಾಡು ಸಿದ್ದೇಶ್ವರ ಸ್ವಾಮೀಜಿಗಳು, ಶಂಕರಾನಂದ ಸ್ವಾಮೀಜಿ, ಪರಮೇಶ್ವರ ಸ್ವಾಮೀಜಿ, ಕೃಷ್ಣ ಭಟ್ , ಮಹಾಂತೇಶ ಕರಲಿಂಗಣ್ಣವರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
-25ಪರಶು1
ಗೋವು ಸಾಗಣೆ ಮತ್ತು ಹತ್ಯೆ ತಡೆಯುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

