ಹಾನಗಲ್ಲನಲ್ಲಿಬಿತ್ತನೆ ಬೀಜ ವಿತರಣೆ

Contributed byhangalvk1104@gmail.com|Vijaya Karnataka

ಹಾನಗಲ್ಲ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದೆ. ಆಧಾರ ಕಾರ್ಡ್ ಕಡ್ಡಾಯವಾಗಿದ್ದು, ಕೆ ಕಿಸಾನ್ ಆಪ್ ಮೂಲಕ ವಿತರಣೆ ನಡೆಯಲಿದೆ. ಉತ್ತಮ ಮಳೆಯಾಗಿದ್ದು, ಬಿತ್ತನೆಗೆ ಪೂರಕ ವಾತಾವರಣವಿದೆ. ಬೀಜದ ದಾಸ್ತಾನು ತೃಪ್ತಿದಾಯಕವಾಗಿದೆ. ರಸಗೊಬ್ಬರ ಕೊರತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾನೋ ಡಿಎಪಿ ಬಳಸುವಂತೆ ಸಲಹೆ ನೀಡಲಾಗಿದೆ.

distribution of seeding seeds to farmers in hanagalla new program by agriculture department

ವಿಕ ಸುದ್ದಿಲೋಕ ಹಾನಗಲ್ಲ

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿಸೋಮವಾರ ಕೃಷಿ ಇಲಾಖೆಯಿಂದ ರಿಯಾಯ್ತಿ ದರದಲ್ಲಿಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು.

ತಾಲೂಕಿನ 3 ರೈತ ಸಂಪರ್ಕ ಕೇಂದ್ರಗಳು ಮತ್ತು 6 ಉಪ ಕೇಂದ್ರಗಳ ಮೂಲಕ ಸೋಮವಾರದಿಂದ ಬಿತ್ತನೆ ಬೀಜ ವಿತರಣೆ ಕಾರ್ಯಾರಂಭಗೊಂಡಿದ್ದು, ಆಧಾರ ಕಾರ್ಡ್ ಕಡ್ಡಾಯ. ಕೆ ಕಿಸಾನ್ ಆಪ್ ಮೂಲಕ ಬೀಜ ವಿತರಣೆ ಮಾಡಲಾಗುತ್ತದೆ ಎಂದು ಕೃಷಿ ಅಧಿಕಾರಿಗಳು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಸುರೇಶ ಸಿ.ಟಿ ಮಾತನಾಡಿ, ಕೆಲವು ದಿನಗಳಿಂದ ಉತ್ತಮ ಮಳೆಯಾಗಿದೆ. ಬಿತ್ತನೆಗೆ ಪೂರಕ ವಾತಾವರಣ ಸಿಕ್ಕಿದೆ. ನಮ್ಮಲ್ಲಿಬಿತ್ತನೆ ಬೀಜದ ದಾಸ್ತಾನು ತೃಪ್ತಿದಾಯವಾಗಿದೆ. ರಸಗೊಬ್ಬರ ಕೊರತೆ ತಾಲೂಕಿನಲ್ಲಿಇಲ್ಲಎಂದರು.

ಕೃಷಿ ಅಧಿಕಾರಿಗಳ ಶಿಪಾರಸ್ಸಿನ ಮೇರೆಗೆ ರೈತರು ನ್ಯಾನೋ ಡಿಎಪಿ ಬಳಸಬೇಕು. ಇತರೆ ಕಾಂಪ್ಲೆಕ್ಸ್ ಗೊಬ್ಬರನ್ನೂ ಬಳಸಬೇಕು ಎಂದು ಈ ಸಂದರ್ಭದಲ್ಲಿಸಲಹೆ ನೀಡಿದರು.

ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ರೈತರು ಬಿತ್ತನೆ ಬೀಜಗಳನ್ನು ಖರೀದಿಸಬೇಕು. ಕಳಪೆ ಬೀಜ ವಿತರಣೆಗೆ ಅವಕಾಶ ನೀಡಬಾರದು ಎಂದರು.

ಕೃಷಿ ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ, ಶಾಮ್ ಗೌಡ ಪಾಟೀಲ, ಕೃಷಿಕ ಸಮಾಜ ಅಧ್ಯಕ್ಷ ಕೆ.ಟಿ.ಕಲ್ಲಗೌಡ್ರ, ಜಿಲ್ಲಾಪ್ರತಿನಿಧಿ ಅಡಿವೆಪ್ಪ ಆಲದಕಟ್ಟಿ, ಪ್ರಮುಖರಾದ ಸೋಮಶೇಖರ ಕೊತಂಬರಿ, ಮಖಬೂಲ್ ಅಹ್ಮದ್ ಮಾಸನಕಟ್ಟಿ ಮತ್ತಿತರರು ಇದ್ದರು.

25ಎಚ್ ಜಿಎಲ್ 2

ಹಾನಗಲ್ಲನಲ್ಲಿಸೋಮವಾರ ರಿಯಾಯ್ತಿ ದರದಲ್ಲಿಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆಯಿಂದ ಚಾಲನೆ ಸಿಕ್ಕಿತು. ಕೃಷಿ ಅಧಿಕಾರಿಗಳು, ರೈತ ಮುಖಂಡರು ಹಾಜರಿದ್ದರು.