ಪಾಂಡವಪುರ

Contributed bychannamadegowda21@gmail.com|Vijaya Karnataka

ಪಾಂಡವಪುರದಲ್ಲಿನಂದಗೋಕುಲ ಕಿಡ್ಸ್ವರ್ಲ್ಡ್ ಶಾಲೆಯಲ್ಲಿ25 ದಿನಗಳ 'ತಣಿವು ಬೇಸಿಗೆ ಶಿಬಿರ' ಯಶಸ್ವಿಯಾಗಿ ಸಂಪನ್ನಗೊಂಡಿತು. ಸಂಸ್ಥೆಯ ಅಧ್ಯಕ್ಷ ಆರ್‌.ಎ.ನಾಗಣ್ಣ ಅವರು ಮಕ್ಕಳಿಗೆ ಮೊಬೈಲ್‌ನಿಂದ ದೂರವಿರಲು, ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರಗಳು ಸಹಕಾರಿ ಎಂದರು. ಗ್ರಾಮೀಣ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದು ಉತ್ತಮ ವೇದಿಕೆಯಾಯಿತು. ಮಕ್ಕಳು ಸಂಸ್ಕಾರ ಕಲಿಯಲು, ಹಿರಿಯರಿಗೆ ಗೌರವ ನೀಡಲು ಪೋಷಕರು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ಜನಪದ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

closing ceremony of thanevu besige camp in pandavapura

ಎಂಡಿವೈ12ಪಿಎನ್ ಡಿ03ಸಿ.

ವಿಕ ಸುದ್ದಿಲೋಕ ಪಾಂಡವಪುರ

ಪಟ್ಟಣದ ಕೃಷ್ಣಾನಗರದ 3ನೇ ಹಂತದಲ್ಲಿರುವ ನಂದಗೋಕುಲ ಕಿಡ್ಸ್ವರ್ಲ್ಡ್ ಶಾಲಾವರಣದಲ್ಲಿಕಳೆದ 25ದಿನಗಳಿಂದ ಜರುಗಿದ ‘ ತಣಿವು ಬೇಸಿಗೆ ಶಿಬಿರ ’ ಸಮಾರೋಪ ಸಮಾರಂಭ ಶಾಲಾವರಣದಲ್ಲಿಜರುಗಿತು.

ಸಮಾರೋಪ ಸಮಾರಂಭ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಆರ್ .ಎ.ನಾಗಣ್ಣ ಅವರು ಮಾತನಾಡಿ, ಪ್ರಸ್ತುತ ಆಧುನಿಕ ಜಗತ್ತಿನಲ್ಲಿಎಲ್ಲಕ್ಷೇತ್ರಗಳೂ ಸ್ಪರ್ಧೆಯನ್ನೆದುರಿಸುತ್ತಿವೆ. ಇಂತಹ ಸನ್ನಿವೇಶದಲ್ಲಿಮಕ್ಕಳು ಮೊಬೈಲ್ ನಲ್ಲಿಹೆಚ್ಚು ಮುಳುಗಿಹೋಗಿದ್ದಾರೆ. ಸಮಯವೂ ಹಾಳು, ಆರೋಗ್ಯವೂ ಹಾಳು ಎಂಬಂತಾಗಿದೆ. ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದುದು. ಪ್ರತಿ ಕ್ಷಣವನ್ನೂ ಉಪಯುಕ್ತವಾಗಿ ಬಳಸಿಕೊಳ್ಳುವ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಬೇಸಿಗೆ ಶಿಬಿರಗಳು ಪೂರಕವಾಗಿವೆ. ಗ್ರಾಮೀಣ ಮಕ್ಕಳಲ್ಲಿಹೆಚ್ಚಿನ ಪ್ರತಿಭೆಗಳಿವೆ. ಅದು ಅನಾವರಣಗೊಳ್ಳಲು ಇಂತಹ ಶಿಬಿರಗಳಲ್ಲಿಪಾಲ್ಗೊಂಡು ಪ್ರತಿಭಾ ಪ್ರದರ್ಶನ ಮಾಡಬೇ. ಬಹುಮುಖ್ಯವಾಗಿ ಮಕ್ಕಳು ಸಂಸ್ಕಾರ ಕಲಿಯಲು, ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲು ಪೊಷಕರು ಆಸಕ್ತಿವಹಿಸಬೇಕು. ಸರಿ ತಪ್ಪುಗಳನ್ನು ಈ ವಯಸ್ಸಿನಲ್ಲೇ ತಿಳಿ ಹೇಳುವುದರಿಂದ ಮಕ್ಕಳು ಅದನ್ನು ಅನುಸರಿಸಲು ಸಾಧ್ಯವಿದೆ. ದೊಡ್ಡವರು ಏನು ಮಾಡುತ್ತಾರೋ, ಯಾವ ರೀತಿ ವರ್ತಿಸುತ್ತಾರೋ ಮಕ್ಕಳೂ ಅದನ್ನೇ ಅನುಕರಿಸುತ್ತಾರೆ. ಆದ್ದರಿಂದ ಮಕ್ಕಳ ಮುಂದೆ ದೊಡ್ಡವರು ಸಂಸ್ಕಾರಯುತವಾಗಿ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಜೊತೆಗೆ ಮಕ್ಕಳಲ್ಲಿವ್ಯಾವಹಾರಿಕ ಜ್ಞಾನ ವೃದ್ಧಿಗೊಳ್ಳಲು ಇಂತಹ ಶಿಬಿರಗಳಲ್ಲಿವ್ಯಾಪಾರ ವಹಿವಾಟು ನಡೆಸಿದ್ದು ಮಕ್ಕಳನ್ನು ಸೃಜನಶೀಲರನ್ನಾಗಿಸಲು ಉಪಯುಕ್ತವಾಗಿದೆ. ಇಂತಹ ಶಿಬಿರಗಳು ಅತ್ಯಗತ್ಯ. ಸುಪ್ತ ಪ್ರತಿಬೆಗಳಿಗೆ ಸಹಕಾರಿಯಾದುದು ಎಂದರು.

ಬಿಆರ್ ಸಿ ಮಹದೇವು ಮಾತನಾಡಿ, ಇದೊಂದು ಉತ್ತಮ ಕಾರ್ಯ, ಇಷ್ಟು ಮಕ್ಕಳನ್ನು ಒಟ್ಟುಗೂಡಿಸಿ ಶ್ರಮಿಸಿದ್ದದಾರೆ. ಪೊಷರು ತಮ್ಮ ಮಕ್ಕಳನ್ನು ಇಂತಹ ಶೀಬಿರಗಳಲ್ಲಿಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿವಿವಿಧ ಸ್ಪರ್ಧೆಗಳಲ್ಲಿಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಮುಖ್ಯಶಿಕ್ಷಕರಾದ ಎಚ್ .ಎಂ.ವೆಂಕರ್ಟೇಶ್ , ಅನಸೂಯ, ಕಾರ್ಯದರ್ಶಿ ಆರ್ .ಎನ್ .ರಶ್ನಿ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು. ಮಕ್ಕಳು ವಿವಿಧ ಜನಪದ ನೃತ್ಯಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

==========

ಎಂಡಿವೈ12ಪಿಎನ್ ಡಿ03ಸಿ.

ಪಟ್ಟಣದ ಕೃಷ್ಣಾನಗರದ 3ನೇ ಹಂತದಲ್ಲಿರುವ ನಂದಗೋಕುಲ ಕಿಡ್ಸ್ವರ್ಲ್ಡ್ ಶಾಲಾವರಣದಲ್ಲಿಕಳೆದ 25ದಿನಗಳಿಂದ ಜರುಗಿದ ‘ತಣಿವು ಬೇಸಿಗೆ ಶಿಬಿರ ’ ಸಮಾರೋಪ ಸಮಾರಂಭ ಶಾಲಾವರಣದಲ್ಲಿಜರುಗಿತು.