ಅಲಂಕಾರ

Contributed byshubha.hegde@timesgroup.com|Vijaya Karnataka

ಸಮಾರಂಭಗಳ ಅಲಂಕಾರ ಈಗ ಕೇವಲ ಅಂದ ಹೆಚ್ಚಿಸುವುದಷ್ಟೇ ಅಲ್ಲ. ಇದು ವ್ಯಕ್ತಿತ್ವವನ್ನು ಸಾರುವ ಕಲೆಯಾಗಿದೆ. ಮದುವೆ, ನಾಮಕರಣದಂತಹ ಶುಭ ಕಾರ್ಯಗಳಲ್ಲಿ ಅಲಂಕಾರದ ಮೂಲಕ ತಮ್ಮ ವ್ಯಕ್ತಿತ್ವವನ್ನು ಅತಿಥಿಗಳಿಗೆ ತಿಳಿಸುವ ಶೈಲಿಗಳು ಜನಪ್ರಿಯವಾಗುತ್ತಿವೆ. ಸರಳತೆ, ಅದ್ಧೂರಿತನ, ಪ್ರಕೃತಿ ಪ್ರೇಮ, ಆಧುನಿಕತೆ, ಸಾಮಾಜಿಕ ಜವಾಬ್ದಾರಿ, ಹಾಗೂ ಸಂಪ್ರದಾಯ ಹೀಗೆ ವಿವಿಧ ವ್ಯಕ್ತಿತ್ವಗಳಿಗೆ ತಕ್ಕಂತೆ ಅಲಂಕಾರ ಶೈಲಿಗಳು ರೂಪುಗೊಳ್ಳುತ್ತಿವೆ.

decoration of auspicious events styles reflecting personality

ವ್ಯಕ್ತಿತ್ವ ಸೂಚಕ ಸಮಾರಂಭದ ಅಲಂಕಾರ

ಲವಲವಿಕೆ ಸುದ್ದಿಲೋಕ

ಇಂಟ್ರೊ: ಶುಭ ಸಮಾರಂಭಗಳ ವೇದಿಕೆ, ಮಂಟಪದ ಅಲಂಕಾರ ಕೇವಲ ಅಂದವನ್ನಷ್ಟೇ ಹೆಚ್ಚಿಸುವುದಿಲ್ಲ. ಅವು ವ್ಯಕ್ತಿತ್ವ ಸೂಚಕವೂ ಹೌದು. ಈ ಬಗ್ಗೆ ಇಲ್ಲಿದೆ ವಿವರ.

ಮದುವೆ, ಸೀಮಂತ, ನಾಮಕರಣ ಮತ್ತಿತರ ಶುಭ ಸಮಾರಂಭ ಎಂದರೆ ಅಲ್ಲಿಅಲಂಕಾರವೇ ಆಕರ್ಷಣೆಯ ಕೇಂದ್ರ. ಇಂದು ಅಲಂಕಾರ ಎಂಬುದು ಕೇವಲ ಹೂವು-ತೋರಣಗಳಿಗೆ ಸೀಮಿತವಾಗಿಲ್ಲ; ಅದು ಒಂದು ಕಲೆಯಾಗಿ ಬೆಳೆದಿದೆ. ಇತ್ತೀಚೆಗೆ ಶುಭ ಸಮಾರಂಭಗಳ ಅಲಂಕಾರದ ಥೀಮ್ ಕೇವಲ ಬಣ್ಣ, ವಿನ್ಯಾಸ, ಅಬಿರುಚಿಗೆ ಸೀಮಿತವಾಗಿಲ್ಲ. ವ್ಯಕ್ತಿತ್ವ ಸೂಚಕವಾಗಿ ಗಮನ ಸೆಳೆಯುತ್ತಿದ್ದು, ಅಲಂಕಾರದ ಮೂಲಕ ಅತಿಥಿಗಳಿಗೆ ತಮ್ಮ ಅಥವಾ ಇಡೀ ಕುಟುಂಬದ ವ್ಯಕ್ತಿತ್ವವನ್ನು ಸಾರುವ ಕೆಲವು ಬಗೆಯ ಅಲಂಕಾರಗಳು ಇತ್ತೀಚೆಗೆ ಖ್ಯಾತವಾಗುತ್ತಿವೆ. ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ ವಿಭಿನ್ನ. ಕೆಲವರು ಸರಳತೆಯನ್ನು ಇಷ್ಟಪಟ್ಟರೆ, ಇನ್ನು ಕೆಲವರು ಅದ್ಧೂರಿತನವನ್ನು ಬಯಸುತ್ತಾರೆ. ಯಾವ ಬಗೆಯ ಅಲಂಕಾರ ಯಾವ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂಬ ವಿವರ ಇಲ್ಲಿದೆ.

ರೊಮ್ಯಾಂಟಿಕ್ ಸ್ಟೈಲ್ : ಮೃದು ಮನಸ್ಸಿನವರಿಗೆ ಸೂಕ್ತ. ನೀವು ಭಾವಜೀವಿಗಳಾಗಿದ್ದರೆ ಮತ್ತು ಪ್ರೀತಿ-ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡುವವರಾಗಿದ್ದರೆ ಈ ಶೈಲಿ ಸೂಕ್ತ. ತಿಳಿ ಗುಲಾಬಿ, ಕೆನೆ ಬಣ್ಣ ಮತ್ತು ಪೇಸ್ಟಲ್ ಬಣ್ಣಗಳ ಬಳಕೆ ಹಾಗೂ ಗುಲಾಬಿ, ಮಲ್ಲಿಗೆಯಂತಹ ಮೃದುವಾದ ಹೂವುಗಳ ಅಲಂಕಾರ ಇದರ ವೈಶಿಷ್ಟ್ಯ. ಶಾಂತ ಸ್ವಭಾವ, ಸೌಂದರ್ಯ ಪ್ರಜ್ಞೆ ಮತ್ತು ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಕೊಡುವವರಿಗೆ ಈ ಶೈಲಿ ಒಪ್ಪುತ್ತದೆ.

ಬೋಹೊ: ಇದು ಮುಕ್ತ ಮನಸ್ಸಿನವರಿಗೆ ಒಪ್ಪುತ್ತದೆ. ಸಂಪ್ರದಾಯದ ಚೌಕಟ್ಟನ್ನು ಮೀರಿ, ಪ್ರಕೃತಿಯ ಜೊತೆ ಬೆರೆಯಲು ಇಷ್ಟಪಡುವ ವ್ಯಕ್ತಿತ್ವ ನಿಮ್ಮದಾಗಿದ್ದರೆ ಬೋಹೊ ಶೈಲಿ ಅತ್ಯುತ್ತಮ. ಇದರ ವೈಶಿಷ್ಟ್ಯವೆಂದರೆ ದಾರದ ಹೆಣಿಗೆ, ಮಣ್ಣಿನ ಪಾತ್ರೆಗಳು, ಕಾಡು ಹೂವುಗಳು ಮತ್ತು ಒಣಗಿದ ಹುಲ್ಲಿನ ಅಲಂಕಾರ. ಇದು ಹಳ್ಳಿಗಾಡಿನ ಸೊಗಡನ್ನು ಆಧುನಿಕವಾಗಿ ಬಿಂಬಿಸುತ್ತದೆ. ಕ್ರಿಯಾಶೀಲತೆ, ಪ್ರಯೋಗಶೀಲತೆ ಮತ್ತು ನಿಸರ್ಗಪ್ರೇಮಿಗಳ ಸಂಕೇತವಿದು.

ಮಿನಿಮಲಿಸ್ವ್ : ಸ್ಪಷ್ಟ ಆಲೋಚನೆಯವರಿಗೆ ಹೇಳಿ ಮಾಡಿಸಿದ ಅಲಂಕಾರ ಇದು. ಕಡಿಮೆ ಇದ್ದಷ್ಟೂ ಅಂದ ಎಂಬುದು ಇಂದಿನ ಯುವ ಪೀಳಿಗೆಯ ಮಂತ್ರ. ಗೊಂದಲವಿಲ್ಲದ, ಅಚ್ಚುಕಟ್ಟಾದ ವ್ಯವಸ್ಥೆ ಇಷ್ಟಪಡುವವರಿಗೆ ಇದು ಸೂಕ್ತ. ಗಾಜಿನ ಬಳಕೆ, ಲೋಹದ ಫ್ರೇಮ್ ಗಳು ಮತ್ತು ಜ್ಯಾಮಿತೀಯ ಆಕಾರಗಳ ಅಲಂಕಾರ ಎದ್ದು ಕಾಣುತ್ತದೆ. ಇಲ್ಲಿಹೂವುಗಳಿಗಿಂತ ವಿನ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಶಿಸ್ತು, ನೇರ ನಡೆ-ನುಡಿ ಮತ್ತು ಆಧುನಿಕ ಜೀವನಶೈಲಿಯನ್ನು ಇಷ್ಟಪಡುವ ವ್ಯಕ್ತಿತ್ವದವರಿಗೆ ಹೊಂದುತ್ತದೆ.

ಸಸ್ಟೈನಬಲ್ : ಸಾಮಾಜಿಕ ಜವಾಬ್ದಾರಿಗೆ ಒತ್ತು ನೀಡುವ ವ್ಯಕ್ತಿತ್ವಕ್ಕೆ ಪೂರಕ. ಪರಿಸರದ ಬಗ್ಗೆ ಕಾಳಜಿ ಇರುವವರು ಇಂದು ಪ್ಲಾಸ್ಟಿಕ್ ಮುಕ್ತ ಅಲಂಕಾರಕ್ಕೆ ಮೊರೆ ಹೋಗುತ್ತಿದ್ದಾರೆ. ಮರುಬಳಕೆ ಮಾಡಬಹುದಾದ ವಸ್ತುಗಳು, ಬಾಳೆ ಎಲೆ, ತೆಂಗಿನ ಗರಿ ಮತ್ತು ಹತ್ತಿ ಬಟ್ಟೆಗಳ ಬಳಕೆ. ಲೈವ್ ಪ್ಲಾಂಟ್ ಗಳನ್ನು ಅಲಂಕಾರಕ್ಕೆ ಬಳಸಿ ನಂತರ ಅವುಗಳನ್ನು ನೆಡುವುದು ಇಂದಿನ ಹೊಸ ಕ್ರೇಜ್ . ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಪ್ರೇಮವನ್ನು ಇದು ಎತ್ತಿ ತೋರಿಸುತ್ತದೆ.

ಸಾಂಪ್ರದಾಯಿಕ ವೈಭವ: ನಮ್ಮ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಪ್ರಸ್ತುತಪಡಿಸುವುದು ಈ ಟ್ರೆಂಡ್ ನ ವಿಶೇಷ. ಮೈಸೂರು ಸಿಲ್ಕ… ಮಾದರಿಯ ಬಟ್ಟೆಗಳ ಬಳಕೆ, ಹಿತ್ತಾಳೆ ದೀಪಗಳು, ರಂಗೋಲಿ ಮತ್ತು ಸಾಂಪ್ರದಾಯಿಕ ಕಲೆಗಳಾದ ಹಸೆಚಿತ್ತಾರ ಅಥವಾ ಯಕ್ಷಗಾನದ ಮುಖವಾಡಗಳ ಬಳಕೆ ಗಮನ ಸೆಳೆಯುತ್ತದೆ. ನಮ್ಮ ಬೇರುಗಳನ್ನು ಮರೆಯದ, ಹಿರಿಯರ ಸಂಪ್ರದಾಯಕ್ಕೆ ಗೌರವ ನೀಡುವ ಗಂಭೀರ ವ್ಯಕ್ತಿತ್ವದವರಿಗೆ ಸೂಕ್ತ.