ಕಿಕ್ಕರ್ - ಅಕ್ಷರ್ , ಮಿಲ್ಲರ್ ಅರ್ಧ ಶತಕ, ಪ್ರಿಯಾಂಶ್ , ಅಯ್ಯರ್ ಭರ್ಜರಿ ಬ್ಯಾಟಿಂಗ್ ವ್ಯರ್ಥ
ಆಶುತೋಷ್ ಶರ್ಮ ಅಂತಿಮ ಹೋರಾಟ, ನಾಯಕ ಅಕ್ಷರ್ ಪಟೇಲ್ (56), ಡೇವಿಡ್ ಮಿಲ್ಲರ್ (51) ಅರ್ಧಶತಕಗಳ ನೆರವಿನಿಂದ ಡೆಲ್ಲಿಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ 3 ವಿಕೆಟ್ ಗಳ ಜಯ ಸಾಧಿಸಿದೆ. ಅಂತಿಮ ಹಂತದಲ್ಲಿತಂಡ ಸೋಲುತ್ತಿದೆ ಎನ್ನುವ ಸಂದರ್ಭದಲ್ಲಿಆಶುತೋಷ್ ಶರ್ಮ ಮತ್ತು ಅಕೀಬ್ ಸಿಕ್ಸರ್ , ಫೋರ್ ಸಿಡಿಸಿ ಪಂದ್ಯಕ್ಕೆ ತಿರುವು ನೀಡಿದರು. ಪಂಜಾಬ್ ನೀಡಿದ 211 ರನ್ ಗುರಿಯನ್ನು ಬೆನ್ನಟ್ಟಿದ ಅಕ್ಷರ್ ಪಡೆ 19 ಓವರ್ ಗಳಲ್ಲಿ7 ವಿಕೆಟ್ ಗೆ 216 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು. ಕಿಂಗ್ಸ್ ಪರ ಆಷ್ ರ್ ದೀಪ್ (21ಕ್ಕೆ 2) ಉತ್ತಮ ದಾಳಿ ಸಂಘಟಿಸಿದರು. ಪಂಜಾಬ್ ಪರ ಪ್ರಿಯಾಂಶ್ , ಶ್ರೇಯಸ್ ಅಯ್ಯರ್ ಗಳಿಸಿದ ಅರ್ಧಶತಕ ವ್ಯರ್ಥವಾಯಿತು.
ಡೆಲ್ಲಿಕ್ಯಾಪಿಟಲ್ಸ್ : 19 ಓವರ್ ಗಳಲ್ಲಿ7 ವಿಕೆಟ್ ಗೆ 216 (ಅಕ್ಷರ್ ಪಟೇಲ್ 56, ಡೇವಿಡ್ ಮಿಲ್ಲರ್ 51; ಆಷ್ ರ್ ದೀಪ್ ಸಿಂಗ್ 21ಕ್ಕೆ 2, ಯಶ್ ಠಾಕೂರ್ 55ಕ್ಕೆ 2)

