ಗೌರಮ್ಮಗೆ ರೈತ ಮಹಿಳಾ ಪ್ರಶಸ್ತಿ ಪ್ರದಾನ
ವಿಕ ಸುದ್ದಿಲೋಕ ಹೊಸಪೇಟೆ(ವಿಜಯನಗರ)
ತಾಲೂಕಿನ ಕಾಕುಬಾಳು ಗ್ರಾಮದ ಗೌರಮ್ಮ ಸಿದ್ಧಲಿಂಗಯ್ಯ ಅವರಿಗೆ ರಾಜ್ಯ ಸರಕಾರ ವಿಜಯನಗರ ಜಿಲ್ಲಾಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಲಭಿಸಿದೆ.
ಕಲಬುರಗಿಯ ಜೆಸ್ಟ್ ಕ್ಲಬ್ ನ ಸಭಾಂಗಣದಲ್ಲಿಮಂಗಳವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಗೌರಮ್ಮ ಅವರ ಸಾಧನೆಯ ಹಾದಿ:
ಸಾವಯವ ಕೃಷಿ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದ ಗೌರಮ್ಮನವರು 2.1/2 ಎಕರೆಯಲ್ಲಿ9*9 ಅಳತೆಯಲ್ಲಿಬಾಳೆ ಬೆಳೆದಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿ, ಮಧ್ಯದಲ್ಲಿತರಕಾರಿ ಬೆಳೆಸುತ್ತಿದ್ದಾರೆ. ಶೇ.90 ಸಾವಯವ ಕೃಷಿ ಇದಾಗಿದ್ದು, ಸಗಣೆ ಮತ್ತು ಹಸು ಮೂತ್ರ ಬಳಕೆ ಮಾಡುತ್ತಿದ್ದಾರೆ. 1.1/2 ಎಕರೆಯಲ್ಲಿ9*9 ಅಳತೆಯಲ್ಲಿಅಡಿಕೆ ಸಸಿ ನೆಟ್ಟು, ಸಾವಯವ ಗೊಬ್ಬರ ಉಪಯೋಗ ಮಾಡುತ್ತಿದ್ದಾರೆ. 20*20 ಅಳತೆಯಲ್ಲಿಮಲ್ಚಿಂಗ್ (ಪ್ಲಾಸ್ಟಿಕ್ ) ಹೊದಿಕೆ ಹಾಕಿ ಕಳೆ ಬಾರದಂತೆ ನಿಂಬೆ ಮತ್ತು ನುಗ್ಗೆಯನ್ನು ಜೀವಾಮೃತ, ಬೀಜಾಮೃತ ಗೊಬ್ಬರವನ್ನು ನೇರವಾಗಿ ಸಸಿಗಳ ಬೇರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಸುಮಾರು 3 ಎಕರೆಯಲ್ಲಿ5*5 ಅಳತೆಯಲ್ಲಿಕಬ್ಬು ಬೆಳೆಯುತ್ತಿದ್ದಾರೆ. ಬಿಸಿಲು, ಗಾಳಿ, ಬೆಳಕು ಸಮ ಪ್ರಮಾಣದಲ್ಲಿಸಿಗುವುದರಿಂದ ಮತ್ತು ಚಿಕ್ಕ ಟ್ರಾಕ್ಟರ್ ಮೂಲಕ ಕಳೆ ತೆಗೆಯಲು ಅನುಕೂಲಕರವಾಗಿರುವುದರಿಂದ ಈ ವರ್ಷ, 195 ಟನ್ ಕಬ್ಬು ಕಟಾವು ಮಾಡಿದ್ದಾರೆ. ಜಮೀನಿನ ಸುತ್ತ ಸು.225 ತೆಂಗಿನ ಮರಗಳಿದ್ದು, ವರ್ಷಕ್ಕೆ 2 ಸಲ ಗಿಡಗಳನ್ನು ಸ್ವಚ್ಛ ಮಾಡಿಸುತ್ತಿದ್ದಾರೆ. ಸರಕಾರದ ಒಪ್ಪಿಗೆ ಪಡೆದು ಸು.800 ಸಾಗುವಾನಿ ಗಿಡಗಳನ್ನು 1 1/2 ಎಕರೆಯಲ್ಲಿಬೆಳೆಸಿದ್ದಾರೆ. ಸರಕಾರದ ಒಪ್ಪಿಗೆ ಪಡೆದು 250 ಮರಗಳನ್ನು 2025ರಲ್ಲಿಮಾರಾಟ ಮಾಡಿದ್ದಾರೆ. ಈ ರೀತಿ ಕೃಷಿ ಕ್ಷೇತ್ರದಲ್ಲಿಸಾಧನೆ ಮಾಡಿದ ಗೌರಮ್ಮ ಸಿದ್ದಲಿಂಗಯ್ಯ ಅವರಿಗೆ ಜಿಲ್ಲಾಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಲಭಿಸಿದೆ.
ಫೋಟೊ:ಎಚ್ ಪಿಟಿ12ದೇವರಾಜ05: ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದ ಗೌರಮ್ಮ ಸಿದ್ಧಲಿಂಗಯ್ಯ ಅವರಿಗೆ ರಾಜ್ಯ ಸರಕಾರ ವಿಜಯನಗರ ಜಿಲ್ಲಾಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಲಭಿಸಿದ್ದು, ಕಲಬುರಗಿಯ ಜೆಸ್ಟ್ ಕ್ಲಬ್ ನ ಸಭಾಂಗಣದಲ್ಲಿಮಂಗಳವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಪ್ರಶಸ್ತಿ ನೀಡಿ ಗೌರವಿಸಲಾಯಿತು.

