ಐಪಿಎಲ್ ನಲ್ಲಿಇತ್ತೀಚೆಗೆ ಪಂದ್ಯವೊಂದರ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡಗೌಟ್ ನಲ್ಲಿ‘ ವೇಪಿಂಗ್ ’ ಮಾಡುತ್ತಿರುವುದು ಕ್ಯಾಮೆರಾದಲ್ಲಿಸೆರೆಯಾಗಿರುಧಿವುದು ವಿವಾದಕ್ಕೆ ಕಾರಣಧಿವಾಗಿದೆ. ಇ-ಸಿಗರೇಟ್ ಅಥವಾ ಹೊಗೆಯನ್ನು ಬಿಡುಗಡೆಗೊಳಿಸುವ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದಕ್ಕೆ ವೇಪಿಂಗ್ ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಧಿಯಲ್ಲಿಎಲೆಕ್ಟ್ರಾನಿಕ್ ಸಾಧನವು ನಿಕೋಟಿನ್ ಮತ್ತು ಇತರ ರಾಸಾಯನಿಕಗಳನ್ನು ಒಳಧಿಗೊಂಡಿರುವ ದ್ರವವನ್ನು ಬಿಸಿ ಮಾಡಿ ಹೊರಧಿಸೂಸುವ ಆವಿಧಿಧಿಯನ್ನು ಒಳಧಿಗೆಳೆದುಧಿಕೊಳ್ಳಲಾಗುತ್ತದೆ. ಕ್ರಿಕೆಟ್ ಮೈದಾನ ಅಥವಾ ಡಗೌಟ್ ಧಿನಲ್ಲಿಧೂಮಪಾನ ಅಥವಾ ವೇಪಿಂಗ್ ಮಾಡುವುಧಿದನ್ನು ಐಸಿಸಿ ಮತ್ತು ಬಿಸಿಸಿಐ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದುದು ಎಂದು ಪರಿಗಣಿಸಲಾಗುತ್ತದೆ. ಇಂಥ ವರ್ತನೆಯು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿತವಾಗುತ್ತದೆ. ಪಂದ್ಯದ ವೇಳೆ ಇಂತಹ ಕೃತ್ಯಗಳಲ್ಲಿತೊಡಗಿದರೆ ಆಟಗಾರರಿಗೆ ಪಂದ್ಯದ ಶುಲ್ಕದಲ್ಲಿದಂಡ ಅಥವಾ ಎಚ್ಚರಿಕೆಯ ಶಿಕ್ಷೆ ನೀಡುವ ಅವಕಾಶವಿದೆ. ವೇಪಿಂಗ್ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಕ್ರೀಡಾಪಟುಗಳ ರಕ್ತದೊತ್ತಡ ಹೆಚ್ಚಿಸಿ, ಉಸಿರಾಟದ ಸಾಮರ್ಥ್ಯ ಕುಗ್ಗಿಸುತ್ತದೆ. ನಿಕೋಟಿನ್ ಅಂಶವು ಹೃದಯದ ಮೇಲೆ ಒತ್ತಡ ಹೇರುವುದರಿಂದ, ಫಿಟ್ನೆಸ್ ಅಗತ್ಯವಿರುವ ಕ್ರಿಕೆಟಿಗರಿಗೆ ಹಾನಿಕಾರಕ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

