ಚಿತ್ರ:12-5-ಬಿಡಿಆರ್ 8
ಬೀದರ್ ನ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿನಡೆದ ಬಿ.ಎ. ಮತ್ತು ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಹಾವಗಿರಾವ್ ಮೈಲಾರೆ ಮಾತನಾಡಿದರು.
ಹೆಣ್ಣುಮಕ್ಕಳು ಕುಟುಂಬ ಬೆಳಗುವ ಶಕ್ತಿಯಾಗಲಿ
ವಿಕಸುದ್ದಿಲೋಕ ಬೀದರ್
ಹೆಣ್ಣುಮಕ್ಕಳು ಕುಟುಂಬ ಬೆಳಗುವ ಶಕ್ತಿಯಾಗಬೇಕು ಎಂದು ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಹಾವಗಿರಾವ್ ಮೈಲಾರೆ ಹೇಳಿದರು. ನಗರದ ಶ್ರೀ ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿಮಂಗಳವಾರ ನಡೆದ ಬಿ.ಎ. ಹಾಗೂ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿಮಾತನಾಡಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ.ಆರ್ .ವಿ. ಗಂಗಶೆಟ್ಟಿ ಮಾತನಾಡಿ, ಶ್ರಮಜೀವಿಗಳು ಜೀವನದಲ್ಲಿಎಂದೂ ವಿಫಲವಾಗುವುದಿಲ್ಲಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗಪ್ಪ ಜಾನಕನೋರ ಹಾಗೂ ಶ್ರೀ ಚಂದ್ರಪ್ಪ ಗೌರಶೆಟ್ಟಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ ಮತ್ತು ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಲಕ್ಷತ್ರ್ಮಣ ಪೂಜಾರಿ ಮಾತನಾಡಿ, ಮಕ್ಕಳಿಗೆ ಭವಿಷ್ಯದ ಕುರಿತು ಸಲಹೆ ನೀಡಿದರು.
ಉಪನ್ಯಾಸಕರಾದ ಈಶ್ವರರೆಡ್ಡಿ, ರಾಜಶೇಖರ ಸಜ್ಜನ್ , ಡಾ.ಪಂಡಿತ, ದೇವೇಂದ್ರ ಪೂಜಾರಿ, ನಟರಾಜ್ ಸುತಾರ್ , ಬಸವರಾಜ ಬಿರಾದಾರ, ಡಾ.ಸಂಗಪ್ಪ ತೌಡಿ, ಡಾ.ಪ್ರವೀಣ್ , ಮಂಗಲಾ, ಶ್ರೀಲತಾ, ರಾಜಮ್ಮ ನೇಳಗೆ, ರಾಖಿ ಕಾಡಗೆ, ವಿಜಯಲಕ್ಷ್ಮೇ ಶೆಟಕಾರ್ , ಸಪ್ನಾ ಸ್ವಾಮಿ, ಅರ್ಚನಾ, ವಿಜಯಲಕ್ಷ್ಮೇ ಸ್ವಾಮಿ, ಸಿಬ್ಬಂದಿ ಮನೋಹರಶೆಟ್ಟಿ, ಆಕಾಶ್ , ಶೋಭಾ ಮತ್ತಿತರರು ಇದ್ದರು. ವಿದ್ಯಾರ್ಥಿನಿ ಕನಿಕರ ನಿರೂಪಿಸಿದರು. ವೈಷ್ಣವಿ ಸ್ವಾಗತಿಸಿದರು. ಶ್ವೇತಾ ವಂದಿಸಿದರು.

