ಪುಟ -2 ಲೀಡ್

Contributed byshubha.hegde@timesgroup.com|Vijaya Karnataka

ದೇಹಕ್ಕೆ ಬೇಕಾದ ಮೆಗ್ನಿಶಿಯಂ ಅನ್ನು ಪೂರಕ ಮಾತ್ರೆಗಳ ಬದಲು ಆಹಾರದಿಂದಲೇ ಪಡೆಯಬಹುದು. ಕುಂಬಳಕಾಯಿ ಬೀಜ, ಚಿಯಾ ಬೀಜ, ಬಾದಾಮಿ, ಪಾಲಕ್ ಸೊಪ್ಪು, ಗೋಡಂಬಿ, ಶೇಂಗಾ, ಕಪ್ಪು ಅವರೆಗಳಲ್ಲಿ ಮೆಗ್ನಿಶಿಯಂ ಅಧಿಕವಾಗಿದೆ. ಇದು ಒತ್ತಡ ಕಡಿಮೆ ಮಾಡುತ್ತದೆ, ನಿದ್ರೆಗೆ ಸಹಕಾರಿ, ಚಯಾಪಚಯಕ್ಕೆ ಮುಖ್ಯ, ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಸ್ನಾಯುಗಳ ಕಾರ್ಯಕ್ಷಮತೆ ಮತ್ತು ಮೂಳೆಗಳ ಸಾಂದ್ರತೆಗೂ ಇದು ಅಗತ್ಯವಾಗಿದೆ.

magnesium an essential nutrient for health and well being

ಮಾತ್ರೆಗಳಿಗಿಂತ ಆಹಾರವೇ ಮೇಲು

ಇಂಟ್ರೊ: ದೇಹಕ್ಕ ಅಗತ್ಯವಿರುವ ಮೆಗ್ನಿಶಿಯಂ ಅನ್ನು ನಿತ್ಯದ ಆಹಾರದಲ್ಲೇ ಪಡೆಯಬಹುದು. ಯಾವ ಆಹಾರದಲ್ಲಿಎಷ್ಟು ಮೆಗ್ನಿಶಿಯಂ ಪ್ರಮಾಣ ಇದೆ, ಯಾರು ಎಷ್ಟು ತೆಗೆದುಕೊಳ್ಳಬೇಕು ಎಂಬ ವಿವರ ಇಲ್ಲಿದೆ.

ಲವಲವಿಕೆ ಸುದ್ದಿಲೋಕ

ಇತ್ತೀಚಿನ ದಿನಗಳಲ್ಲಿಪೂರಕ ಆಹಾರಗಳ ಪೋಷಕಾಂಶಗಳನ್ನು ಪಡೆಯುವ ಟ್ರೆಂಡ್ ಹೆಚ್ಚುತ್ತಿದೆ. ಇವು ದೇಹಕ್ಕೆಯಾವುದೇ ಪ್ರಯೋಜನ ನೀಡದೆ ಇರಬಹುದು ಅಥವಾ ಸೀಮಿತ ವ್ಯಾಪ್ತಿಗೆ ಒಳಗಾಗಬಹುದು. ದೇಹದ ಪ್ರಮುಖ ಕಾರ್ಯ ನಿರ್ವಹಿಸುವ ಮೆಗ್ನಿಶಿಯಂ ಕೂಡ ಇಂದು ಸಾಕಷ್ಟು ಬಗೆಯ ಪೂರಕಗಳಲ್ಲಿಲಭ್ಯ. ಆದರೆ ಇದನ್ನು ಪೂರಕಗಳ ರೂಪದಲ್ಲಿಪಡೆಯುವ ಬದಲು ನೈಸರ್ಗಿಕವಾಗಿ ಆಹಾರ ಪದಾರ್ಥಗಳ ಮೂಲಕವೇ ಕೊರತೆಯನ್ನು ನೀಗಿಸಿಕೊಳ್ಳಬಹುದು.

ನಮ್ಮ ದೇಹವು ಮ್ಯಾಗ್ನಿಶಿಯಂ ಅನ್ನು ಶೇಖರಿಸಿಟ್ಟುಕೊಳ್ಳುವ ಅದ್ಭುತ ಸಾಮಥ್ಯ ಹೊಂದಿದೆ. ಆದರೆ, ನಿಮ್ಮ ಆಹಾರದಲ್ಲಿಮ್ಯಾಗ್ನಿಶಿಯಂ ಪ್ರಮಾಣ ಕಡಿಮೆಯಿದ್ದರೆ, ಅದು ಮುಂದೆ ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ತಂದೊಡ್ಡಬಹುದು ಎನ್ನುವ ಆಹಾರ ತಜ್ಞರು ನಿಯಮಿತವಾದ ಆಹಾರದಲ್ಲೇ ದೇಹಕ್ಕೆ ಅಗತ್ಯ ಮ್ಯಾಗ್ನಿಶಿಯಂ ಸಿಗುತ್ತದೆ ಎನ್ನುತ್ತಾರೆ ಆಹಾರ ತಜ್ಞರು.

ಪ್ರಯೋಜನ

ಕಡಿಮೆ ಒತ್ತಡ, ಗಾಢ ನಿದ್ರೆ: ಇದು ನರಮಂಡಲವನ್ನು ಶಾಂತವಾಗಿರಿಸುತ್ತದೆ ಮತ್ತು ಒತ್ತಡವನ್ನು ನಿಯಂತ್ರಿಸುತ್ತದೆ. ನಿದ್ರೆಗೆ ಸಹಕಾರಿಯಾದ ’ಮೆಲಟೋನಿನ್ ’ ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಚಯಾಪಚಯ: ಜೀವಕೋಶಗಳಲ್ಲಿಶಕ್ತಿಯನ್ನು ಉತ್ಪಾದಿಸಲು ಮತ್ತು ಬಳಸಲು ಇದು ಅಗತ್ಯ. ಗ್ಲೂಕೋಸ್ ಮತ್ತು ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸಲು ನೆರವಾಗುತ್ತದೆ.

ಹೃದಯದ ಆರೋಗ್ಯ: ಇದು ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ. ಇನ್ಸುಲಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸ್ನಾಯುಗಳ ಕಾರ್ಯಕ್ಷಮತೆ: ಸ್ನಾಯುಗಳ ಸೆಳೆತವನ್ನು ತಡೆದು ಅವು ಸುಲಭವಾಗಿ ಚಲಿಸಲು ನೆರವಾಗುತ್ತದೆ. ಶರೀರದ ಸಮತೋಲನ ಮತ್ತು ಚಲನವಲನಕ್ಕೆ ಇದು ಮುಖ್ಯ.

ಮೂಳೆಗಳ ಸಾಂದ್ರತೆ: ನಮ್ಮ ದೇಹದಲ್ಲಿರುವ ಒಟ್ಟು ಮ್ಯಾಗ್ನಿಶಿಯಂನಲ್ಲಿಶೇ.60ರಷ್ಟು ಮೂಳೆಗಳಲ್ಲೇ ಇರುತ್ತದೆ. ಇದು ಮೂಳೆಗಳ ರಚನೆ ಮತ್ತು ಅವುಗಳ ದೃಢತೆಯನ್ನು ಕಾಪಾಡುತ್ತದೆ.

ದೈನಂದಿನ ಅಗತ್ಯ ಪ್ರಮಾಣ

19 ರಿಂದ 30 ವರ್ಷ

ಪುರುಷರು

400ಎಂಜಿ

ಮಹಿಳೆಯರು

310ಎಂಜಿ

31 ವರ್ಷ ಮೇಲ್ಪಟ್ಟವರು

ಪುರುಷರು

420 ಎಂಜಿ

ಮಹಿಳೆಯರು

320ಎಂಜಿ

ಗರ್ಭಿಣಿಯರಿಗೆ

350ಎಂಜಿ

ಮ್ಯಾಗ್ನಿಶಿಯಂ ಆಹಾರ ನಿತ್ಯ ಬೇಕಾದ ಪ್ರಮಾಣ

ಕುಂಬಳಕಾಯಿ ಬೀಜ 1 ಔಸ್ಸ್ 156ಎಂಜಿ ಶೇ. 37

ಚಿಯಾ ಬೀಜಗಳು 1 ಔಸ್ಸ್ 111 ಎಂಜಿ ಶೇ.26

ಹುರಿದ ಬಾದಾಮಿ 1 ಔಸ್ಸ್ 80 ಎಂಜಿ ಶೇ.19

ಬೇಯಿಸಿದ ಪಾಲಕ್ 1/2 ಕಪ್ 78ಂಎಂಜಿ ಶೇ.19

ಹುರಿದ ಗೋಡಂಬಿ 1 ಔಸ್ಸ್ 74 ಶೇ.18

ಹುರಿದ ಶೇಂಗಾ 1/4 ಕಪ್ 63 ಶೇ. 15

ಬೇಯಿಸಿದ ಕಪ್ಪು ಅವರೆ/ಹುರುಳಿ 1/2 ಕಪ್ 60ಎಂಜಿ ಶೇ.14