ಔಟ್ ಆಫ್ ಸಿಲಬಸ್

Contributed byHarsha Vardhana|Vijaya Karnataka

ಪಾಕಿಸ್ತಾನದ ಬೌಲರ್‌ ಉಸ್ಮಾನ್‌ ತಾರಿಖ್‌ ಅವರ ವಿವಾದಾತ್ಮಕ ಬೌಲಿಂಗ್‌ ಶೈಲಿ ಚರ್ಚೆಯಲ್ಲಿದೆ. ಆರ್‌.ಅಶ್ವಿನ್‌ ಬೌಲರ್‌ಗಳ ಮೇಲಿನ ನಿರ್ಬಂಧಗಳ ಬಗ್ಗೆ ಪ್ರಶ್ನಿಸಿದ್ದಾರೆ. ಬಾಂಗ್ಲಾದೇಶ ಸರಕಾರ ಟಿ20 ವಿಶ್ವಕಪ್‌ ಬಹಿಷ್ಕಾರ ತಮ್ಮ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದೆ. ಮುಸ್ತಾಫಿಜುರ್‌ ರಹಮಾನ್‌ ಐಪಿಎಲ್‌ನಿಂದ ಹೊರಗುಳಿದಿದ್ದು, ಭದ್ರತೆಯ ಕಾರಣಕ್ಕೆ ಶ್ರೀಲಂಕಾದಲ್ಲಿ ಪಂದ್ಯ ನಡೆಸುವ ಬೇಡಿಕೆ ತಿರಸ್ಕೃತಗೊಂಡಿದೆ.

pak bowler usman tarik in the controversy spotlight again

ಪಾಕ್ ಬೌಲರ್ ನೆರವಿಗೆ ಅಶ್ವಿನ್ ವಿವಾದಾತ್ಮಕ ಬೌಲಿಂಗ್ ಶೈಲಿಗೆ ಹೆಸರಾದ ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಖ್ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಚೆಂಡು ಎಸೆಯುವ ಕೋನ ಮತ್ತು ಎಸೆಯುವ ಮುನ್ನ ತೆಗೆದುಕೊಳ್ಳುವ ಒಂದು ಕ್ಷಣದ ಬಿಡುವಿನ ಶೈಲಿಯಿಂದ ಅವರು ಚರ್ಚೆಗೆ ಗ್ರಾಸವಾಗಿದ್ದಾರೆ. ವಾಸಿಮ್ ಅಕ್ರಂ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಉಸ್ಮಾನ್ ರನ್ನು ಆಡಿಸುವ ತಂಡದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಪರಿಣತರು ಫುಟ್ಬಾಲ್ ನಲ್ಲಿಪೆನಾಲ್ಟಿ ಶೂಟೌಟ್ ಸಮಯದಲ್ಲಿಯೂ ಆಟಗಾರ ಓಡಿ ಬಂದು ಚೆಂಡು ಕಿಕ್ ಮಾಡುವ ಮುನ್ನ ಬಿಡುವು ತೆಗೆದುಕೊಳ್ಳುವುದನ್ನು ಅನುಮತಿಸಿಲ್ಲ. ಹೀಗಿರುವಾಗ ಕ್ರಿಕೆಟ್ ನಲ್ಲಿಯೂ ಬೌಲಿಂಗ್ ಎಸೆಯುವಾಗ ಮಧ್ಯದಲ್ಲಿಸ್ವಲ್ಪ ತಡ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಆರ್ .ಅಶ್ವಿನ್ ‘‘ಬ್ಯಾಟರ್ ಗಳು ರಿವರ್ಸ್ ಬ್ಯಾಟಿಂಗ್ ಸೇರಿದಂತೆ ವಿಚಿತ್ರ ಭಂಗಿಗಳಲ್ಲಿಬ್ಯಾಟ್ ಮಾಡಲು ಯಾರ ಅನುಮತಿಯೂ ಬೇಕಿಲ್ಲ. ಹಾಗಿರುವಾಗ ಬೌಲರ್ ಗಳಿಗೆ ಮಾತ್ರವೇ ಯಾಕೆ ಕಟ್ಟುಪಾಡುಗಳು?’’ ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ. ಆಟಗಾರರನ್ನೇ ದೂಷಿಸಿದ

ಬಾಂಗ್ಲಾದೇಧಿಶ ಸರಕಾರ ‘‘ಟಿ20 ವಿಶ್ವಕಪ್ ನಲ್ಲಿಪಾಲ್ಗೊಳ್ಳದಿರುವ ನಿರ್ಧಾರವನ್ನು ತಾನು ಕೈಗೊಂಡಿಲ್ಲ. ಅದು ಬಾಂಗ್ಲಾಆಟಗಾರರು ಮತ್ತು ಬಾಂಗ್ಲಾಕ್ರಿಕೆಟ್ ಮಂಡಳಿಯ(ಬಿಸಿಬಿ) ನಿರ್ಧಾರ,’’ ಎಂದು ಬಾಂಗ್ಲಾದೇಶದ ಸರಕಾರದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಾಂಗ್ಲಾಆಟಗಾರ ಮುಸ್ತಾಫಿಜುರ್ ರಹಮಾನ್ ರನ್ನು ಐಪಿಎಲ್ ನಿಂದ ಹೊರಗಿಟ್ಟ ಕಾರಣಕ್ಕೆ ಬಿಸಿಬಿ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಲ್ಲದೆ, ಭದ್ರತೆಯ ಕಾರಣದಿಂದ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿನಡೆಸುವಂತೆ ಬೇಡಿಕೆ ಸಲ್ಲಿಸಿತ್ತು. ಆಗ ಆಸಿಫ್ ನಜ್ರುಲ್ ಅವರೇ ಇದು ಬಾಂಗ್ಲಾಸರಕಾರದ ತೀರ್ಮಾನ ಎಂದು ತಿಳಿಸಿದ್ದರು. ಬಾಂಗ್ಲಾತನ್ನ ಬೇಡಿಕೆ ಕೈಬಿಡದೇ ಇದ್ದಾಗ ಅದರ ಸ್ಥಾನವನ್ನು ಐಸಿಸಿ ಸ್ಕಾಟ್ಲೆಂಡ್ ಗೆ ನೀಡಿತು.