ಬೆಂಗಳೂರು: ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆ ಭಾಗವಾಗಿರುವ ಧಾರ್ಮಿಕ ಅಸ್ಮಿತೆಯನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ, ನಟ ಕೆ.ಸುಚೇಂದ್ರ ಪ್ರಸಾದ್ ತಿಳಿಸಿದರು.
ವಳಗೇರಹಳ್ಳಿ ಸಿದ್ಧಿ ವಿನಾಯಕ ದೇವಾಲಯದ ಎರಡನೇ ವರ್ಷದ ವಾರ್ಷಿಕ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಕೃತಿ ಕಲಾ ಉತ್ಸವದಲ್ಲಿಪಾಲ್ಗೊಂಡು ಅವರು ಮಾತನಾಡಿದರು.
ಸಿದ್ಧಿ ವಿನಾಯಕ ಸಾರ್ವಜನಿಕ ಸೇವಾ ಟ್ರಸ್ಟಿನ ಅಧ್ಯಕ್ಷ ಎನ್ . ಕದರಪ್ಪ ಮಾತನಾಡಿದರು. ಅಗಸ್ತ್ಯ ವಿದ್ಯಾನಿಕೇತನ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಕೆಎಂ. ವಿನುತಾ, ಟ್ರಸ್ಟ್ ಪದಾಧಿಕಾರಿಗಳಾದ ಯದು ನಂದನ್ , ರೂಪಾ ರಾಜೇಶ್ , ವಿನಯ್ ಹೆಗಡೆ , ಮೈನಾ, ಎಸ್ .ಆರ್ ಮೋಹನ್ ಕುಮಾರ್ ಉಪಸ್ಥಿತರಿದ್ದರು.
ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಂಗೀತ ಕಟ್ಟಿ ಅವರಿಂದ ಭಕ್ತಿ ಗೀತೆ ಗಾಯನ ಮತ್ತು ಕುಮಾರಿ ಮಧುಲಿಕ ತಂಡದವರಿಂದ ಜೀವ ಜಲ ನೃತ್ಯ ರೂಪಕ ನಡೆಯಿತು.
**
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ, ನಟ ಕೆ.ಸುಚೇಂದ್ರ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

