ದಿನಭವಿಷ್ಯ 13 ಮೇ 2026
ಶ್ರೀಪತಿ ಭಟ್ | ಬೆಂಗಳೂರು
(ಮಿಥುನ, ಕನ್ಯಾ, ಮೀನ-ಈ ರಾಶಿಯವರಿಗೆ ಅಷ್ಟ ಗ್ರಹಯೋಗ )
---------------
ಮೇಷ : ಆಡುವ ಮಾತಿನ ಬಗ್ಗೆ ನಿಗಾ ಇರಲಿ. ನಿಮ್ಮ ಮಾತನ್ನು ನೀವೇ ಸಾಧಿಸಿ ತೋರಿಸಬೇಕಾಗುತ್ತದೆ. ಆಸ್ತಿ ಖರೀದಿ ಬಗ್ಗೆ ಯೋಜನೆ ಮಾಡಬಹುದು. ಇಂದಿನ ಯೋಜಿತ ಕಾರ್ಯದಲ್ಲಿವ್ಯತ್ಯಾಸ ಉಂಟಾಗಲಿದೆ.
(ಶುಭ ಸಂಖ್ಯೆ: 2, ಅದೃಷ್ಟ ಬಣ್ಣ : ಕಪ್ಪು)
---------------------
ವೃಷಭ : ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆಯ ಜೊತೆಯಲಿ ಗೋಪ್ಯವಾದ ವಿಚಾರದ ಸುಳಿವು ದೊರಕುವುದು. ಇತರರಲ್ಲಿನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತವಾದ ಸಮಯ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಬಿಳಿ)
----------
ಮಿಥುನ : ಪ್ರಯತ್ನ, ಆತ್ಮವಿಶ್ವಾಸಕ್ಕೆ ಸಮನಾದ ಉತ್ತಮ ಫಲ ನಿಶ್ಚಿತವಿದ್ದರೂ ಸದ್ಯದ ಪರಿಸ್ಥಿತಿಯಲ್ಲಿಹೊಂದಾಣಿಕೆಯ ಅಗತ್ಯವಿದೆ. ಹೋಟೆಲ್ ಉದ್ಯಮಿಗಳಿಗೆ ವ್ಯಾಪಾರದಲ್ಲಿಅನುಕೂಲವಾಗುತ್ತದೆ. ವಿಜ್ಞಾನಿಗಳಿಗೆ ಅನಿರೀಕ್ಷಿತ ಯಶಸ್ಸು ದೊರೆಯುತ್ತದೆ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಕೆಂಪು)
------------
ಕರ್ಕ: ಸಾಮರ್ಥ್ಯ, ಸೃಜನಶೀಲತೆ ಪ್ರದರ್ಶಿಸಲು ಅವಕಾಶಗಳು ಒದಗಿ ಬರುವುವು. ಮಾನಸಿಕ ಸ್ಥಿತಿ ಹತೋಟಿಯಲ್ಲಿಇಟ್ಟುಕೊಳ್ಳುವುದು ಕಷ್ಟವಾಗಲಿದೆ. ಸಾಲ ಮರುಪಾವತಿಯಾಗಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಹಳದಿ)
-----------
ಸಿಂಹ : ಮನೆಯಲ್ಲಿನ ವ್ಯವಹಾರಗಳಲ್ಲಿಸಕರಾತ್ಮಕ ಪ್ರತಿಕ್ರಿಯೆಗಳನ್ನು ಕಾಣುವಿರಿ. ಹವ್ಯಾಸಿ ಛಾಯಾಗ್ರಾಹಕರಿಗೆ ಉತ್ತಮ ಅವಕಾಶಗಳು ಸಿಗುವುದು. ವೈದ್ಯರಿಗೆ ವೃತ್ತಿಯಲ್ಲಿಸವಾಲೆನಿಸುವ ವಿಷಯಗಳಲ್ಲಿಯಶಸ್ಸು ಸಿಗಲಿದೆ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಹಸಿರು)
----
ಕನ್ಯಾ : ಬ್ಯಾಂಕ್ ನ ಉನ್ನತ ಅಧಿಕಾರಿಗಳಿಗೆ ಹೊರ ರಾಜ್ಯಗಳಿಗೆ ವರ್ಗಾವಣೆ ಸಾಧ್ಯತೆಯಿದೆ. ಸಂಗಡಿಗರು ಮಾಡಿದ ತಪ್ಪಿನಿಂದ ನೀವು ಹೊಸ ನಿರ್ಧಾರ ಕೈಗೊಳ್ಳಬೇಕಾಗುವುದು. ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭವಾಗುವುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ನೀಲಿ)
----------
ತುಲಾ : ರಾಜಕಾರಣಿಗಳು ಚುನಾವಣಾ ದೃಷ್ಟಿಯಿಂದ ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿ. ಉದ್ಯೋಗಾಕಾಂಕ್ಷಿಗಳಿಗೆ ಪ್ರಭಾವಿ ವ್ಯಕ್ತಿಗಳ ಆಶ್ವಾಸನೆ ಸಿಗಲಿದೆ. ಅನಾರೋಗ್ಯ ಉಂಟಾಗಬಹುದು.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬೂದು)
-----------
ವೃಶ್ಚಿಕ : ಯಂತ್ರೋಪಕರಣ ಅಥವಾ ಕಾರ್ಖಾನೆ ಮೊದಲಾದ ಕೆಲಸಗಳಲ್ಲಿಇರುವವರಿಗೆ ಹೆಚ್ಚಿನ ಧನ ಲಾಭವಿರುವುದು. ಹಣಕಾಸಿನ ವ್ಯಾಮೋಹ, ಬಯಕೆ ಪಶ್ಚಾತ್ತಾಪಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ.
(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಗುಲಾಬಿ)
-----------
ಧನು : ನಿಮ್ಮ ಪ್ರೀತಿ-ಪಾತ್ರರೊಂದಿಗೆ ಹೊಸ ಯೋಜನೆಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸುವಿರಿ. ಸುಗಂಧ ದ್ರವ್ಯ ಮತ್ತು ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಲಾಭದಾಯಕ ದಿನ. ಅವಕಾಶವನ್ನು ಸದುಪಯೋಗಿಸಿಕೊಳ್ಳಿ.
(ಶುಭ ಸಂಖ್ಯೆ :9, ಅದೃಷ್ಟ ಬಣ್ಣ : ಕಿತ್ತಳೆ)
----------
ಮಕರ: ವೃತ್ತಿಯಲ್ಲಿಸಾಕಷ್ಟು ಪೈಪೋಟಿಗಳನ್ನು ಎದುರಿಸಬೇಕಾಗುತ್ತದೆ. ಕುಲದೇವರ ದರ್ಶನದಿಂದ ಒಳಿತಾಗಲಿದೆ. ಹಿರಿಯರ ಮಾರ್ಗದರ್ಶನದಂತೆ ನಡೆದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಕೇಸರಿ)
--------
ಕುಂಭ : ಹಲವಾರು ಕಾರಣಗಳಿಗೆ ಸ್ನೇಹಿತರು ನಿಮ್ಮ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸುವಂತಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಹೆಚ್ಚಿನ ಅಧ್ಯಯನ ಅಗತ್ಯವಾಗುತ್ತದೆ.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಪಚ್ಚೆ)
---------
ಮೀನ: ಸಿಬ್ಬಂದಿ ವರ್ಗದ ವಿಶ್ವಾಸ ಗಳಿಸಿದರೆ ನೀವಂದುಕೊಂಡ ರೀತಿ ಕೆಲಸಗಳು ನಡೆಯಲಿವೆ. ಮಗಳ ಆರೋಗ್ಯ ಸಮಸ್ಯೆ ನಿಮ್ಮ ನಿದ್ದೆಯನ್ನು ಕೆಡಿಸುತ್ತದೆ. ವಿರೋಧಿಗಳ ಉಪಟಳದ ನಡುವೆ ಬದುಕಲು ಕಷ್ಟವಾಗಲಿದೆ.
(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಆಲೀವ್ )

